2 ಮಕ್ಕಳ ತಂದೆ ಜಾವೇದ್ ಅಖ್ತರ್‌ನನ್ನು ವರಿಸಲು ತಂದೆ ವಿರೋಧ ಕಟ್ಟಿಕೊಂಡ ಶಬಾನಾ!

First Published Sep 18, 2022, 5:37 PM IST

ಬಾಲಿವುಡ್‌ನ ಟ್ಯಾಲೆಂಟೆಡ್‌ ನಟಿಯರಲ್ಲಿ ಶಬಾನಾ ಅಜ್ಮಿ (Shabana Azmi) ಅವರ ಹೆಸರು ಯಾವಗಾಲೂ ಇರುತ್ತದೆ ಅವರು ಇಂದು 72 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, ಸೆಪ್ಟೆಂಬರ್ 18 ರಂದು. 1950 ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಶಬಾನಾ ಅವರ ಮನೆಯಲ್ಲಿ ಮೊದಲಿನಿಂದಲೂ ಸಿನಿಮಾ ವಾತಾವರಣ ಇತ್ತು ಮತ್ತು ಇದರಿಂದ ಶಬಾನಾ ನಟನಾ ಕ್ಷೇತ್ರದ ಕಡೆ ಒಲವು ಬೆಳೆಸಿಕೊಂಡರು. ಹೆಚ್ಚು ಕಲಾತ್ಮಕ ಚಿತ್ರಗಳಲ್ಲಿ (Art Movies) ಮಾತ್ರ ಕೆಲಸ ಮಾಡಿರುವ ಶಬಾನಾ ಅವರು ಅನೇಕ ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು (National Award) ಪಡೆದಿದ್ದಾರೆ. ಅವರು 1974 ರ ಅಂಕುರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಶಬಾನಾ ಪರ್ಸನಲ್‌ ಲೈಫ್‌ (Personal Life) ಕೂಡ ಸಖತ್‌ ಫೇಮಸ್‌. ಅವರು ಜಾವೇದ್ ಅಖ್ತರ್ ಕಡೆ ತುಂಬಾ ಆಕರ್ಷಿತರಾಗಿದ್ದರು, ವಿವಾಹಿತ ಮತ್ತು ಎರಡು ಮಕ್ಕಳ ತಂದೆ ಜಾವೇದ್ ಅಖ್ತರ್ ಅವರನ್ನು ಮದುವೆಯಾಗಲು ಬಯಸಿದ್ದರು. ಇದಕ್ಕಾಗಿ ಅವನು ತನ್ನ ತಂದೆಯ ವಿರುದ್ಧವೇ ಬಂಡಾಯವೆದ್ದರು. ಶಬಾನಾ ಅಜ್ಮಿ ಮತ್ತು ವಿವಾಹಿತ ಜಾವೇದ್ ಅಖ್ತರ್ ನಡುವಿನ ಆತ್ಮೀಯತೆ ಹೇಗೆ ಬೆಳೆಯಿತು ಎಂಬುದನ್ನು ಕೆಳಗೆ ಓದಿ.

ಜಾವೇದ್ ಅಖ್ತರ್ ಶಬಾನಾಳ ತಂದೆ ಕೈಫಿ ಅಜ್ಮಿ ಅವರಿಂದ ಬರವಣಿಗೆ ಕಲಿಯುತ್ತಿದ್ದ  ದಿನಗಳಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಆದರೆ, ಜಾವೇದ್ ಆಗಲೇ ಮದುವೆಯಾಗಿ 2 ಮಕ್ಕಳ ತಂದೆಯಾಗಿದ್ದರು. ಜಾವೇದ್ ಮತ್ತು ಶಬಾನಾ ನಡುವೆ ಬೆಳೆಯುತ್ತಿರುವ ನಿಕಟತೆಯ ಮಾಹಿತಿಯು ಜಾವೇದ್ ಅವರ ಪತ್ನಿ ಹನಿ ಇರಾನಿಗೆ ತಲುಪಿದಾಗ ಇಬ್ಬರ ನಡುವೆ ಜಗಳ ಶುರುವಾಯಿತು.

ಮಕ್ಕಳಾದ ಜೋಯಾ ಮತ್ತು ಫರ್ಹಾನ್ ಅಖ್ತರ್ ಕಾರಣದಿಂದ ಜಾವೇದ್ ಹನಿಯನ್ನು ಬಿಡಲು ಇಷ್ಟಪಡಲಿಲ್ಲ. ಪರಸ್ಪರ ಜಗಳದಿಂದ ಮನೆ ವಾತಾವರಣ ಹದಗೆಡಲು ಪ್ರಾರಂಭಿಸಿತು. ದಿನವೂ ಮನೆಯಲ್ಲಿ ಜಗಳ ನಡೆಯುತ್ತಿದ್ದರಿಂದ ಬೇಸತ್ತು ಒಂದು ದಿನ ಹನಿ ಇರಾನಿ ತನ್ನ ಪತಿ ಜಾವೇದ್ ಅಖ್ತರ್‌ಗೆ ಶಬಾನಾ ಬಳಿ ಹೋಗಲು ಅವಕಾಶ ಮಾಡಿಕೊಟ್ಟರಂತೆ. 

ನಂತರ ಜಾವೇದ್ ಹನಿಗೆ ವಿಚ್ಛೇದನ ನೀಡಿ ಶಬಾನಾರನ್ನು ವಿವಾಹವಾದರು. ಆದರೆ, ಜಾವೇದ್ ಅಖ್ತರ್ ರನ್ನು ಮದುವೆಯಾಗುವುದು ಶಬಾನಾಗೆ ಸುಲಭವಾಗಿರಲಿಲ್ಲ. ಇದಕ್ಕೆ ಕಾರಣ ಅವರ ತಂದೆ ಕೈಫಿ ಅಜ್ಮಿ. ಕೈಫಿಗೆ ತನ್ನ ಮಗಳು ವಿವಾಹಿತ ವ್ಯಕ್ತಿಯನ್ನು ಮದುವೆಯಾಗುವುದು ಇಷ್ಟವಿರಲಿಲ್ಲ.

ಆದರೆ ಜಾವೇದ್ ಅಖ್ತರ್‌ ಪ್ರೀತಿಯಲ್ಲಿ ಶಬಾನಾ ಅಜ್ಮಿ ತನ್ನ ತಂದೆ ವಿರುದ್ಧ ಬಂಡಾಯವೆದ್ದರು. ಜಾವೇದ್‌ನನ್ನು ಮದುವೆಯಾಗಲು ಹಟ
ಹಿಡಿದರು. ಅಂತಿಮವಾಗಿ, ತಂದೆ ಕೈಫಿ ಅಜ್ಮಿ ಮಗಳ ಒತ್ತಾಯದ ಮುಂದೆ ತಲೆ ಬಾಗಬೇಕಾಯಿತು.
 

ನಂತರ ಶಬಾನಾ-ಜಾವೇದ್ 1984 ರಲ್ಲಿ ವಿವಾಹವಾದರು. ಮದುವೆಯಾಗಿ ಇಷ್ಟು ವರ್ಷ ಕಳೆದರೂ ಈ ದಂಪತಿಗೆ ಮಕ್ಕಳಾಗಿಲ್ಲ. ಆದಾಗ್ಯೂ, ಶಬಾನಾ ಜಾವೇದ್ ಅವರ ಮಕ್ಕಳಾದ  ಫರ್ಹಾನ್ ಮತ್ತು ಜೋಯಾ ಅಖ್ತರ್ ಇಬ್ಬರೊಂದಿಗೆ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
 

ಅಂದಹಾಗೆ, ಜಾವೇದ್ ಅಖ್ತರ್‌ಗಿಂತ ಮೊದಲು ಶಬಾನಾ ನಿರ್ದೇಶಕ ಶೇಖರ್ ಕಪೂರ್ ಅವರನ್ನು ಪ್ರೀತಿಸುತ್ತಿದ್ದರು, ಆದರೆ  ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಇಬ್ಬರೂ ದೂರವಾದರು.

ಶಬಾನಾ ತನ್ನ ವೃತ್ತಿಜೀವನದಲ್ಲಿ (Career) ಆ ಕಾಲದ  ಪ್ರತಿಯೊಬ್ಬ ಬಾಲಿವುಡ್ ಸೂಪರ್‌ಸ್ಟಾರ್‌ನೊಂದಿಗೆ ಪರದೆ ಹಂಚಿ ಕೊಂಡಿದ್ದಾರೆ. ಅವರು ಅಮಿತಾಬ್ ಬಚ್ಚನ್, ಶಶಿ ಕಪೂರ್, ವಿನೋದ್ ಖನ್ನಾ, ಸಂಜೀವ್ ಕುಮಾರ್, ಜಿತೇಂದ್ರ, ವಿನೋದ್ ಮೆಹ್ರಾ, ಶತ್ರುಘ್ನ ಸಿನ್ಹಾ ಸೇರಿದಂತೆ ಇತರ ಸ್ಟಾರಸ್‌ ಜೊತೆ ಕೆಲಸ ಮಾಡಿದರು.

click me!