ತಾಯಿಯಾಗುವ ಬಯಕೆ ಈಡೇರಿಸಿಕೊಳ್ಳದ Bollywood ಸ್ಟಾರ್ಸ್!

First Published Sep 18, 2022, 4:38 PM IST

ಬಾಲಿವುಡ್ ನ ಹಿರಿಯ ನಟಿ ಶಬಾನಾ ಅಜ್ಮಿ (Shabana Azmi) ಅವರಿಗೆ 72 ವರ್ಷ ತುಂಬಿದೆ. 18 ಸೆಪ್ಟೆಂಬರ್ 1950 ರಂದು ಹೈದರಾಬಾದ್‌ನಲ್ಲಿ ಜನಿಸಿದ ಶಬಾನಾ 1984 ರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್ ಅವರನ್ನು ವಿವಾಹವಾದರು. ಇದು ಜಾವೇದ್ ಅವರ ಎರಡನೇ ಮದುವೆಯಾಗಿತ್ತು. ಆದರೆ, ಮದುವೆಯ ನಂತರ ಶಬಾನಾ ತಾಯಿಯಾಗಲು ಸಾಧ್ಯವೇ ಆಗಲಿಲ್ಲ. ಅಂದಹಾಗೆ, ಮದುವೆಯ ನಂತರ ತಾಯಿಯಾಗಲು ಸಾಧ್ಯವಾಗದ ನಟಿ ಶಬಾನಾ ಅಜ್ಮಿ ಮಾತ್ರವಲ್ಲ, ಇನ್ನೂ ಅನೇಕ ನಟಿಯರಿದ್ದಾರೆ 

ವೈದ್ಯಕೀಯ ಕಾರಣಗಳಿಂದ ಶಬಾನಾ ಅಜ್ಮಿ ಎಂದಿಗೂ ತಾಯಿಯಾಗಲು ಸಾಧ್ಯವಿಲ್ಲ. ಆದರೆ, ಕೆಲವು ವರದಿಗಳಲ್ಲಿ ಅವರೇ ಸ್ವಂತ ಮಕ್ಕಳ ಬೇಡ ಎಂದು ನಿರ್ಧರಿಸಿದ್ದರು ಎಂದೂ ಹೇಳಲಾಗಿದೆ.

ಮೀನಾ ಕುಮಾರಿ 1952 ರಲ್ಲಿ ನಿರ್ದೇಶಕ ಮತ್ತು ಚಿತ್ರಕಥೆಗಾರ ಕಮಲ್ ಅಮ್ರೋಹಿ ಅವರನ್ನು ವಿವಾಹವಾದರು. 15 ವರ್ಷ ಹೆಚ್ಚು ವಯಸ್ಸಿನವರನ್ನು ಮೀನಾ ವರಿಸಿದ್ದರು. ಆದರೆ, ಮೀನಾಗೆ ತಾಯಿಯಾಗಲು ಸಾಧ್ಯವಾಗಲಿಲ್ಲ. ಕಮಲ್ ಅಮ್ರೋಹಿ ಅವರ ಮೊದಲ ಮದುವೆಯಿಂದ ಮಕ್ಕಳಿದ್ದರು. ಅವರು ಮೀನಾ ಕುಮಾರಿಯಿಂದ ಮಕ್ಕಳನ್ನು ಬಯಸಲಿಲ್ಲ ಎಂದು ಹೇಳಲಾಗುತ್ತದೆ. ನಂತರ ಅವರು  ಹೊಂದಾಣಿಕೆ ಕೊರತೆಯಿಂದ ವಿಚ್ಛೇದನ ಪಡೆದರು.

ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ಮಧುಬಾಲಾ 1960 ರಲ್ಲಿ ಕಿಶೋರ್ ಕುಮಾರ್ ಅವರನ್ನು ವಿವಾಹವಾದರು. ಕಿಶೋರ್‌ಗಿದು ಎರಡನೇ ಮದುವೆ. ಮಧುಬಾಲಾ ಅವರಿಗೆ ಮಕ್ಕಳಿರಲಿಲ್ಲ. ಅವರು 1969 ರಲ್ಲಿ ಅವರು ಕೊನೆಯುಸಿರೆಳೆದರು.

ನಟಿ ಸಾಧನಾ ಶಿವದಾಸನಿ ತಾಯಿಯಾಗಲೇ ಇಲ್ಲ. ಅವರು 1966 ರಲ್ಲಿ ಚಲನಚಿತ್ರ ನಿರ್ದೇಶಕ ಮತ್ತು ಸ್ಕ್ರಿಪ್ಟ್ ರೈಟರ್ RK ನಯ್ಯರ್ ಅವರನ್ನು ವಿವಾಹವಾದರು. ನಯ್ಯರ್ 1995 ರಲ್ಲಿ ನಿಧನರಾದರು. 2015ರಲ್ಲಿ ಸಾಧನಾ ಜಗತ್ತಿಗೆ ವಿದಾಯ ಹೇಳಿದರು.

ನಟಿ ಮತ್ತು ನರ್ತಕಿ ಹೆಲೆನ್ ಎರಡು ಮದುವೆಗಳನ್ನು ಆದರು. ಆದರೆ ಅವಳು ತಾಯಿಯಾಗಲಿಲ್ಲ. 1957 ರಲ್ಲಿ ನಿರ್ದೇಶಕ ಪ್ರೇಮ್ ನಾರಾಯಣ್ ಅರೋರಾ ಅವರೊಂದಿಗೆ ಅವರ ಮೊದಲ ಮದುವೆಯಾಯಿತು, ಅದು 1974 ರಲ್ಲಿ ಮುರಿದುಬಿತ್ತು. 1981 ರಲ್ಲಿ, ಹೆಲೆನ್ ಚಿತ್ರಕಥೆಗಾರ ಸಲೀಂ ಖಾನ್ ಅವರನ್ನು ವಿವಾಹವಾದರು.
 

ಸಾಯಿರಾ ಬಾನು 1966 ರಲ್ಲಿ ತನಗಿಂತ 22 ವರ್ಷ ವಯಸ್ಸು ಹಿರಿಯ ದಿಲೀಪ್ ಕುಮಾರ್ ಅವರನ್ನು ವಿವಾಹವಾದರು, ಅವರು 2021 ರಲ್ಲಿ ನಿಧನರಾದರು. ಸಾಯಿರಾ ಬಾನು ಒಮ್ಮೆ ಗರ್ಭಿಣಿಯಾಗಿದ್ದರು. ಅಧಿಕ ರಕ್ತದೊತ್ತಡದಿಂದಾಗಿ 8 ತಿಂಗಳ ಗರ್ಭವನ್ನು ಕಳೆದುಕೊಂಡರು. ಅದರ ನಂತರ ಅವರು ಎಂದಿಗೂ ಗರ್ಭಿಣಿಯಾಗಲಿಲ್ಲ.

ನಟಿ ಡಾಲಿ ಅಹ್ಲುವಾಲಿಯಾ ಅವರು 'ಓಂಕಾರ' ಚಿತ್ರದಲ್ಲಿ ಕರೀನಾ ಕಪೂರ್ ಅವರ ತಂದೆಯಾಗಿ ನಟಿಸಿದ್ದ ನಟ ಕಮಲ್ ತಿವಾರಿ ಅವರನ್ನು ವಿವಾಹವಾಗಿದ್ದರು. ಇಬ್ಬರದ್ದೂ ಪ್ರೇಮ ವಿವಾಹ. ಆದರೆ ಇಬ್ಬರೂ ಮಕ್ಕಳು ಬೇಡ ಎಂದು  ನಿರ್ಧರಿಸಿದ್ದರು ಎನ್ನಲಾಗಿದೆ.

click me!