ಪ್ರಭಾಸ್-ದೀಪಿಕಾ ಪಡುಕೋಣೆಗೆ ಹಾಲಿವುಡ್‌ Action ಡೈರೆಕ್ಟರ್‌ಗಳಿಂದ ತರಬೇತಿ

First Published | Sep 18, 2022, 4:49 PM IST

ಸೌತ್ ಸೂಪರ್ ಸ್ಟಾರ್ಸ್ ಪ್ರಭಾಸ್ (Prabhas) ಜೊತೆಗೆ ದೀಪಿಕಾ ಪಡುಕೋಣೆ (Deepika Padukone) ಮುಂಬರುವ ಚಿತ್ರ ಪ್ರಾಜೆಕ್ಟ್ ಕೆನಲ್ಲಿ (Project K)ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಅವರ ಈ ಆ್ಯಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಚಿತ್ರಕ್ಕಾಗಿ ತಯಾರಕರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಚಿತ್ರವು ಸಂಪೂರ್ಣ ಆ್ಯಕ್ಷನ್ ಆಗಿರುವುದರಿಂದ  ಪ್ರಭಾಸ್-ದೀಪಿಕಾಗೆ ವಿಶೇಷ ತರಬೇತಿಯನ್ನು (Special Training) ನೀಡಲಾಗುವುದು ಮತ್ತು ಇದಕ್ಕಾಗಿ ಹಾಲಿವುಡ್ (Hollywood) ಸಾಹಸ ನಿರ್ದೇಶಕರ ಸಹಾಯವನ್ನು ತೆಗೆದುಕೊಳ್ಳಲಾಗುವುದು. 

ಪಿಂಕ್ವಿಲ್ಲಾದ ವರದಿಗಳ ಪ್ರಕಾರ, ಈ  ಪ್ರಾಜೆಕ್ಟ್‌ ತುಂಬಾ ವಿಭಿನ್ನವಾಗಿರುತ್ತದೆ. ಅನೇಕ ಹಾಲಿವುಡ್ (Hollywood) ಸಾಹಸ ನಿರ್ದೇಶಕರು ಅದರಲ್ಲಿ ಕೆಲಸ ಮಾಡುತ್ತಾರೆ ಮತ್ತು ಇದು ಈ ಚಿತ್ರವನ್ನು ಹೆಚ್ಚು ಥ್ರಿಲ್ಲರ್ ಮಾಡುತ್ತದೆ. 

ಸೌತ್ ಸ್ಟಾರ್ ಪ್ರಭಾಸ್ ಜೊತೆಗಿನ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಚಿತ್ರದ ಕೆಲಸ ಜೋರಾಗಿ ನಡೆಯುತ್ತಿದೆ. ಚಿತ್ರಕ್ಕಾಗಿ ನಿರ್ಮಾಪಕರು ವಿಶೇಷವಾದದ್ದನ್ನು ಮಾಡಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

Tap to resize

ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಎಲ್ಲಿಯೂ ಸೋಲು ಕಾಣದಂತೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. 5 ಆ್ಯಕ್ಷನ್ ಯೂನಿಟ್‌ಗಳು ಚಿತ್ರದಲ್ಲಿ ಕೆಲಸ ಮಾಡುತ್ತಿವೆ

ನಿರ್ಮಾಪಕರು ಹಾಲಿವುಡ್‌ನ ಅತ್ಯಂತ ಜನಪ್ರಿಯ ಸಾಹಸ ನಿರ್ದೇಶಕರನ್ನು ಈ ಚಿತ್ರದ Action Sequenceಗಾಗಿ ನೇಮಿಸಿಕೊಂಡಿದ್ದಾರೆ. ಸುಮಾರು 5 ಯೂನಿಟ್‌ಗಳು ಈ ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಾಗಿ ಕೆಲಸ ಮಾಡುತ್ತಿವೆ. 

ಈ ಚಿತ್ರದ ಕಥೆಯು ಭವಿಷ್ಯವನ್ನು ಆಧರಿಸಿದೆ ಮತ್ತು ಮೂರನೇ ಮಹಾಯುದ್ಧದ ಸುತ್ತ ಸುತ್ತುತ್ತದೆ. ಹಾಲಿವುಡ್ ಚಿತ್ರಗಳ ಮಾದರಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಂದರೆ ಹಸಿರು ಮತ್ತು ನೀಲಿ ಪರದೆ ಮೇಲೆ ಚಿತ್ರೀಕರಿಸಲಾಗುತ್ತಿದೆ.

ಚಿತ್ರದಲ್ಲಿ ಪ್ರಭಾಸ್-ದೀಪಿಕಾ ಜೊತೆಗೆ ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್-ಬಿಗ್ ಬಿ ಕೂಡ ಕೆಲವು ದೃಶ್ಯಗಳನ್ನು ಒಟ್ಟಿಗೆ ಚಿತ್ರೀಕರಿಸಿದ್ದಾರೆ. ಚಿತ್ರದ ಶೇಕಡ 90 ರಷ್ಟು ಚಿತ್ರೀಕರಣ ಹೈದರಾಬಾದ್‌ನ (Hyderabad) ರಾಮೋಜಿ ಸ್ಟುಡಿಯೋದಲ್ಲಿ ನಡೆಯಲಿದೆ. ಇಲ್ಲಿ ಚಿತ್ರಕ್ಕಾಗಿ ದೊಡ್ಡ ಸೆಟ್‌ ಸಿದ್ಧಪಡಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ. 

ಈ ಚಿತ್ರದ ಹೊರತಾಗಿ, ದೀಪಿಕಾ ಶಾರುಖ್ ಖಾನ್ ಅವರೊಂದಿಗೆ ಪಠಾಣ್ ಚಿತ್ರದಲ್ಲಿ ಮತ್ತು ಹೃತಿಕ್ ರೋಷನ್ ಅವರೊಂದಿಗೆ ಫೈಟರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಈ ಎರಡೂ ಚಿತ್ರಗಳಲ್ಲಿಯೂ ದೀಪಿಕಾ ಅದ್ಭುತ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಮತ್ತೊಂದೆಡೆ,  ಪ್ರಭಾಸ್  ಅವರು ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅವರೊಂದಿಗೆ ಓಂ ರಾವುತ್ ಅವರ ಆದಿಪುರುಷ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದೇ  ಸಮಯದಲ್ಲಿ, ಅವರು ಪ್ರಶಾಂತ್ ನೀಲ್ ಅವರ ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!