Sara Ali Khan Dream of Wedding: ಮದುವೆಯಾಗುವ ಹುಡುಗನಿಗೆ ಸಾರಾ ಹಾಕೋ ಕಂಡೀಷನ್‌ ಇದು!

Suvarna News   | Asianet News
Published : Dec 04, 2021, 08:45 PM ISTUpdated : Dec 04, 2021, 08:48 PM IST

ಸಾರಾ ಅಲಿ ಖಾನ್ (Sara Ali Khan) ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಸಿನಿಮಾ ಅತ್ರಾಂಗಿ ರೇಗಾಗಿ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಅವರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಸಂದರ್ಶನದಲ್ಲಿ ಸಾರಾ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ, ಅವರು ಯಾವ ರೀತಿಯ ಹುಡುಗನನ್ನು ಮದುವೆಯಾಗಲು ಬಯಸುತ್ತಾರೆ ಮತ್ತು ತಮ್ಮ ಮದುವೆಗೆ ಒಂದು ಷರತ್ತು ಕೂಡ ಹಾಕಿದ್ದಾರೆ  

PREV
111
Sara Ali Khan Dream of Wedding: ಮದುವೆಯಾಗುವ ಹುಡುಗನಿಗೆ  ಸಾರಾ ಹಾಕೋ ಕಂಡೀಷನ್‌ ಇದು!

ಆನಂದ್ ಎಲ್ ರೈ ನಿರ್ದೇಶನದ  ಅತ್ರಾಂಗಿ ರೇ ಚಿತ್ರದಲ್ಲಿ ಸಾರಾ ಜೊತೆಗೆ ಅಕ್ಷಯ್ ಕುಮಾರ್ ಮತ್ತು ಧನುಷ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾವು ಡಿಸೆಂಬರ್ 24 ರಂದು OTT ನಲ್ಲಿ ಬಿಡುಗಡೆಯಾಗಲಿದೆ.

211

ಟ್ರೈಯಾಂಗುಲರ್‌ ಲವ್‌ಸ್ಟೋರಿ ಪ್ರೇಮವನ್ನು ಆಧರಿಸಿದ ಈ  ಮ್ಯೂಸಿಕ್‌ ರೋಮ್ಯಾಂಟಿಕ್‌ ಡ್ರಾಮಾವು ಎಆರ್ ರೆಹಮಾನ್ ಅವರ ಸಂಗೀತವನ್ನು ಹೊಂದಿದೆ. ಅತ್ರಾಂಗಿ ರೇಗಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸುಮಾರು 200 ಕೋಟಿ ಪಾವತಿಸಿದೆ ಎಂದು ಹೇಳಾಗುತ್ತಿದೆ.  

311

ETimes ಗೆ ನೀಡಿದ ಸಂದರ್ಶನದಲ್ಲಿ ಸಾರಾ ತನ್ನ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಮಾತನಾಡಿದ್ದಾರೆ. ನಂತರ ತನ್ನ ತಾಯಿ ಅಮೃತಾ ಸಿಂಗ್ ಜೊತೆ ವಾಸಿಸಲು ಸಿದ್ಧವಾಗುವ ವ್ಯಕ್ತಿಯನ್ನು ಮದುವೆಯಾಗುವುದಾಗಿ ಸಾರಾ ತನ್ನ ಮದುವೆಯ ಬಗ್ಗೆ  ಹೇಳಿದ್ದಾರೆ.

411

ತನ್ನನ್ನು  ಸಿಂಗಲ್‌ ಮದರ್‌ ಆಗಿ ಬೆಳೆಸಿದ ತಾಯಿಯ ಬಗ್ಗೆಯೂ ಮಾತನಾಡಿದರು. ಸಾರಾ  ಅಲಿ ಖಾನ್  ತನ್ನ ಉಳಿದ ಜೀವನವನ್ನು ತನ್ನ ತಾಯಿಯೊಂದಿಗೆ ಕಳೆಯಲು ಬಯಸುತ್ತೇನೆ ಎಂದು ಹೇಳಿದರು.

511

ಸಂದರ್ಶನದ ಸಮಯದಲ್ಲಿ, ನೀವು ಎಂದಾದರೂ ಬಂಧನಗಳನ್ನು  ಮುರಿದು ಸ್ವತಃ ಏನಾದರೂ ಮಾಡಲು ಪ್ರಯತ್ನಿಸಿದ್ದೀರಾ ಎಂದು ಸಾರಾ ಅವರನ್ನು ಕೇಳಿದಾಗ?  'ಖಂಡಿತ ಇಲ್ಲ, ನನ್ನ ತಾಯಿಯೊಂದಿಗೆ ಬದುಕಬಲ್ಲವನನ್ನು ನಾನು ಮದುವೆಯಾಗುತ್ತೇನೆ. ನಾನು ಅವಳನ್ನು ಎಂದಿಗೂ ಬಿಡುವುದಿಲ್ಲ. ನನ್ನ ತಾಯಿ ತುಂಬಾ ಲಿಬರಲ್‌ ಮಹಿಳೆ. ದೈನಂದಿನ ಜೀವನದಲ್ಲಿ ಅವಳು ನನ್ನ ಮೂರನೇ ಕಣ್ಣು ಎಂದು  ಸಾರಾ ಅಲಿ ಖಾನ್ ಹೇಳಿದರು.

611

ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಹೆತ್ತವರ ಅಂದರೆ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಅವರ ವಿಚ್ಛೇದನವನ್ನು  ಸಾರಾ ಸಮರ್ಥಿಸಿಕೊಂಡಿದ್ದಾರೆ. ತಾಯಿ ಮತ್ತು ತಂದೆಯ ವಿಚ್ಛೇದನದ ಸಮಯದಲ್ಲಿ  ಅವರು ಹೇಗೆ ನಿಭಾಯಿಸಿದರು ಎಂದು ಸಹ  ಅವರು ಹೇಳಿದರು.

711

'ಇದು ತುಂಬಾ ಸುಲಭ. ನೀವು ಎರಡು ಆಯ್ಕೆಗಳನ್ನು ಕಾಣುತ್ತಿದರೆ ಮತ್ತು ಯಾರೂ ಸಂತೋಷವಾಗಿಲ್ಲದಿದ್ದರೆ, ಬೇರೆಯಾಗುವುದು ಉತ್ತಮ. ಅಗಲಿದ ನಂತರ ಇಬ್ಬರು ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಂತೋಷವಾಗಿದ್ದರೆ ಇದಕ್ಕಿಂತ ಉತ್ತಮವಾದ ವಿಷಯ ಏನಿದೆ. ಅವರು ಒಬ್ಬರಿಗೊಬ್ಬರು ಸಂತೋಷವಾಗಿರಲಿಲ್ಲ.  ಹಾಗಾಗಿ ಆ ಸಮಯದಲ್ಲಿ ದೂರವಾಗುವುದು ಉತ್ತಮ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮತ್ತೆ ಭೇಟಿಯಾದಾಗ, ನಿಮಗೆ ವಿಭಿನ್ನ ರೀತಿಯ ಸಂತೋಷ ಮತ್ತು ಸ್ವಾಗತ ಸಿಗುತ್ತದೆ' ಎಂದು ಹೇಳಿದ ಸಾರಾ.

 

811

ನಾನು ನನ್ನ ತಾಯಿಯೊಂದಿಗೆ ವಾಸಿಸುತ್ತಿದ್ದೇನೆ. ಅವಳು ನನ್ನ ಉತ್ತಮ ಸ್ನೇಹಿತ ಮತ್ತು ನನಗೆ ಎಲ್ಲವೂ ಎಂದು  ಹೇಳಿದ ಸಾರಾ ಪಾಪ್ಪಾ ಕೂಡ ನನಗೆ ಫೋನ್‌ನಲ್ಲಿ ಯಾವಾಗಲೂ ಮಾಡುತ್ತಾರೆ ಮತ್ತು ನಾನು ಬಯಸಿದಾಗ ಅವರನ್ನು ಭೇಟಿ ಮಾಡಬಹುದು. ಇಬ್ಬರೂ ಈಗ ತಮ್ಮ ತಮ್ಮ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ ಮತ್ತು ಇದರಿಂದಾಗಿ ಅವರ ಮಕ್ಕಳು ಸಹ ಸಂತೋಷವಾಗಿದ್ದಾರೆ ಎಂದಿದ್ದಾರೆ.

911

1991 ರಲ್ಲಿ ವಿವಾಹವಾದ ಸೈಫ್ ಅಲಿ ಖಾನ್  ಅಮೃತಾ ಸಿಂಗ್ ದಾಂಪತ್ಯ ಸುಮಾರು13 ವರ್ಷಗಳ ಕಾಲ ನಡೆಯಿತು ಮತ್ತು 2004 ರಲ್ಲಿ ವಿಚ್ಛೇದನ ಪಡೆದರು. ಅಮೃತಾ ಮತ್ತು ಸೈಫ್ ಅವರ ಪ್ರತ್ಯೇಕತೆಗೆ ಪ್ರಮುಖ ಕಾರಣವೆಂದರೆ ಸೈಫ್ ಅವರ ಬೇರೆ ಲವ್‌ ಇಂಟರೆಸ್ಟ್‌. 

1011
Sara

ದಂಪತಿಗಳು ವಿಚ್ಛೇದನ ಪಡೆದಾಗ, ಸಾರಾಗೆ 10 ವರ್ಷ ಮತ್ತು ಮಗ ಇಬ್ರಾಹಿಂಗೆ 4 ವರ್ಷ. ಅಮೃತಾ ಮತ್ತು ಸೈಫ್ ದಾಂಪತ್ಯ ಮುರಿದುಬಿದ್ದು ಸಾರಾ ಮತ್ತು ಇಬ್ರಾಹಿಂ ಮೇಲೆ ಗಾಢವಾದ ಪರಿಣಾಮ ಬೀರಿತು. 4 ವರ್ಷದ ಇಬ್ರಾಹಿಂ ತನ್ನ ತಂದೆಗೆ 'ಅಬ್ಬಾ, ನೀನೇಕೆ ಮನೆಗೆ ಬರಬಾರದು? ಎಂದು ಕೇಳುತ್ತಿದ್ದರಂತೆ  


 

1111

ಸಾರಾ ಅವರ ವೃತ್ತಿಜೀವನ 2018 ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರನಾಥ್ ಚಿತ್ರದೊಂದಿಗೆ ಶುರುವಾಯಿತು. ನಂತರ ಅವರು ರಣವೀರ್ ಸಿಂಗ್ ಜೊತೆ ಸಿಂಬಾ ಸಿನಿಮಾದಲ್ಲಿ ಕಾಣಿಸಿಕೊಂಡರು. 2020 ರಲ್ಲಿ, ಸಾರಾ ಅವರ 2 ಸಿನಿಮಾಗಳು  ಕಾರ್ತಿಕ್ ಆರ್ಯನ್ ಜೊತೆ ಲವ್ ಆಜ್ ಕಲ್ ಮತ್ತು ವರುಣ್ ಧವನ್ ಜೊತೆ ಕೂಲಿ ನಂ 1 ಬಿಡುಗಡೆಯಾಯಿತು. ಈಗ ಅತ್ರಾಂಗಿ ರೇ ಸಿನಿಮಾದಲ್ಲಿ ಸಾರಾ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories