Published : Dec 04, 2021, 07:40 PM ISTUpdated : Dec 04, 2021, 07:41 PM IST
ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಅವರ ವದಂತಿಯ ವಿವಾಹದ (wedding ) ಸುದ್ದಿಯು ಇಡೀ ದೇಶದ ಗಮನ ಸೆಳೆದಿದೆ. ಅವರ ಮದುವೆಯ ಬಗ್ಗೆ ದಿನಕ್ಕೊಂದು ತಾಜಾ ವರದಿಗಳು ಬರುತ್ತಲೇ ಇವೆ. ಕೆಲವು ವರ್ಷಗಳಿಂದ ಡೇಟ್ ಮಾಡುತ್ತಿರುವ ಈ ಜೋಡಿ ಇನ್ನೂ ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ ಇವರ ಪ್ರೀತಿಯನ್ನು ಇತರರು ಖಚಿತಪಡಿಸಿದ ನಾಲ್ಕು ಉದಾಹರಣೆಗಳು ಇಲ್ಲಿವೆ.
ಬಾಲಿವುಡ್‌ನ ಪವರ್‌ಫುಲ್ ಹಾಗೂ ಫೇಮಸ್ ಕಪಲ್ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮುಂದಿನ ವಾರದ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರೀಕ್ಷೆಯಿದೆ. ಇವರಿಬ್ಬರ ವಿವಾಹವು ಡಿಸೆಂಬರ್ 07 ರಿಂದ10 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ವರದಿಗಳಿವೆ.
29
Image courtesy: Google
ಅವರ ವಿವಾಹವು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ 14 ನೇ ಶತಮಾನದ ಕೋಟೆಯಲ್ಲಿ ನಡೆಯಲಿದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರನ್ನು ವಧು ವರರ ಆವತಾರದಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವದಂತಿಯ ವಿವಾಹಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಈ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಯಾವುದೇ ಆನೌನ್ಸ್‌ಮೆಂಟ್ ಮಾಡಿಲ್ಲ. ವಿಕ್ಕಿ ಮತ್ತು ಕತ್ರಿನಾ ಅವರ ರಿಲೆಷನ್‌ಶಿಪ್ ಅನ್ನು ಇತರರು ಖಚಿತಪಡಿಸಿದ ನಾಲ್ಕು ಉದಾಹರಣೆಗಳು ಇಲ್ಲಿವೆ.
49
Image courtesy: Google
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಸಂಬಂಧದ ಬಗ್ಗೆ ಮಾತಾನಾಡಿದ ಮೊದಲ ವ್ಯಕ್ತಿ ಹರ್ಷವರ್ಧನ್ ಕಪೂರ್. ಸಂದರ್ಶನವೊಂದರಲ್ಲಿ ಅನಿಲ್ ಕಪೂರ್ ಪುತ್ರ ಈ ಜೋಡಿಯ ಪ್ರೀತಿಯನ್ನು ಖಚಿತಪಡಿಸಿದ್ದರು. ಹರ್ಷವರ್ಧನ್ ಕಪೂರ್ ಅವರನ್ನು ಬಾಲಿವುಡ್‌ನ ಯಾವ ವದಂತಿಯನ್ನು ನಿಜವೆಂದು ನಂಬುತ್ತಾರೆ ಎಂದು ಬಗ್ಗೆ ಕೇಳಿದಾಗ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂದು ಹರ್ಷವರ್ಧನ್ ಕಪೂರ್ ಹೇಳಿದರು.
59
Image courtesy: Google
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವದಂತಿಗಳ ಸಂಬಂಧವು ಎರಡನೇ ಬಾರಿಗೆ ಖಚಿತವಾಗಿದ್ದು ನಟ ಆಯುಷ್ಮಾನ್ ಖುರಾನಾ ಕಾರಣದಿಂದ. ಈ ಬಾರಿಯೂ ಸಂದರ್ಶನದ ಮೂಲಕ ದೃಢೀಕರಣ ಸಿಕ್ಕಿದೆ. ಆರ್‌ಜೆ ಸಿದ್ಧಾರ್ಥ್ ಕಾನನ್‌ಗೆ ಆಯುಷ್ಮಾನ್ ಸಂದರ್ಶನದಲ್ಲಿ ಆಯುಷ್ಮಾನ್ ಅವರು ಕತ್ರಿನಾ ಕೈಫ್ ಅವರೊಂದಿಗೆ ಯಾವ ರೀತಿಯ ಡೇಟ್‌ಗೆ ಹೋಗಲು ಬುಸುತ್ತಾರೆ ಎಂದು ಕೇಳಿದಾಗ,ಕತ್ರಿನಾರಂತೆ ನೃತ್ಯ ಮಾಡಲು ಸಾಧ್ಯವಿಲ್ಲ. ಆದರೆ ವಿಕ್ಕಿ ಪಂಜಾಬಿ ಆಗಿರುವುದರಿಂದ, ನಮ್ಮ ನಡುವೆ ಖಂಡಿತವಾಗಿಯೂ ಪಂಜಾಬಿ ಸಂಪರ್ಕವಿದೆ ಎಂದು ಖುರಾನಾ ಹೇಳಿದರು.
69
Image courtesy: Google
ನಟ-ಕಾಮಿಡಿಯನ್ ಕೃಷ್ಣಾ ಅಭಿಷೇಕ್ ಅವರ ಮದುವೆಯ ಸುದ್ದಿಯನ್ನು ದೃಢಪಡಿಸಿದ್ದಾರೆ, ಸಿದ್ಧತೆಗಳು ನಡೆಯುತ್ತಿವೆ ಆದರೆ ಸಿಕ್ರೇಟ್ ಅಫೇರ್ ಎಂದು ಹೇಳಿದ್ದಾರೆ. ಗೋವಿಂದನ ಸೋದರಳಿಯ ಕೃಷ್ಣ ಅಭಿಷೇಕ್ ವಿಕ್ಕಿ ಕೌಶಲ್ ಅವರ ನೆರೆ ಹೊರೆಯವರು. ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಮದುವೆಯ ವದಂತಿಗಳನ್ನು ದೃಢಪಡಿಸಿದರು ಮತ್ತು ದಂಪತಿಗಳಿಗೆ ತಮ್ಮ ಶುಭಾಶಯಗಳನ್ನು ನೀಡಿದರು.
79
ಹರ್ಷವರ್ಧನ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಅವರು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಸಂಬಂಧದ ಬಗ್ಗೆ ವದಂತಿಗಳನ್ನು ಮಾತ್ರ ದೃಢಪಡಿಸಿದ್ದಾರೆ, ಆದರೆ ಮದುವೆಯ ವದಂತಿಯನ್ನು ಭಾರತೀಯ ಆಡಳಿತ ಸೇವೆಗಳ (IAS) ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
89
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹದ ಸ್ಥಳವಾದ ಸವಾಯಿ ಮಾಧೋಪುರದ ಜಿಲ್ಲಾ ಕಲೆಕ್ಟರ್ ರಾಜೇಂದ್ರ ಕಿಶನ್. ಶುಕ್ರವಾರ,ಡಿಸೆಂಬರ್ 03 ರಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಸಿಂಗ್ ಮತ್ತು ಎಡಿಎಂ ಸೂರಜ್ ಸಿಂಗ್ ನೇಗಿ ಸೇರಿದಂತೆ ಹೋಟೆಲ್ ಸಿಬ್ಬಂದಿಯೊಂದಿಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದರುಎಂದು ವರದಿಯಾಗಿದೆ.
99
ಡಿಸೆಂಬರ್ 07 ರಿಂದ ಡಿಸೆಂಬರ್ 10 ರವರೆಗೆ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಗ್ರಾಮ ಪಂಚಾಯಿತಿ, ಪೊಲೀಸ್ ಮತ್ತು ಆಡಳಿತದ ನಡುವೆ ಸುಗಮ ಸಮನ್ವಯತೆ ಇರುವಂತೆ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.