Atrangi Re song out: ಸಖತ್‌ ಆಗಿ ಸ್ಟೆಪ್ಸ್ ಹಾಕಿದ್ದಾರೆ ಸಾರಾ!

Published : Nov 30, 2021, 05:18 PM IST

ಅಕ್ಷಯ್ ಕುಮಾರ್ (Akshay Kumar), ಸಾರಾ ಅಲಿ ಖಾನ್ (Sara Ali Khan) ಮತ್ತು ಧನುಷ್ (Dhanush) ಅಭಿನಯದ ಅತ್ರಾಂಗಿ ರೇ (Atrangi Re)  ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೀಗ ಆನಂದ್ ಎಲ್ ರೈ (Anand L Rai) ನಿರ್ದೇಶನದ ಈ ಚಿತ್ರದ ಮೊದಲ ಹಾಡು ಚಕ ಚಕ್... ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದಾರೆ. 

PREV
19
Atrangi Re song out: ಸಖತ್‌ ಆಗಿ ಸ್ಟೆಪ್ಸ್ ಹಾಕಿದ್ದಾರೆ ಸಾರಾ!

ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಮತ್ತು ಧನುಷ್ ಅಭಿನಯದ ಅತ್ರಾಂಗಿ ರೇ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಪ್ರೀತಿಯ ಹುಚ್ಚುತನವನ್ನು ಪ್ರದರ್ಶಿಸುವ ಈ ಚಿತ್ರ ಡಿಸೆಂಬರ್ 24 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. 

29
atrangi re to release on disney plus hotstar

ಚಿತ್ರದ ಟ್ರೇಲರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಆನಂದ್ ಎಲ್ ರೈ ನಿರ್ದೇಶನದ ಈ ಸಿನಿಮಾದ ಮೊದಲ ಹಾಡು ಚಕ ಚಕ್ .. ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾರೆ. 

39

ವೀಡಿಯೊವನ್ನು ಹಂಚಿಕೊಳ್ಳುತ್ತಾ,'ಬಿಹಾರ ಕಿ ಛೋರಿ ಹಾಡು, ಈಗ ಪ್ರತಿ ಮದುವೆಯಲ್ಲೂ  ಪ್ಲೇ ಆಗುತ್ತದೆ, ಗ್ಯಾರಂಟಿ'  ಎಂದು ಅವರು ಬರೆದಿದ್ದಾರೆ. ಎ ಆರ್ ರೆಹಮಾನ್  ( AR Rahman) ಸಂಗೀತ ಸಂಯೋಜಿಸಿರುವ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.

49

ಹೊರಬಿದ್ದ ಹಾಡಿನಲ್ಲಿ, ಸಾರಾ ಅಲಿ ಖಾನ್ ತನ್ನ ಸಿನಿಮಾದ ಪತಿ ಧನುಷ್ ಅವರೊಂದಿಗೆ ದಕ್ಷಿಣ ಭಾರತದ ಮದುವೆಗೆ ಹಾಜರಾಗಿರುವ ಫನ್‌ ಮೂಡ್‌ನಲ್ಲಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ನಮ್ಮ ಸ್ವಂತ ಗಂಡನ ನಿಶ್ಚಿತಾರ್ಥದಿಂದ ತುಂಬಾ ಸಂತೋಷವಾಗಿರುವ ದೇಶದ ಏಕ ಮಾತ್ರ ಹೆಂಡತಿ ನಾನು ಎಂದು ಈ ಹಾಡಿನ ಆರಂಭದಲ್ಲಿ, ಸಾರಾ ಹೇಳುತ್ತಾರೆ. 

59

ಅವರು ಹಾಡಿನಲ್ಲಿ ಸಖತ್‌ ಸ್ಟೆಪ್ಸ್‌ ಹಾಕಿರುವುದು ಕಂಡುಬಂದಿದೆ. ಹಾಡಿನಲ್ಲಿ ಸಾರಾ ಅವರ ಎಕ್ಸ್‌ಪ್ರೆಷನ್‌  ಅದ್ಭುತವಾಗಿದೆ. ಅವರು ನಿಯಾನ್ ಹಸಿರು ಸೀರೆ ಮತ್ತು ಗುಲಾಬಿ ಬಣ್ಣದ ಬ್ಲೌಸ್‌ ಧರಿಸಿ  ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

69

OTT ಪ್ಲಾಟ್‌ಫಾರ್ಮ್ ಖರೀದಿಸಿದ ಬಾಲಿವುಡ್‌ನ ಅತ್ಯಂತ ದುಬಾರಿ ಚಿತ್ರ ಅತ್ರಾಂಗಿ ರೇ ಎಂದು ವರದಿ ಹೇಳುತ್ತದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅತ್ರಾಂಗಿ ರೇಗಾಗಿ ಸುಮಾರು 200 ಕೋಟಿ ರೂ ಹಣ ಸಂದಾಯ ಮಾಡಿದೆ.

79
atrangire

ಈ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಅವರು ರಿಂಕು ಸೂರ್ಯವಂಶಿ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಅವರು ವಿಷು ಎಂಬ ತಮಿಳು ಹುಡುಗನನ್ನು ಬಲವಂತವಾಗಿ ಮದುವೆಯಾಗಿದ್ದಾರೆ. ವಿಶು ಪಾತ್ರವನ್ನು ಸೌತ್ ಚಿತ್ರರಂಗದ ಸೂಪರ್ ಸ್ಟಾರ್ ಧನುಷ್ ನಿರ್ವಹಿಸಿದ್ದಾರೆ. 

89

ಸಾರಾ - ಧನುಷ್ ಇಬ್ಬರ ನಡುವೆ ಉತ್ತಮ ಕೆಮಿಸ್ಟ್ರಿ ಕಂಡುಬರುತ್ತಿದೆ. ಮೂರು ನಿಮಿಷದ ಎಂಟು ಸೆಕೆಂಡುಗಳ ಟ್ರೇಲರ್ ಮಂಟಪದೊಂದಿಗೆ ಪ್ರಾರಂಭವಾಗುತ್ತದೆ, ಅಲ್ಲಿ ಕೆಲವರು ವಿಷುವನ್ನು ಗೋಣಿಚೀಲದಲ್ಲಿ ತಂದು ರಿಂಕುಗೆ ಬಲವಂತವಾಗಿ ಮದುವೆ ಮಾಡುತ್ತಾರೆ. 
 

99

ಅದೇ ಸಮಯದಲ್ಲಿ  ರಿಂಕು ಅಂದರೆ ಸಾರಾಳ ಪ್ರವೇಶವು ಕೆಲವರ ಮೇಲೆ ಬಾಟಲಿಗಳನ್ನು ಎಸೆಯುವಾಗ ಸಂಭವಿಸುತ್ತದೆ. ಅವಳು ಈ ಬಲವಂತದ ಮದುವೆಗೆ ವಿರುದ್ಧವಾಗಿದ್ದಾಳೆ ಮತ್ತು ಅವಳ ಆಯ್ಕೆಯ ಪ್ರಕಾರ ಮದುವೆಯಾಗಲು ಬಯಸುತ್ತಾಳೆ.
 

Read more Photos on
click me!

Recommended Stories