Jacqueline Fernandez : ತನಗಿಂತ 15 ವರ್ಷ ಹಿರಿಯ ನಿರ್ದೇಶಕನ ಪ್ರೀತಿಗೆ ಬಿದ್ದಳು ಸುಂದರಿ!

Published : Nov 30, 2021, 01:54 AM IST

ಇತ್ತೀಚೆಗಷ್ಟೇ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ   ಪ್ರಕರಣದಲ್ಲಿ (Money Laundering Case)  ಜಾಕ್ವೆಲಿನ್   ಫರ್ನಾಂಡಿಸ್‌ (Jacqueline Fernandez) ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಇಡಿ ಆಕೆಯನ್ನು ವಿಚಾರಣೆಗೆ ಒಳಪಡಿಸಿತ್ತು. ಆದರೆ ಇದೀಗ ಈ ಪ್ರಕರಣದ ಕಿಂಗ್ ಪಿನ್ ಸುಖೇಶ್ ಚಂದ್ರಶೇಖರ್ (Sukesh Chandrashekhar)  ಜೊತೆಗಿನ ಜಾಕ್ವೆಲಿನ್ ಫೋಟೋ ನಂತರ ಅವರ ಸಂಕಷ್ಟ ಹೆಚ್ಚಾಗುತ್ತಿದೆ. ಜಾಕ್ವೆಲಿನ್ ಮತ್ತು ಸುಕೇಶ್ ನಡುವಿನ ಆತ್ಮೀಯತೆ ಈ ಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂದಹಾಗೆ, ಶ್ರೀಲಂಕಾದ ವಿಶ್ವ ಸುಂದರಿಯಾಗಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಅನೇಕ ಜನರೊಂದಿಗೆ ಸಂಬಂಧ ಹೊಂದಿದ್ದರು. ಒಬ್ಬ ವ್ಯಕ್ತಿ  ಅವರಿಗಿಂತ 15 ವರ್ಷ ದೊಡ್ಡವನಾಗಿದ್ದನು. ಜಾಕ್ವೆಲಿನ್ ಫರ್ನಾಂಡೀಸ್ ಲವ್‌ಲೈಫ್‌ ಬಗ್ಗೆ ಮುಂದೆ ಓದಿ. 

PREV
110
Jacqueline Fernandez : ತನಗಿಂತ 15 ವರ್ಷ ಹಿರಿಯ ನಿರ್ದೇಶಕನ  ಪ್ರೀತಿಗೆ ಬಿದ್ದಳು ಸುಂದರಿ!

ಜಾಕ್ವೆಲಿನ್ ಫರ್ನಾಂಡಿಸ್‌ ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಲ್ಲಿ ಮುಖ್ಯಾಂಶಗಳಲ್ಲಿದ್ದಾರೆ, ವಿಶೇಷವಾಗಿ ಆಫೇರ್‌ಗಳಿಗೆ ಸಂಬಂಧಿಸಿದಂತೆ. ಜಾಕ್ವೆಲಿನ್ ಅವರ ಮೊದಲ  ಬಾಯ್‌ಫ್ರೆಂಡ್‌ ಯಾವುದೇ ನಟ ಅಲ್ಲ.   ಅರಬ್ ದೇಶದ ರಾಜಕುಮಾರ. ಆದರೆ, ಜಾಕ್ವೆಲಿನ್ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರ ಸಂಬಂಧ ಮುರಿದುಬಿತ್ತು.

210

ತನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಜಾಕ್ವೆಲಿನ್ ಫೆರ್ನಾಂಡಿಸ್ ಅರಬ್ ದೇಶ ಬಹ್ರೇನ್‌ನ ರಾಜಕುಮಾರ ಹಸನ್ ಬಿನ್ ರಶೀದ್ ಅಲಿ ಖಲೀಫಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಬಹ್ರೇನ್‌ನ ರಾಜಮನೆತನಕ್ಕೆ ಸೇರಿದ ಖಲೀಫಾ ಮತ್ತು ಜಾಕ್ವೆಲಿನ್ ಸಾಮಾನ್ಯ ಸ್ನೇಹಿತರ ಪಾರ್ಟಿಯಲ್ಲಿ ಭೇಟಿಯಾದರು.


 

 

310

ಆದಾಗ್ಯೂ, 2010 ರಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ 'ಹೌಸ್‌ಫುಲ್' ಸಿನಿಮಾದ ಅವಕಾಶ ಪಡೆದಾಗ, ಬಹ್ರೇನ್ ರಾಜಕುಮಾರನೊಂದಿಗಿನ ಅವರ ಸಂಬಂಧವು ಮುರಿದುಹೋಯಿತು. ಈ ಸಮಯದಲ್ಲಿ, ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ಜೊತೆ ಜಾಕ್ವೆಲಿನ್ ಅವರ ನಿಕಟತೆ ಹೆಚ್ಚಾಗತೊಡಗಿತು. 2009 ರಿಂದ ಮಾಧ್ಯಮಗಳಲ್ಲಿ ಇವರಿಬ್ಬರ ಸಂಬಂಧದ ಸುದ್ದಿ ಬರಲಾರಂಭಿಸಿತು.

410

ಸಾಜಿದ್ ಖಾನ್ ಅವರು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗಿಂತ 15 ವರ್ಷ ದೊಡ್ಡವರಾಗಿದ್ದರು. ವಾಸ್ತವವಾಗಿ, ಜಾಕ್ವೆಲಿನ್ ಬಾಲಿವುಡ್‌ನಲ್ಲಿ ಯಶಸ್ವಿ ನಾಯಕಿಯಾಗಲು ಬಯಸಿದ್ದರು ಮತ್ತು ಇದಕ್ಕಾಗಿ ಸಾಜಿದ್ ಖಾನ್ ಜಾಕ್ವೆಲಿನ್‌ ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ಸಾಕಷ್ಟು ಸಹಾಯ ಮಾಡಿದರು. ಇದೇ ಕಾರಣಕ್ಕೆ ಜಾಕ್ವೆಲಿನ್‌ಗೆ 'ಹೌಸ್‌ಫುಲ್-1' ಮತ್ತು 'ಹೌಸ್‌ಫುಲ್-2' ಚಿತ್ರಗಳಲ್ಲಿ ಬ್ರೇಕ್ ಸಿಕ್ಕಿತ್ತು. 

510

ಇವರಿಬ್ಬರ ಸಂಬಂಧದ ಬಗ್ಗೆ ಚರ್ಚೆಗಳು ಎಷ್ಟಿತ್ತೆಂದರೆ 2012ರಲ್ಲಿ ಸಾಜಿದ್ ಖಾನ್ ಮತ್ತು ಜಾಕ್ವೆಲಿನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಹಂತಕ್ಕೆ ತಲುಪಿತ್ತು. 'ಹೌಸ್‌ಫುಲ್ 2' ಚಿತ್ರೀಕರಣದ ಸಮಯದಲ್ಲಿ ಜಾಕ್ವೆಲಿನ್ ಸೆಟ್‌ಗೆ ಬಂದಾಗ ಜನರು ಅವರನ್ನು ಅತ್ತಿಗೆ ಎಂದು ಕರೆಯುತ್ತಿದ್ದರು .ಫೆಬ್ರವರಿ 2013 ರಲ್ಲಿ, ಜಾಕ್ವೆಲಿನ್ ಸಾಜಿದ್ ಅವರ ಪೋಸೆಸಿವ್‌ ಸ್ವಭಾವದಿಂದ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು. ನಂತರ ಅವರು ಬೇರ್ಪಟ್ಟರು.

610

ಜಾಕ್ವೆಲಿನ್ ಫರ್ನಾಂಡಿಸ್ ಹೆಸರು  ಸೂಪರ್ ಸ್ಟಾರ್‌ ಸಲ್ಮಾನ್ ಖಾನ್ ಜೊತೆಗೆ ಕೂಡ  ಕೆಲಕಾಲ ತಳುಕು ಹಾಕಿಕೊಂಡಿತ್ತು. 2014 ರಲ್ಲಿ, ಸಲ್ಮಾನ್ ತನ್ನ 'ಕಿಕ್'  ಸಿನಿಮಾದಲ್ಲಿ ಆಕೆ ನಟಿಸಿದ್ದರು ಅಂದಿನಿಂದ ಈ ಚರ್ಚೆಗಳು ಪ್ರಾರಂಭವಾದವು. ಆದರೆ, ಜಾಕ್ವೆಲಿನ್ ಅನೇಕ ಸಂದರ್ಶನಗಳಲ್ಲಿ ಸಲ್ಮಾನ್ ತನ್ನ ಒಳ್ಳೆಯ ಸ್ನೇಹಿತ ಮಾತ್ರ ಮತ್ತು ಇಬ್ಬರ ನಡುವೆ ಬೇರೆ ಏನೂ ಇಲ್ಲ ಎಂದು ಹೇಳಿದ್ದಾರೆ.

710

ಸಲ್ಮಾನ್ ಖಾನ್ ನಂತರ, ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೆಸರೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸೇರಿಕೊಂಡಿತ್ತು. ‘ಎ ಜಂಟಲ್ ಮ್ಯಾನ್’ ಸಿನಿಮಾದ ಶೂಟಿಂಗ್ ವೇಳೆ ಅವರಿಬ್ಬರ ಆತ್ಮೀಯತೆ ಬೆಳೆಯಿತು. ಕೆಲವು ವರದಿಗಳಲ್ಲಿ, ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿಘಟನೆಗೆ ಜಾಕ್ವೆಲಿನ್ ಕಾರಣ ಎಂದು ನಂಬಲಾಗಿದೆ.

 

810

2016 ರಲ್ಲಿ ಕತ್ರಿನಾ ಕೈಫ್ ಜೊತೆಗಿನ ಬ್ರೇಕ್ಅಪ್ ನಂತರ, ರಣಬೀರ್ ಕಪೂರ್ ಕೂಡ ಜಾಕ್ವೆಲಿನ್ ಫರ್ನಾಂಡಿಸ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂಬ ವರದಿಗಳು ಬಂದವು. ರಣಬೀರ್ ಕಪೂರ್ ಜಾಕ್ವೆಲಿನ್‌ಗೆ ಹಲವಾರು ಸಂದೇಶಗಳನ್ನು ಕಳುಹಿಸಿದ್ದು ಮಾತ್ರವಲ್ಲದೆ ಡಿನ್ನರ್ ಡೇಟ್‌ಗೆ ಕೂಡ ಕೇಳಿದ್ದಾರೆ ಎಂದು ಹೇಳಲಾಗಿದೆ. ಆದರೆ, ರಣಬೀರ್‌ ಅವರಿಗೆ ಜಾಕ್ವೆಲಿನ್ ಯಾವುದೇ ಆಸಕ್ತಿ ತೋರಿಸಲಿಲ್ಲ.

910

ಮಿಸ್ ಯೂನಿವರ್ಸ್ ಶ್ರೀಲಂಕಾ ಆಗಿದ್ದ ಜಾಕ್ವೆಲಿನ್, ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಟಿವಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಸಿಡ್ನಿ ವಿಶ್ವವಿದ್ಯಾಲಯದಿಂದಮಾಸ್‌ ಕಮ್ಯುನಿಕೆಷನ್‌   ಅಧ್ಯಯನ ಮಾಡಿದ್ದಾರೆ. ಜಾಕ್ವೆಲಿನ್ ಅವರ ತಂದೆ ಶ್ರೀಲಂಕಾದಲ್ಲಿ ಸಂಗೀತಗಾರು ಮತ್ತು ಅವರ ತಾಯಿ ಏರ್ ಹೋಸ್ಟೆಸ್ ಆಗಿದ್ದರು. ಟಿವಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿರುವಾಗ ಮಾಡೆಲಿಂಗ್ ಆಫರ್‌ಗಳು ಬರಲಾರಂಭಿಸಿದವು.

1010

ಜಾಕ್ವೆಲಿನ್ 2009 ರಲ್ಲಿ 'ಅಲ್ಲಾದ್ದೀನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈಕೆ ಇದುವರೆಗೆ 'ಮರ್ಡರ್-2', 'ಹೌಸ್‌ಫುಲ್-2', 'ರೇಸ್-2', 'ಕಿಕ್', 'ಫ್ಲೈಯಿಂಗ್ ಜಟ್' ಮತ್ತು 'ರೇಸ್-3' ಚಿತ್ರದಲ್ಲಿ ನಟಿಸಿದ್ದಾರೆ. ಜಾಕ್ವೆಲಿನ್ ಶೀಘ್ರದಲ್ಲೇ ಅಕ್ಷಯ್ ಕುಮಾರ್ ಜೊತೆ 'ರಾಮ್ ಸೇತು' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories