ಜಾನ್ವಿ ಇತ್ತೀಚೆಗಷ್ಟೇ ತನ್ನ ತಂದೆ ಬೋನಿ ಕಪೂರ್ ಅವರ ಮುಂಬರುವ ಚಿತ್ರ ಮಿಲಿ ಸಿನಿಮಾದ ಕೆಲಸವನ್ನು ಮುಗಿಸಿದ್ದಾರೆ. ನಟಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ಇದು ಮುಗಿದಿದೆ #ಮಿಲ್ಲಿ ಅಪ್ಪಾ ಜೊತೆಗಿನ ನನ್ನ ಮೊದಲ ಚಿತ್ರ. ನನ್ನ ಜೀವನವೀಡಿ ಅವರಿಂದ ನಿರ್ಮಾಪಕನಾಗಿ ಮಾತ್ರ ಕಥೆಗಳನ್ನು ಕೇಳಿದ್ದೇನೆ. ಆದರೆ ಅವರೊಂದಿಗೆ ಕೆಲಸ ಮಾಡಿದ ನಂತರ, ಅದನ್ನು ಹೇಳಲು ತುಂಬಾ ಖುಷಿ ಆಗಿದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಸಿನಿಮಾಕ್ಕೂ ನಿಮ್ಮ ಹೃದಯ ಮತ್ತು ಆತ್ಮವನ್ನು ನೀಡುತ್ತೀರಿ ಎಂದು ಎಲ್ಲರೂ ಹೇಳುವುದು ಏನೆಂದು ಈಗ ನನಗೆ ಅಂತಿಮವಾಗಿ ತಿಳಿದಿದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.