ಪಾಕಿಸ್ತಾನದಲ್ಲಿ ಕೆಂಗಣ್ಣಿಗೆ ಗುರಿಯಾಗಿರುವ ಬನ್ಸಾಲಿ ಅವರ 'ಹೀರಾ ಮಂಡಿ'!

Published : Oct 05, 2021, 05:14 PM IST

ದೇಶದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಕೆಲ ಸಮಯದ ಹಿಂದೆ ಹಿರಮಂಡಿ (Heera Mandi) ವೆಬ್ ಸರಣಿಯನ್ನು (web series) ನಿರ್ಮಿಸುತ್ತಿರುವ ವಿಷವಯವನ್ನು ಘೋಷಿಸಿದ್ದರು. ಇದು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಪ್ರದರ್ಶನಗೊಳ್ಳಲಿದೆ. ಈ ವೆಬ್ ಸರಣಿಯು ಪಾಕಿಸ್ತಾನದಲ್ಲಿ ಗದ್ದಲವನ್ನು ಸೃಷ್ಟಿಸಿದೆ. ಪಾಕಿಸ್ತಾನದ ಕೆಲವು ಸೆಲೆಬ್ರಿಟಿಗಳು ಇದರಿಂದ ಕೋಪಗೊಂಡಿದ್ದಾರೆ. ಅಷ್ಟಕ್ಕೂ, ಹಿರಮಂಡಿಯಲ್ಲಿ ಏನಿದೆ? ಇಲ್ಲಿದೆ ವಿವರ.  

PREV
110
ಪಾಕಿಸ್ತಾನದಲ್ಲಿ ಕೆಂಗಣ್ಣಿಗೆ ಗುರಿಯಾಗಿರುವ ಬನ್ಸಾಲಿ ಅವರ 'ಹೀರಾ ಮಂಡಿ'!

ಹಿರಮಂಡಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ  ಒಂದು ರೆಡ್‌ಲೈಟ್‌ ಏರಿಯಾವಾಗಿದೆ. ಬನ್ಸಾಲಿಯ ವೆಬ್ ಸರಣಿಯು ಇಲ್ಲಿ ವಾಸಿಸುವ ಮಹಿಳೆಯರ ನಿಜ ಜೀವನದ ಮೇಲೆ ಕೇಂದ್ರೀಕರಿಸುತ್ತದೆ. ಹಿರಮಂಡಿ ಸಂಜಯ್ ಲೀಲಾ ಬನ್ಸಾಲಿ ಅವರ ಡ್ರೀಮ್‌ ಪ್ರಾಜೆಕ್ಟ್ ಆಗಿದೆ. 

210

ಬನ್ಸಾಲಿ ಅವರು ಈ ಸರಣಿಯನ್ನು ಆನೌನ್ಸ್‌ ಮಾಡಿದ ನಂತರ, ಪಾಕಿಸ್ತಾನದಲ್ಲಿ ತೀವ್ರ ಸಂಚಲನ ಉಂಟಾಗಿದೆ. ಅಲ್ಲಿನ ಸೆಲೆಬ್ರಿಟಿಗಳು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಪಾಕಿಸ್ತಾನದ ಕೆಲವು ಸೆಲೆಬ್ರಿಟಿಗಳು ಇದರಿಂದ ಕೋಪಗೊಂಡಿದ್ದಾರೆ. 

  

310

ಹೀರಾ ಮಂಡಿ' ಪಿರಿಯಡ್‌  ವೆಬ್ ಸರಣಿಯಾಗಿದ್ದು, ಇದರ ಕಥೆಯು ಪಾಕಿಸ್ತಾನ ದೇಶ ಸೃಷ್ಟಿಯಾಗುವ ಮುಂಚಿನಿಂದಲೂ ಇದೆ. ಆಗ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಆ ಸಮಯದಲ್ಲಿ ಲಾಹೋರ್ ಭಾರತದ ಒಂದು ಭಾಗವಾಗಿತ್ತು.
 

410

ಪಾಕಿಸ್ತಾನದ ಕಲಾವಿದರು ಮನರಂಜನಾ ಉದ್ಯಮವು ಪಾಕಿಸ್ತಾನದ ಐತಿಹಾಸಿಕ ಪರಂಪರೆಯನ್ನು ಏಕೆ ಉದ್ಧಾರ ಮಾಡುತ್ತಿಲ್ಲ ಎಂದು ವಿಷಾದಿಸುತ್ತಾರೆ. ಪಾಕಿಸ್ತಾನಿ ನಟಿ ಉಷಾನಾ ಶಾ ಈ ಬಗ್ಗೆ ಹಲವು ಟ್ವೀಟ್ ಮಾಡಿದ್ದಾರೆ.

510

ಉಷಾನಾ ಶಾ ಅವರು ಸೆಪ್ಟೆಂಬರ್ 27 ರಂದು ಮೊದಲ ಟ್ವೀಟ್ ಮಾಡಿದ್ದಾರೆ,  'ಸಾಂಸ್ಕೃತಿಕ ಸಂವಹನವು ಒಂದು ವಿಷಯ, ಆದರೆ ಇದು ಒಂದು ರೀತಿಯ ದೋಚುವಿಕೆ. ನಮ್ಮದೇ ಆದ ಪರಂಪರೆಯನ್ನು ನಕಲು ಮಾಡುವುದರಿಂದ ಅದು ನಂಬಿಕೆ ಕಳೆದುಕೊಳ್ಳುತ್ತದೆ. ಭಾರತದಲ್ಲಿ ಚಲನಚಿತ್ರಗಳನ್ನು ಮಾಡಲು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವಿದೆ. ಇದು ಅವರಿಗೆ ಅಲ್ಲ' ಎಂದು ಅವರು ಇದರಲ್ಲಿ ಉಷಾನಾ ಹೇಳಿದರು.

610

ಇದಾದ ನಂತರವೂ, ಸೆಪ್ಟೆಂಬರ್ 30 ರಂದು, ಉಶ್ನಾ ಮತ್ತೆ ಎರಡು ಟ್ವೀಟ್‌ಗಳನ್ನು ಮಾಡಿದರು, ಅದರಲ್ಲಿ ಅವರು ಪಾಕಿಸ್ತಾನಿ ಚಲನಚಿತ್ರ ಉದ್ಯಮದ ಮೇಲೆ ದಾಳಿ ಮಾಡಿದರು ಮತ್ತು ಹೀಗೆ ಹೇಳಿದರು.

710

'ಪಾಕಿಸ್ತಾನವು ಇಲ್ಲಿಯವರೆಗೆ ಒಂದೇ ಒಂದು ನೆಟ್‌ಫ್ಲಿಕ್ಸ್ (ಓರಿಜಿನಲ್‌) ಮಾಡಿಲ್ಲ. ಹಿರಮಂಡಿ ಲಾಹೋರ್‌ನ ಒಂದು ಪ್ರಮುಖ ಭಾಗವಾಗಿದೆ. ನಾನು ಮೊದಲೇ ಹೇಳಿದಂತೆ, ಭಾರತಕ್ಕೆ ಶ್ರೀಮಂತ ಸಂಸ್ಕೃತಿ ಮತ್ತು ಚಲನಚಿತ್ರ ನಿರ್ಮಿಸಲು ಇತಿಹಾಸದ ಕೊರತೆಯಿಲ್ಲ. ಇಂದು ಹೆಚ್ಚಿನ ಮೊಘಲ್ ಸಂಸ್ಕೃತಿಯು ಪಾಕಿಸ್ತಾನದ ಭಾಗವಾಗಿದೆ ಮತ್ತು ಅದರ  ಭಾಷೆಯಾಗಿದೆ. ನಮಗೆ ಅದು ಬೇಕು'.

810

ನಾನು ಇಲ್ಲಿ ಅನುಮತಿ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿಲ್ಲ ಎಂದು ಉಷ್ಣ ಹೇಳಿದರು. ಭಾರತೀಯ ಚಲನಚಿತ್ರ ನಿರ್ಮಾಪಕರು ಏನು ಬೇಕಾದರೂ  ಮಾಡಬಹುದು, ಏಕೆಂದರೆ ಅಷ್ಟಕ್ಕೂ ಅದು ಭಾರತವಾಗಿತ್ತು. ಆದರೆ, ಇತಿಹಾಸದ ಕೆಲವು ಭಾಗ ಪಾಕಿಸ್ತಾನದ ಸಂಸ್ಕೃತಿ, ಭಾಷೆ ಮತ್ತು ನಗರಕ್ಕೆ ಸಂಬಂಧಿಸಿದೆ, ಅದನ್ನೂ ಭಾರತಕ್ಕೆ ತೆಗೆದು ಕೊಂಡು ಹೋದರೆ, ಪಾಕಿಸ್ತಾನ  ಐತಿಹಾಸಿಕ ಚಲನಚಿತ್ರಗಳನ್ನು ಹೇಗೆ ಮಾಡುತ್ತದೆ. ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

910

ನಟಿ ಉಷನಾ ಅವರನ್ನು ಹೊರತು ಪಡಿಸಿ, ಪಾಕಿಸ್ತಾನಿದ ಇನ್ನೊಬ್ಬ ನಟಿ ಮನ್ಷಾ ಪಾಷಾ ಮತ್ತು ಪಾಕಿಸ್ತಾನದ ಹೋಸ್ಟ್‌ ನಟ ಯಾಸಿರ್ ಹುಸೇನ್ ಕೂಡ ಹಿರಮಂಡಿ ವೆಬ್ ಸರಣಿಯನ್ನು ನೆಟ್ ಫ್ಲಿಕ್ಸ್‌ಗಾಗಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

1010

ಈ ಹಿಂದೆ ನೆಟ್‌ಫ್ಲಿಕ್ಸ್ ನಲ್ಲಿ  ಒಂದು ವೀಡಿಯೊವನ್ನು ಶೇರ್‌ ಮಾಡಲಾಗಿದ್ದು , ಹಿರಮಂಡಿಗೆ ಸಂಬಂಧಿಸಿದಂತೆ  ಅದು ಸ್ವಾತಂತ್ರ್ಯ ಪೂರ್ವ ನೃತ್ಯಗಾರರ ಕಥೆಯಾಗಿದೆ.  ಅವರು ಸಂಗೀತ, ಕವನ ಮತ್ತು ನೃತ್ಯವನ್ನು ಜೀವಂತವಾಗಿರಿಸಿದ್ದಾರೆ. ಮತ್ತು ನ ರಾಜಕೀಯವೂ ಅದರ ಒಂದು ಭಾಗವಾಗಿರುತ್ತದೆ ಎಂದು ವಿಡಿಯೋದಲ್ಲಿ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದರು.
 

click me!

Recommended Stories