ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಮುಂಬೈ ಕ್ರೂಸ್ ಪಾರ್ಟಿ ಮೇಲೆ ಎನ್‌ಸಿಬಿ(NCB) ದಾಳಿ ನಡೆಸಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಂಧಿಸಿದ ನಂತರ ಟ್ರೆಂಡ್ ಆಗುತ್ತಿದ್ದಾರೆ. ಈ ಪ್ರಕರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೊಂದಿಗೆ ಆರ್ಯನ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳು ಕೂಡ ನಟನ ಬೆಂಬಲಕ್ಕೆ ಬರುತ್ತಿದ್ದಾರೆ. ಆದರೂ ಈ ತಿಂಗಳುಗಳಲ್ಲಿ ಎನ್‌ಸಿಬಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳಲ್ಲಿ ಸಾಕಷ್ಟು ಸಲ ದಾಳಿಗಳನ್ನು ನಡೆಸಿದೆ. ಕೆಲವರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಇದರ ನಡುವೆ, ಎನ್‌ಸಿಬಿ ಬಾಲಿವುಡ್ ಮೇಲೆ ಟಾರ್ಗೆಟ್ ಮಾಡುತ್ತಿದೆ ಎಂಬ ಚರ್ಚೆಯಾಗುತ್ತಿದೆ.
NCBಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ(Sameer Wankhede) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಒಂದು ನಿಯಮವಿದೆ. ಅದನ್ನು ಎಲ್ಲರೂ ಅನುಸರಿಸಬೇಕು. ಇದು ಎಲ್ಲರಿಗೂ ಒಂದೇ. ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಯಾರಾದರೂ ಫೇಮಸ್ ಎಂದ ಕೂಡಲೇ ನಾವು ಅವರನ್ನು ಮುಕ್ತವಾಗಿ ಬಿಡಬೇಕು ಎನ್ನುವುದು ತಪ್ಪು ಎಂದಿದ್ದಾರೆ.
ಇಬ್ಬರಿಗೂ 23 ವರ್ಷ: ನೀರಜ್‌ಗೆ ಹೋಲಿಸಿ ಆರ್ಯನ್ ಖಾನ್ ಟ್ರೋಲ್
ಸೆಲೆಬ್ರಿಟಿಗಳು ಆ ನಿಯಮಗಳನ್ನು ಏಕೆ ಅನುಸರಿಸಬಾರದು ? ಕಾನೂನನ್ನು ಉಲ್ಲಂಘಿಸುವ ಒಬ್ಬ ಪ್ರಸಿದ್ಧ ವ್ಯಕ್ತಿಯನ್ನು ನಾವು ನೋಡಿದರೆ, ನಾವು ಅದರ ಬಗ್ಗೆ ಏನನ್ನೂ ಮಾಡಬಾರದು? ನಾನು ಡ್ರಗ್ ಪೆಡ್ಲರ್‌ಗಳ ಹಿಂದೆ ಓಡಬೇಕು. ಸ್ಲಂಗಳಲ್ಲಿ(Slum) ಮಾತ್ರ ದಾಳಿ(Raid), ನನ್ನ ಕಾರ್ಯಾಚರಣೆ ನಡೆಸಬೇಕೇ? ಎಂದು ಪ್ರಶ್ನಿಸಿದ್ದಾರೆ.
ನಾವು ಆರ್ಯನ್ ಖಾನ್ ನನ್ನು ಬಂಧಿಸಿದ್ದರಿಂದ ಎಲ್ಲರೂ ಮಾತನಾಡುತ್ತಿದ್ದಾರೆ. ಬಹುತೇಕ ಪ್ರತಿದಿನ ನಾವು ದಾಳಿ ನಡೆಸುತ್ತಿದ್ದೇವೆ. ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಆದರೆ ಯಾರೂ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಈ ವರ್ಷ ನಾವು 310 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದೇವೆ. ಅವರಲ್ಲಿ ಎಷ್ಟು ಸೆಲೆಬ್ರಿಟಿಗಳು? ಈ ವರ್ಷ 150 ಕೋಟಿ ಮೌಲ್ಯದ ಅಕ್ರಮ ವಸ್ತುಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಇದರ ಬಗ್ಗೆ ಯಾರಾದರೂ ಮಾತನಾಡಿದ್ದಾರೆಯೇ? ಎಂದು ಸಮೀರ್ ಪ್ರಶ್ನಿಸಿದ್ದಾರೆ.
ಆರ್ಯನ್ ಖಾನ್ ಪ್ರಕರಣದಲ್ಲಿ, ಎನ್‌ಸಿಬಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸಿಆರ್ 94/21 ರಲ್ಲಿ ಮತ್ತಷ್ಟು ಅಭಿವೃದ್ಧಿಯಲ್ಲಿ, ಮೂವರು ಆರೋಪಿಗಳಾದ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಇಂದು 03-10-2021 ಯು/ಸೆ 8 ರಂದು ಬಂಧಿಸಲಾಗಿದೆ. (ಸಿ) ಆರ್/ಡಬ್ಲ್ಯೂ ಸೆಕ್ಷನ್ 20 (ಬಿ), ಎನ್ಡಿಪಿಎಸ್ ಕಾಯ್ದೆಯ 27, 28 ಮತ್ತು 29 ಮತ್ತು ಅವರ ವೈದ್ಯಕೀಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದಿದ್ದರು.