ದೀಪಿಕಾ -ರಣವೀರ್ & ಆಲಿಯಾ - ರಣಬೀರ್ ಹೊಸ ಮನೆ ನಿರ್ಮಿಸಲಿದ್ದಾರಾ?

First Published | Oct 5, 2021, 5:10 PM IST

ಬಾಲಿವುಡ್‌ನ ಫೇಮಸ್‌ ಕಪಲ್‌ಗಳಾದ  ಆಲಿಯಾ ಭಟ್ - ರಣಬೀರ್ ಕಪೂರ್ (Alia Bhatt- Ranbir Kapoor)ಮತ್ತು ರಣವೀರ್ ಸಿಂಗ್ - ದೀಪಿಕಾ ಪಡುಕೋಣೆ (Deepika Padukone-Ranveer Singh)  ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಸಿನಿಮಾದ ಹೊರತು ಪಡಿಸಿ ಈ ಜೋಡಿಗಳು ಪರ್ಸಲ್‌ ಲೈಫ್‌ನ ಕಾರಣದಿಂದ ಜನರ ಗಮನ ಸೆಳೆಯುತ್ತಿದ್ದಾರೆ.  ಈ ಎರಡು ಜೋಡಿಗಳು ತಮ್ಮ  ಹೊಸ  ಮನೆಗಳನ್ನು ಪರಿಶೀಲಿಸುವ ವರದಿಗಳು ಹೊಬಂದಿವೆ. ದಂಪತಿಗಳನ್ನು ವಿವಿಧ ಸಂದರ್ಭಗಳಲ್ಲಿ ಗುರುತಿಸಲಾಯಿತು.

ಬಾಲಿವುಡ್‌ನ ಮೊಸ್ಟ್ ಲವಿಂಗ್‌ ಕಪಲ್‌ಗಳಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಬ್ಬರು. ಇವರು ಈಗ ಮನೆ ತಮಗಾಗಿ ನಿರ್ಮಿಸುತ್ತಿದ್ದಾರೆ ಎಂದು ವದಂತಿಗಳಿವೆ. ಹೊಸ ಮನೆ ಬಳಿ ಇವರಿಬ್ಬರ ಫೋಟೋ ತೆಗೆಯಲಾಗಿದೆ.

ರಣಬೀರ್ ಮತ್ತು ಆಲಿಯಾ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಮುಂಬೈನ ಪಾಲಿ ಹಿಲ್‌ನಲ್ಲಿ ಮನೆ ನಿರ್ಮಾಣ ಕೆಲಸದ ಸೈಟಿಗೆ  ಈ ಜೋಡಿ ಭೇಟಿ ನೀಡಿದ ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್‌ ಆಗಿದ್ದವು. 

Tap to resize

ರಣಬೀರ್ ತಾಯಿ, ನಟಿ ನೀತು ಕಪೂರ್  ಸಹ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ರಣಬೀರ್ ನೀಲಿ ಶರ್ಟ್ ಮತ್ತು ಕಾರ್ಗೊಪ್ಯಾಂಟ್ ಧರಿಸಿದ್ದರೆ, ಆಲಿಯಾ ಬಿಳಿ ಟಾಪ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದರು. ಅವರು ಮೇಲಿನ ಪ್ಲೋರ್‌ನಿಂದ ಕಟ್ಟಡದ ನಿರ್ಮಾಣ ವೀಕ್ಷಿಸುತ್ತಿರುವುದು ಕಂಡು ಬಂದಿದೆ. 

ಆಲಿಯಾ ಮತ್ತು ರಣಬೀರ್ ಲಾಕ್‌ಡೌನ್ ಸಮಯದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು  ಮತ್ತು ಅನೇಕ ಸಂದರ್ಭಗಳಲ್ಲಿ ರಣಬೀರ್ ಆಲಿಯಾರ ಮನೆ ಕಟ್ಟಡದ ಕಾಂಪೌಂಡ್‌ನಲ್ಲಿ ಕಾಣಿಸಿಕೊಂಡರು. ಆಲಿಯಾ ಕಳೆದ ವರ್ಷ ಅಲ್ಲಿ ಅಪಾರ್ಟ್ಮೆಂಟ್ ಅನ್ನು ಖರೀದಿ ಮಾಡಿದ್ದರು ಎಂದು ಹೇಳಲಾಗುತ್ತದೆ.

ಇದೇ ಸಮಯದಲ್ಲಿ ಸೆಲಬ್ರಿಟಿ ಇಂಟೀರಿಯರ್ ಡಿಸೈನರ್ ವಿನಿತಾ ಚೈತನ್ಯ ಅವರ  ಮತ್ತು ಬಾಲಿವುಡ್‌ನ ಫೇವರೇಟ್‌  ಕಪಲ್‌ ದೀಪಿಕಾ ಪಡುಕೋಣೆ  ಮತ್ತು ರಣವೀರ್ ಸಿಂಗ್‌  ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ದೀಪಿಕಾ ಮತ್ತು ರಣವೀರ್  ಅಲಿಬಾಗ್ ನಲ್ಲಿ ತಮ್ಮ ಹೊಸ ಐಷಾರಾಮಿ  ಸೀ ಫೇಸಿಂಗ್‌ ಬಂಗ್ಲೆಗಾಗಿ ಸುಮಾರು 22 ಕೋಟಿ ರೂ ಅಷ್ಷು ಭಾರೀ ಮೊತ್ತ ಖರ್ಚು ಮಾಡಿದ್ದಾರೆ. 

ಈ ಸೆಲೆಬ್ರಿಟಿ ಕಪಲ್‌ ರಣವೀರ್ ಸಿಂಗ್ - ದೀಪಿಕಾ ಪಡುಕೋಣೆ ಅವರ ಹೊಸ ಮನೆ 2.25 ಎಕರೆಗಳಷ್ಟು ವ್ಯಾಪಿಸಿದೆ ಮತ್ತು ಸುಮಾರು 18,000 ಚದರ ಅಡಿಗಳ  ಜಾಗದಲ್ಲಿ ಮನೆ ನಿರ್ಮಾಣವಾಗಿದೆ.

ಅಲಿಬಾಗ್‌ನ ಸತಿರ್ಜೆ ಹತ್ತಿರವಿರುವ ರಣವೀರ್‌ ದೀಪಿಕಾರ ಈ ಲಕ್ಷುರಿಸ್‌ 5BHK ಮನೆ ಗ್ರೌಂಡ್ ಮತ್ತು ಫಸ್ಟ್‌ ಫ್ಲೋರ್‌ ಹೊಂದಿದೆ. ಇವರ ಹೊಸ ಹಾಲಿಡೇ ಹೋಮ್‌  ಕಿಹಿಮ್ ಬೀಚ್‌ನಿಂದ ಕೇವಲ 10 ನಿಮಿಷಗಳ ಡ್ರೈವ್ ಆಗಿದೆ.

Latest Videos

click me!