ಬಾಲಿವುಡ್‌ನಲ್ಲಿ ಸಾಲು ಸಾಲಾಗಿ 1000 ಕೋಟಿ ರೂ. ಬಾಕ್ಸ್ ಆಫೀಸ್ ಹಿಟ್ ನೀಡಿದ ಸಿನಿಮಾದಲ್ಲಿ ನಟಿಸಿದವರು ಶಾರೂಕ್ ಖಾನ್. ಶಾರೂಕ್, 2023ರಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ಕಮ್ ಬ್ಯಾಕ್ ಮಾಡಿದರು. ನಾಲ್ಕು ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದ ಕಿಂಗ್ ಖಾನ್ ಮೂರು ಹಿಟ್‌ಗಳೊಂದಿಗೆ ಮರಳಿದರು.
ಆದರೆ ಹೀಗೆ ಕಮ್ ಬ್ಯಾಕ್ ಮಾಡಿ ಸೂಪರ್ ಹಿಟ್ ಸಿನಿಮಾ ನೀಡಿದ್ದು ಶಾರುಖ್ ಮಾತ್ರವಲ್ಲ. 1000 ಕೋಟಿ ರೂ. ಗಳಿಕೆ ಮಾಡಿದ ಮತ್ತೊಬ್ಬ ಬಾಲಿವುಡ್ ಸ್ಟಾರ್ ಇದ್ದಾರೆ. ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ಅತಿ ದೊಡ್ಡ ಕಮ್ ಬ್ಯಾಕ್ ಮಾಡಿದರು.
ನಾಯಕ ನಟನಾಗಿ ಅಲ್ಲದಿದ್ದರೂ ತನ್ನ ಹೆಸರಿಗೆ 1000 ಕೋಟಿ ರೂಪಾಯಿಗಳ ಎರಡು ಚಿತ್ರಗಳನ್ನು ಹೊಂದಿರುವ ನಟಿ ಸಂಜಯ್ ದತ್. ಈ ಹಿರಿಯ ನಟ 2022ರಲ್ಲಿ ಕೆಜಿಎಫ್ ಪಾರ್ಟ್ 2ನಲ್ಲಿ ವಿಲನ್ ಆಗಿ ಕಾಣಿಸಿಕೊಂಡರು.
ಈ ಸಿನ್ಮಾ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ರೂ. ಗಳಿಸಿತು. ನಂತರದ ವರ್ಷ ಶಾರೂಕ್ ಖಾನ್ ಸಿನಿಮಾ 'ಜವಾನ್'ನಲ್ಲಿ ಗೆಸ್ಟ್ ರೋಲ್ ಮಾಡಿದರು. ಈ ಚಿತ್ರ ವಿಶ್ವಾದ್ಯಂತ 1150 ಕೋಟಿ ರೂ. ಗಳಿಸಿತು
1981ರಲ್ಲಿ ನಾಯಕ ನಟನಾಗಿ ಅಭಿನಯ ಆರಂಭಿಸಿದಾಗಿನಿಂದ, ಸಂಜಯ್ ದತ್ ಯಾವುದೇ ಬಾಲಿವುಡ್ ನಾಯಕನಿಗಿಂತ ಹೆಚ್ಚು ಫೈಲ್ಯೂರ್ ಕಂಡಿದ್ದಾರೆ. 80ರ ದಶಕದ ಆರಂಭದಲ್ಲಿ ರಾಕಿ ಮತ್ತು ವಿಧಾತದಂತಹ ಹಿಟ್‌ಗಳೊಂದಿಗೆ ನಟ ತಮ್ಮ ಸಿನಿ ಕೆರಿಯರ್‌ನಲ್ಲಿ ಗೆಲುವನ್ನು ಕಂಡುಕೊಂಡರು.
80ರ ದಶಕದ ಮಧ್ಯಭಾಗದಲ್ಲಿ, 1986ರಲ್ಲಿ 'ನಾಮ್' ಚಿತ್ರದ ಯಶಸ್ಸಿನೊಂದಿಗೆ ಕಮ್‌ಬ್ಯಾಕ್ ಮಾಡಿದರು. ಆದರೆ ನಂತರದ ದಿನಗಳಲ್ಲಿ ಮಾದಕವಸ್ತು ಬಳಕೆ ಮತ್ತು ವರ್ತನೆಯ ಸಮಸ್ಯೆಗಳಂತಹ ವಿವಾದಗಳು ಅವರ ಕುರಿತು ಕೇಳಿ ಬಂತು.
ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾಗಳೂ ಸೋತವು. 1991-92 ರಲ್ಲಿ, ಅವರು ಮತ್ತೆ ಸಾಜನ್ ಮತ್ತು ಖಳನಾಯಕ್ ರೂಪದಲ್ಲಿ ಕಮ್‌ಬ್ಯಾಕ್ ಮಾಡಿ ಆಕ್ಷನ್ ಹಿಟ್‌ಗಳನ್ನು ನೀಡಿದರು.
1992ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಿಂದಾಗಿ ಕಾನೂನು ಸಮರ ಮತ್ತು ಭಯೋತ್ಪಾದನಾ-ವಿರೋಧಿ ಕಾನೂನಿನಲ್ಲಿ ಜೈಲು ಶಿಕ್ಷೆಯು ಮತ್ತೆ ಅವರ ಯಶಸ್ಸನ್ನು ಕೆಳಗಿಳಿಸಿತು.
ಆದರೆ ಫೀನಿಕ್ಸ್ ಪಕ್ಷಿಯಂತೆ, ಸಂಜಯ್ ಮತ್ತೊಮ್ಮೆ 1997ರ ಹಿಟ್ ವಾಸ್ತವ್ ನೊಂದಿಗೆ ಪುನರಾಗಮನವನ್ನು ಮಾಡಿದರು. ಇದು 15 ವರ್ಷಗಳಲ್ಲಿ ಅವರ ಮೂರನೆಯ ಕಮ್ ಬ್ಯಾಕ್ ಆಗಿತ್ತು.
2003ರಲ್ಲಿ 'ಮುನ್ನಾಭಾಯ್ MBBS'ನೊಂದಿಗೆ ಯಶಸ್ವಿ ನಟರಾಗಿ ಮರಳಿದರು. ಪೋಷಕ ನಟನಾಗಿ ಅವರು ಇತ್ತೀಚಿಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಸಂಜಯ್ ದತ್ ಅಭಿನಯಿಸಿದ ಕೆಜಿಎಫ್ 2, ಜವಾನ್, ತಮಿಳಿನ ಜೈಲರ್ , ಲಿಯೋ ಎಲ್ಲವೂ ಸೂಪರ್‌ಹಿಟ್ ಸಿನಿಮಾಗಳೆಂದು ಗುರುತಿಸಿಕೊಂಡಿವೆ.