ಮೇಕಪ್‌ ಇಲ್ದೆ ಹಾಟ್ ಲುಕ್‌ನಲ್ಲಿ ಮಿಂಚಿದ ಅನಿಮಲ್ ಬ್ಯೂಟಿ: ಬ್ಲೇಜರ್ ಹಾಕೋದೆ ಬೇಡವಾಗಿತ್ತು ಎಂದ ಫ್ಯಾನ್ಸ್‌!

First Published | Feb 9, 2024, 9:22 AM IST

ಬಾಲಿವುಡ್ ಬ್ಯೂಟಿ ತೃಪ್ತಿ ದಿಮ್ರಿ ಅವರು ಸದ್ಯ ಪಡ್ಡೆಹುಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ. ನಯಾ ಫೋಟೋಶೂಟ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ‘ಅನಿಮಲ್’ ಬ್ಯೂಟಿಯ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಬಾಲಿವುಡ್‌ ನಟಿ ತೃಪ್ತಿ ದಿಮ್ರಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಪಡ್ಡೆಹೈಕ್ಳ ಟೆಂಪ್ರೆಚರ್ ಹೆಚ್ಚಿಸಿದೆ. ಬೀಜ್‌ ಬಣ್ಣದ ಉದ್ದದ ಕೋಟ್‌ ಮತ್ತು ಬಿಳಿ ಸ್ಟಾಕಿಂಗ್ಸ್‌ ಜತೆ ಇವರು ಮೇಕಪ್‌ ಇಲ್ಲದೆ ಕಾಣಿಸಿದ್ದಾರೆ. ಇವರ ಫೋಟೋಗಳು ವೈರಲ್‌ ಆಗಿವೆ.

ತೃಪ್ತಿ ದಿಮ್ರಿ ಅವರು ಅದ್ಭುತ ಪ್ರತಿಭಾನ್ವಿತೆ. ಇವರ ಸೌಂದರ್ಯವೂ ಅದ್ಭುತ. ಹೀಗಾಗಿ, ಇವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್‌ ಇದ್ದಾರೆ. ಇದೇ ಸಮಯದಲ್ಲಿ ಫ್ಯಾಷನ್‌ ವಿಷಯದಲ್ಲೂ ಇವರ ಕಾಳಜಿ ಹೆಚ್ಚು. 

Tap to resize

ಅನಿಮಲ್‌ ಸಿನಿಮಾದಲ್ಲಿ ನಟಿಸಿದ ತೃಪ್ತಿ ದಿಮ್ರಿಗೆ ಯಾವುದೇ ಬಗೆಯ ಉಡುಗೆಯಲ್ಲೂ ಸ್ಟೈಲ್‌ ಸ್ಟೇಟ್‌ಮೆಂಟ್‌ ನೀಡಲು ಗೊತ್ತು. ಇದೀಗ ಯಾವುದೇ ಮೇಕಪ್‌ ಮಾಡಿಕೊಳ್ಳದೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ತೃಪ್ತಿ ದಿಮ್ರಿ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉದ್ದನೆಯ ಉಣ್ಣೆಬಟ್ಟೆ ಕೋಟ್‌ನಲ್ಲಿ ಕಾಂತಿಯುತವಾಗಿ, ಮನಮೋಹಕವಾಗಿ ನಟಿ ಕಾಣಿಸಿಕೊಂಡಿದ್ದಾರೆ. ಪೂರ್ತಿ ಸ್ಲೀವ್ಸ್‌ನ ಡಬಲ್‌ ಕಾಲರ್‌ನ ಈ ಉಡುಗೆಯಲ್ಲಿ ತೃಪ್ತಿ ದಿಮ್ರಿ ಎಲ್ಲರ ಗಮನ ಸೆಳೆದಿದ್ದಾರೆ. 

‘ಅನಿಮಲ್’ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಅದ್ಯಾವಾಗ ದರ್ಶನ ಕೊಟ್ಟ ದಿನದಿಂದ ತೃಪ್ತಿ ದಿಮ್ರಿ ಲಕ್ ಬದಲಾಯ್ತು. ರಶ್ಮಿಕಾ ನ್ಯಾಷನಲ್ ಕ್ರಶ್ ಅಲ್ಲ, ನೀವು ನಿಜವಾದ ನ್ಯಾಷನಲ್ ಕ್ರಶ್ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.

ತೃಪ್ತಿ ದಿಮ್ರಿ ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 1994ರಲ್ಲಿ ಜನಿಸಿದ ಇವರು 2017ಲ್ಲಿ ಪೋಸ್ಟರ್‌ ಬಾಯ್ಸ್‌ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದರು. ಲೈಲಾ ಮಂಜ್ನು ಚಿತ್ರದಲ್ಲಿ ಇವರಿಗೆ ಮೊದಲ ಬಾರಿಗೆ ನಾಯಕಿ ಪಾತ್ರ ದೊರಕಿತ್ತು. 

ನಂತರ ಅನ್ವಿತ್‌ ದತ್‌ ಅವರ ಬುಲ್‌ಬುಲ್‌ ಚಿತ್ರದ ನಟನೆಯು ಸಿನಿವಿಮರ್ಶಕರ ಗಮನ ಸೆಳೆಯಿತು. ಕ್ಯೂಲಾ ಎಂಬ ಚಿತ್ರದಲ್ಲಿ 2022ರಲ್ಲಿ ನಟಿಸಿದರು. ಫಿಲ್ಮ್‌ಫೇರ್‌ ಒಟಿಟಿ ಅವಾರ್ಡ್‌ ಅನ್ನು ಈ ಸಿನಿಮಾದ ನಟನೆಗೆ ತೃಪ್ತಿ ದಿಮ್ರಿ ಪಡೆದರು.

Latest Videos

click me!