ದಕ್ಷಿಣ ಭಾರತದ ಟಾಪ್ ನಟಿಯರು ಏನು ಓದ್ಕೊಂಡಿದ್ದಾರೆ ಗೊತ್ತಾ? ವೈದ್ಯೆಯಾಗಿದ್ರೂ ಈಕೆ ನಟಿಯಾದ್ದೇಕೆ?

Published : Feb 08, 2024, 09:58 PM ISTUpdated : Feb 08, 2024, 09:59 PM IST

ಪ್ರತಿನಿತ್ಯ ನಾವು ಸಿನಿಮಾ, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಹ ದಕ್ಷಿಣ ಭಾರತದ ಟಾಪ್ ನಟಿಯರ ವಯಸ್ಸು, ಊರಿನ ವಿಚಾರ ಗೊತ್ತಿರುತ್ತದೆ. ಆದರೆ, ಅವರ ಶೈಕ್ಷಣಿಕ ಅರ್ಹತೆಗಳೇನು? ಏನು ಓದಿಕೊಂಡಿದ್ದಾರೆ ಎಂಬುದು ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ..

PREV
110
ದಕ್ಷಿಣ ಭಾರತದ ಟಾಪ್ ನಟಿಯರು ಏನು ಓದ್ಕೊಂಡಿದ್ದಾರೆ ಗೊತ್ತಾ? ವೈದ್ಯೆಯಾಗಿದ್ರೂ ಈಕೆ ನಟಿಯಾದ್ದೇಕೆ?

ತೆಲುಗು ಸಿನಿಮಾ ಕ್ಷೇತ್ರದ ಬೇಡಿಕೆ ನಟಿ ಹಾಗೂ ಇತ್ತೀಚಿನ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಾ ನಟನೆಯಲ್ಲೂ ತೊಡಗಿಸಿಕೊಂಡಿರುವ ಸಮಂತಾ ಬಿ.ಕಾಂ ಮಾಡಿಕೊಂಡಿದ್ದಾಳೆ.
 

210

ಭಾರತೀಯ ಸಿನಿಮಾದ ಸೆಕ್ಸಿಯಸ್ಟ್ ನಟಿ ಹಾಗೂ ನೂವು ಕಾವಾಲಯ್ಯ ಎಂದು ಪ್ರಸಿದ್ಧಿಯಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ಕೇವಲ ಬಿಎ ಓದಿಕೊಂಡಿದ್ದಾರೆ.
 

310

ಬಾಹುಬಲಿ ಹಾಗೂ ಅರುಂಧತಿ ಸಿನಿಮಾದ ಮೂಲಕ ಅತ್ಯಂತ ಭರವಸೆ ಮೂಡಿಸಿದ ನಟಿ ಅನುಷ್ಕಾ ಶೆಟ್ಟಿ ಅವರು ಮೂಲ ಕನ್ನಡತಿಯಾಗಿದ್ದಾರೆ. ತೆಲುಗು ಸಿನಿಮಾದ ಬೇಡಿಕೆ ನಟಿ ಅನುಷ್ಕಾ ಶೆಟ್ಟಿ ಬಿಸಿಎ ಶಿಕ್ಷಣ ಪಡೆದಿದ್ದಾರೆ.
 

410

ಮಗಧೀರ ಸಿನಿಮಾದ ಬೆಡಗಿ ಕಾಜಲ್ ಅಗರ್‌ವಾಲ್ ಅವರು ಮಾಸ್ ಮೀಡಿಯಾದಲ್ಲಿ ಪದವಿಯನ್ನು ಪಡೆದಿದ್ದಾರೆ. ಈಗ ನಟನೆಯಲ್ಲಿಯೇ ಜೀವನ ಮುಂದುವರೆಸುತ್ತಿದ್ದಾರೆ.

510

ದಕ್ಷಿಣದ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಯನತಾರಾ ಕೇವಲ ಬಿಎ ಇಂಗ್ಲೀಷ್ ಲಿಟರೇಚರ್ ಮಾಡಿಕೊಂಡಿದ್ದಾರೆ. ಆದರೂ, 20ಕ್ಕೂ ಹೆಚ್ಚು ವರ್ಷಗಳ ಕಾಲ ಬಹುಬೇಡಿಕೆ ನಟಿ ಆಗಿದ್ದಾರೆ.
 

610

ರಾಕುಲ್ ಪ್ರೀತ್ ಸಿಂಗ್ ಅವರು ಬಿ.ಎಸ್ಸಿ ಮ್ಯಾಥಮ್ಯಾಟಿಕ್ಸ್ ಮಾಡಿಕೊಂಡಿದ್ದಾರೆ. ಆದರೆ, ತಮ್ಮ ನಟನಾ ಶೈಲಿಯಿಂದಾಗಿ ಓದನ್ನು ಮೊಟಕುಗೊಳಿಸಿ ಸಿನಿಮಾದಲ್ಲಿಯೇ ಜೀವನ ಕಟ್ಟಿಕೊಂಡಿದ್ದಾರೆ.
 

710

ಸಿನಿಮಾ ಕ್ಷೇತ್ರಕ್ಕೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟಿರುವ ಅನುಪಮಾ ಪರಮೇಶ್ವರನ್ ಅವರು ನಟನೆಯೊಂದಿಗೆ ಬಿಎ ಕಮ್ಯೂನಿಕೇಷನ್ ಮಾಡಿಕೊಂಡಿದ್ದಾರೆ. 
 

810

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಬೇಡಿಕೆ ನಟಿಯಾಗಿದ್ದಾರೆ. ರಶ್ಮಿಕಾ ಸೈಕಾಲಜಿಯಲ್ಲಿ ಪದವಿಯನ್ನು ಗಳಿಸಿದ್ದಾರೆ. ಹೀಗಾಗಿ, ಅಭಿಮಾನಿಗಳಿಗೂ ಹೆಚ್ಚು ಪ್ರೀತಿ ಪಾತ್ರಳಾಗಿ ನಡೆದುಕೊಳ್ಳುತ್ತಿದ್ದಾರೆ.
 

910

ಪೂಜಾ ಹೆಗ್ಡೆ ಅವರು ಮಾಸ್ಟರ್ ಆಫ್ ಕಾಮರ್ಸ್ ಮಾಡಿಕೊಂಡಿದ್ದಾರೆ. ಪೂಜಾ ಅವರು ಅಪ್ಪಿ ತಪ್ಪಿಯೂ ಲೆಕ್ಕದಲ್ಲಿ ವೀಕ್‌ ಎಂದು ಊಹಿಸಿಕೊಳ್ಳಬೇಡಿ..
 

1010

ದಕ್ಷಿಣದ ಟಾಪ್ ಅಂಡ್ ಕ್ಯೂಟ್ ನಟಿ ಸಾಯಿ ಪಲ್ಲವಿ ಓದಿಕೊಂಡಿದ್ದು, ಎಂಬಿಬಿಎಸ್ ಆಗಿದ್ದರೂ ನಟನೆಯಲ್ಲಿ ಭಾರಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ.
 

click me!

Recommended Stories