ಅಯ್ಯೋ ಇದೇನಿದು? ಸಮಂತಾ ಈ ಪ್ಲೇಸಲ್ಲಿದ್ದಾರೇಕೆ?

Suvarna News   | Asianet News
Published : Oct 22, 2021, 07:52 PM IST

ಟಾಲಿವುಡ್‌ನ ಟಾಪ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಪ್ರಸ್ತುತ ತಮ್ಮ ಫ್ರೆಂಡ್‌ ಮತ್ತು ಸಹೋದ್ಯೋಗಿ ಶಿಲ್ಪಾ ರೆಡ್ಡಿಯೊಂದಿಗೆ ರಿಷಿಕೇಶದಲ್ಲಿ (Rishikesh) ವೇಕೆಷನ್‌ನಲ್ಲಿದ್ದಾರೆ. ಸಮಂತಾ ರುತ್ ಪ್ರಭು ಪ್ರಸ್ತುತ ಗಂಗಾ (Ganga) ನದಿಯ ಬಳಿ ಇರುವ ಐಷಾರಾಮಿ ರೆಸಾರ್ಟ್‌ನಲ್ಲಿ (resort) ವಾಸಿಸುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಸಮಂತಾ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಮಾಡಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು. 

PREV
18
ಅಯ್ಯೋ ಇದೇನಿದು? ಸಮಂತಾ ಈ ಪ್ಲೇಸಲ್ಲಿದ್ದಾರೇಕೆ?

ಸಮಂತಾರ ಪರ್ಸನಲ್‌ ಲೈಫ್‌ (Personal Life) ಕಳೆದ ಕೆಲವು ತಿಂಗಳುಗಳಿಂದ ಬಾರೀ ಚರ್ಚೆಯಲ್ಲಿದೆ. ಪತಿ ನಾಗ ಚೈತನ್ಯ (Nagachaitanya) ರಿಂದ ಬೇರೆಯಾದ ಕಾರಣದಿಂದ ಈ ನಟಿ ಸುದ್ದಿಯಲ್ಲಿದ್ದರು. ಅದೇ ಸಮಯದಲ್ಲಿ ಆಕೆಯ ವಿವಾಹೇತರ ಸಂಬಂಧ, ಗರ್ಭಪಾತ (Termination of Pregnancy) ಮತ್ತು ಮುಂತಾದ ವದಂತಿಗಳು ಸಹ ಬಂದವು. ಆದರೆ ಇವೆಲ್ಲವೂ ಕೇವಲ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರ ಸುಳ್ಳು ಊಹಾಪೋಹಗಳಾಗಿವೆ.
 

 

 

28

ನಟಿ ಸಮಂತಾ ರುತ್ ಪ್ರಭು ಪ್ರಸ್ತುತ ತನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ (Family) ಉತ್ತಮ ಸಮಯವನ್ನು (Bonding) ಕಳೆಯುತ್ತಿದ್ದಾರೆ. ಗಂಗಾ ನದಿಯ ದಡದಲ್ಲಿರುವ ರಿಷಿಕೇಶದ ಅತ್ಯಂತ ಐಷಾರಾಮಿ ರೆಸಾರ್ಟ್‌ನಲ್ಲಿ (Luxurious Resort) ಸಮಂತಾ ಕಾಣಿಸಿಕೊಂಡಿದ್ದಾರೆ. 
 

38

ಈಗ, ಸಮಂತಾ ಹಿಮಾಲಯದ ಮಡಿಲಲ್ಲಿ ಮತ್ತು ಗಂಗಾ ತೀರದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತಿದ್ದಾರೆ. ಅವರು ಪ್ರಸ್ತುತ ರಿಷಿಕೇಶದ ಐಷಾರಾಮಿ ರೆಸಾರ್ಟ್ The Roseate Gangesನಲ್ಲಿ ತಂಗಿದ್ದಾರೆ.

48

 ಅವರು ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ  ಪರ್ವತ, ಮಂಗಗಳು, ಇನ್ಫಿನಿಟಿ ಪೂಲ್, ದೊಡ್ಡ ಸ್ಪೈಡರ್ ವೆಬ್ ಮುಂತಾದ ಕೆಲವು ಪೋಟೋಗಳುನ್ನು   ಪೋಸ್ಟ್ ಮಾಡಿದ್ದಾರೆ. ಆದರೆ ಸಮಂತಾ ಅವರು ಫೋಟೋಗಳ ಲೋಕೆಷನ್‌ ಟ್ಯಾಗ್‌ ಮಾಡಿಲ್ಲ.

58

ಸಮಂತಾ ಅವರ ಫ್ರೆಂಡ್‌ ಶಿಲ್ಪಾ ರೆಡ್ಡಿ ಅವರು ಟ್ರಕ್ಕಿಂಗ್‌  ಹೊರಟಿದ್ದಾರೆ ಎಂದು ಬಹಿರಂಗಪಡಿಸಲು ಫೋಟೋವನ್ನು ಹಂಚಿಕೊಂಡಿದ್ದಾರೆ. ಸ್ಯಾಮ್ ಮತ್ತು ಶಿಲ್ಪಾ ಇಬ್ಬರೂ ಶ್ರೀ ಸ್ವಾಮಿ ಪುರುಷೋತ್ತಮ್ ನಂದ್ ಜೀ ಮಹಾರಾಜ್ ವಶಿಷ್ಠ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

68

ಹಂಚಿಕೊಂಡಿರವ ಫೋಟೋದಲ್ಲಿ  ರಿಷಿಕೇಶದ ಹೊರವಲಯದಲ್ಲಿರುವ ಆಶ್ರಮದ ಆವರಣದ ಪ್ರವೇಶ ದ್ವಾರವನ್ನು ಕಾಣಬಹುದಾಗಿದೆ. ಗುರು ವಶಿಷ್ಠ ಗುಹೆ ಶಿವಪುರಿಯ ಆಲದ ಮರದ ಫೋಟೋವನ್ನು ಸಮಂತಾ ಶೇರ್‌
ಮಾಡಿಕೊಂಡಿದ್ದಾರೆ. ವಸಿಷ್ಠ ಸಪ್ತಋಷಿ ಅಥವಾ ಬ್ರಹ್ಮ ದೇವರ ಮೊದಲ ಸೃಷ್ಟಿ ಎಂದು ಹೇಳಲಾಗುತ್ತದೆ.

 

78

ರಸ್ಕಿನ್ ಬಾಂಡ್ ಪುಸ್ತಕವನ್ನು ಓದುತ್ತಿರುವ ಬಗ್ಗೆ ಸಮಂತಾ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಬಹಿರಂಗಪಡಿಸಿದ್ದರು. ಸಮಂತಾ ಊಳಿದು ಕೊಂಡಿರುವ The Roseate Gangesನಲ್ಲಿ ಪ್ರತಿ ರಾತ್ರಿಗೆ 26,897 ರಿಂದ 50,000 ರೂ ವೆಚ್ಚವಾಗಬಹುದು.

88

ಶೀಘ್ರದಲ್ಲೇ ಕೆಲಸಕ್ಕೆ ಮರಳಲಿರುವ ಸಮಂತಾ ಅವರು ಇತ್ತೀಚೆಗೆ ಎರಡು ದ್ವಿಭಾಷಾ ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ನಿರ್ದೇಶಕರಾದ ಹರಿ ಮತ್ತು ಹರೀಶ್ ಒಂದು ಸಿನಿಮಾ  ನಿರ್ದೇಶಿಸಿದ್ದಾರೆ ಹಾಗೂ ಎರಡನೆಯದು ಚೊಚ್ಚಲ ನಿರ್ದೇಶಕ ಶಾಂತಾರೂಬನ್ ಅವರ ಸಿನಿಮಾವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories