ಉರ್ಫಿ ಜಾವೇದ್ ಅವರ ಬ್ಯಾಕ್‌ಲೆಸ್ ಲುಕ್ ಮೇಲೆ ನೆಟ್ಟಿಗರ ಕೆಂಗಣ್ಣು!
ಈ ದಿನಗಳಲ್ಲಿ ಬಾಲಿವುಡ್ (Bollywood) ಸೆಲೆಬ್ರಿಟಿಗಳು ಅತ್ಯಂತ ಬ್ಯುಸಿಯಾಗಿದ್ದಾರೆ. ಬಹಳ ಸಮಯದಿಂದ ಬಾಕಿ ಉಳಿದಿರುವ ಹಲವು ಪ್ರಾಜೆಕ್ಟ್‌ಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಯತ್ನಿಸುತ್ತಿದ್ದಾರೆ. ಅನೇಕರು ಮುಂಬೈನಲ್ಲಿ ತಮ್ಮ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರೆ, ಇನ್ನು ಕೆಲವರು ನಗರದ ಹೊರಗೆ ಅಥವಾ ವಿದೇಶಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಈ ನಡುವೆ, ಅರ್ಜುನ್ ಕಪೂರ್ (Arjun Kapoor) ಮತ್ತು ತಾರಾ ಸುತಾರಿಯಾ (Tara Sutaria) ತಮ್ಮ ಮುಂದಿನ ಕೆಲಸದ ಶೂಟಿಂಗ್‌ಗೆ ವರ್ಸೋವಾ ಜೆಟ್ಟಿಯಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಅರ್ಜುನ್ ಉದ್ದ ಕೂದಲಿನೊಂದಿಗೆ ಕಾಣಿಸಿಕೊಂಡರು. ಅವರು ಕನ್ನಡಕ ಹಾಗೂ ಮಾಸ್ಕ್ ಧರಿಸಿದ್ದರು. ಅವರೊಂದಿಗೆ ಗುರುತಿಸಲ್ಪಟ್ಟ ತಾರಾ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಮತ್ತೊಂದೆಡೆ, ಟಿವಿ ನಟಿ ಉರ್ಫಿ ಜಾವೇದ್ (Urfi Javed) ತಮ್ಮ ಬೋಲ್ಡ್ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ