Aryan Drug Case:ಮಗನ ಬಂಧನದ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಶಾರುಖ್‌!

Suvarna News   | Asianet News
Published : Oct 22, 2021, 06:11 PM ISTUpdated : Oct 22, 2021, 06:13 PM IST

ಅಕ್ಟೋಬರ್ 2 ರಂದು ಕ್ರೂಸ್ ಡ್ರಗ್ಸ್ ಪಾರ್ಟಿ (Drug Party) ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್‌ (ಗೌರಿ ಖಾನ್‌) ಅವರ ಪುತ್ರ ಆರ್ಯನ್ ಖಾನ್ (Aryan Khan) ಇನ್ನೂ ಜೈಲಿನಲ್ಲಿದ್ದಾನೆ. ಬುಧವಾರ, ಕೋರ್ಟ್ ಮತ್ತೊಮ್ಮೆ ಆರ್ಯನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈಗ ಆರ್ಯನ್ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26 ರಂದು ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನೆಡೆಯಲಿದೆ. ಅಕ್ಟೋಬರ್ 8ರಿಂದ ಆರ್ಯನ್ ಮುಂಬೈನ ಆರ್ಥರ್ ರೋಡ್‌ ಜೈಲಿನಲ್ಲಿದ್ದಾನೆ. ಶಾರುಖ್ ತಮ್ಮ ಮಗ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ಇದೇ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡಿದ್ದಾರೆ. ವಾಸ್ತವವಾಗಿ, ಅವರು  ತಮ್ಮ ಮಗನನ್ನು ಭೇಟಿಯಾಗಲು ಆರ್ಥರ್ ರೋಡ್ ಜೈಲಿಗೆ ಹೋಗಿದ್ದರು. ಜನ ಜಂಗುಳಿಯಲ್ಲಿ ಸಿಲುಕಿರುವ ಶಾರುಖ್ ಖಾನ್ ಫೋಟೋಗಳನ್ನು ಕೆಳಗೆ ನೋಡಿ  

PREV
17
Aryan Drug Case:ಮಗನ ಬಂಧನದ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಶಾರುಖ್‌!

ಆರ್ಯನ್ ಖಾನ್ ಬಂಧನದ (Arrest) ನಂತರ ಶಾರುಖ್ ಖಾನ್ ಮೊದಲ ಬಾರಿಗೆ  ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಮಗನನ್ನು ಭೇಟಿಯಾಗಲು ಗುರುವಾರ ಬೆಳಗ್ಗೆ ಆರ್ಥರ್ ರೋಡ್ ಜೈಲಿಗೆ ಬಂದರು. ಈ ಸಮಯದಲ್ಲಿ, ಅವರು ಲೈಟ್‌ ಸ್ಕೈ ಬ್ಲ್ಯೂ ಬಣ್ಣದ ಟಿ-ಶರ್ಟ್ ಮತ್ತು ಕನ್ನಡಕ ಧರಿಸಿದ್ದರು.
 

27
Shah Rukh Khan

ಖಾನ್ ತನ್ನ ಮಗ ಆರ್ಯನ್ ಜೊತೆ ಸುಮಾರು 20 ನಿಮಿಷಗಳ ಕಾಲ ಇಂಟರ್‌ಕಾಮ್ ಮೂಲಕ ಜೈಲಿನ ಮೀಟಿಂಗ್ ಹಾಲ್‌ನಲ್ಲಿ ಮಾತನಾಡಿದ್ದಾರೆ ಎಂದು ವರದಿಗಳು ಹೇಳಿವೆ. COVID-19 ಸಾಂಕ್ರಾಮಿಕ ಪ್ರೋಟೋಕಾಲ್‌ನಿಂದಾಗಿ, ಜೈಲಿನಲ್ಲಿ ಫಿಸಿಕಲ್‌ ಮೀಟಿಂಗ್‌ಗೆ ಅನುಮತಿ ನೀಡುತ್ತಿಲ್ಲ.

37
Shah Rukh Khan

ಇಬ್ಬರೂ ಸುಮಾರು 20 ನಿಮಿಷಗಳ ಕಾಲ ಜೊತೆಗಿದ್ದರು. ಮಾತನಾಡುವಾಗ ಇಬ್ಬರ ನಡುವೆ ಗಾಜಿನ ಗೋಡೆ ಇತ್ತು. ಇಬ್ಬರೂ ಇಂಟರ್‌ಕಾಮ್‌ನಲ್ಲಿ ಮಾತನಾಡಿದ್ದಾರೆ. ಈ ಸಭೆಯಲ್ಲಿ ಜೈಲು ಅಧಿಕಾರಿಗಳು ಕೂಡ ಹಾಜರಿದ್ದರು.

47

ಈ ಹಿಂದೆ ಶಾರುಖ್ ಮತ್ತು ಅವರ ಪತ್ನಿ ಗೌರಿ ಖಾನ್ ಮಗ ಆರ್ಯನ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದರು. ಈ ದಿನಗಳಲ್ಲಿ ಇಬ್ಬರೂ ಮಗನ ಕಾರಣ ಚಿಂತಿತರಾಗಿದ್ದಾರೆ ಮತ್ತು ಅವನ ಆರೋಗ್ಯದ (Health) ಕುರಿತು ಜೈಲಿನ ಅಧಿಕಾರಿಗಳಿಂದ ನಿರಂತರವಾಗಿ ಮಾಹಿತಿ ಪಡೆಯುತ್ತಲೇ ಇರುವುದು ತಿಳಿದು ಬಂದಿದೆ.

57

ಆರ್ಥರ್ ರೋಡ್ ಜೈಲಿಗೆ ಹೋದ ಶಾರುಖ್ ಖಾನ್, ಅಲ್ಲಿ ಸೇರಿದ್ದ ಭಾರಿ ಸಂಖ್ಯೆಯ ಮಾಧ್ಯಮಗಳು ಮತ್ತು ಕ್ಯಾಮರಾಮನ್‌ಗಳನ್ನು ಕಂಡು ಆಘಾತಕ್ಕೊಳಗಾದರು.ತನ್ನ ಮಗನನ್ನು ಭೇಟಿಯಾಗಲು ಹೊರಬಂದ ಶಾರುಖ್ ಖಾನ್ ತನ್ನ ಕಾರನ್ನು ತಲುಪುವುದು ಕಷ್ಟವಾಯಿತು.ಅವರನ್ನು ಬಾಡಿಗಾರ್ಡ್‌ (Bodygaurd) ಕಾರಿನ ಬಳಿ ಕರೆತಂದರು.

67
Shah Rukh Khan

ವರದಿಗಳ ಪ್ರಕಾರ, ಆರ್ಯನ್ ಖಾನ್ ಕೂಡ ಇತರೆ ಕೈದಿಗಳಂತೆಯೇ ಜೈಲಿನಲ್ಲಿದ್ದಾರೆ. ಒಬ್ಬ ಸೂಪರ್ ಸ್ಟಾರ್ (Supe Star) ಮಗನಾಗಿದ್ದರೂ, ಅವನಿಗೆ ಪ್ರತ್ಯೇಕ ಸೌಲಭ್ಯವನ್ನು ಒದಗಿಸಿಲ್ಲ. ಪ್ರಸ್ತುತ ಸುಮಾರು 3200 ಕೈದಿಗಳು ಆರ್ಥರ್ ರೋಡ್ ಜೈಲಿನಲ್ಲಿ ಇದ್ದಾರೆ.

77

ಆರ್ಯನ್ ಇತರ ಕೈದಿಗಳಂತೆ ಜೈಲಿನಲ್ಲಿ ವಾಸಿಸುತ್ತಿದ್ದಾನೆ, ಅವನು ಎಲ್ಲರೊಂದಿಗೆ ಬೆಳಿಗ್ಗೆ 6 ಗಂಟೆಗೆ ಏಳಬೇಕು ಮತ್ತು 7 ಗಂಟೆಗೆ ಉಪಹಾರವನ್ನು ನೀಡಲಾಗುತ್ತದೆ. ಸಂಜೆ ತಮ್ಮ ಬ್ಯಾರಕ್‌ಗೆ ಮರಳಬೇಕು. ಈ ರೀತಿಯಾಗಿ, ಆರ್ಯನ್‌ಗೆ ಅನೇಕ ನಿರ್ಬಂಧಗಳನ್ನು (Restrictions) ವಿಧಿಸಲಾಗಿದೆ.

click me!

Recommended Stories