ಬಾಲಿವುಡ್ ಬ್ಯಾಡ್ ಬಾಯ್ ಎನಿಸಿಕೊಂಡಿದ್ದರೂ ನಟ ಸಲ್ಮಾನ್ ಖಾನ್ ತಮ್ಮ ಚಿತ್ರಗಳಲ್ಲಿ ಕಟ್ಟುನಿಟ್ಟಾಗಿ 'ನೋ ಕಿಸ್ ಪಾಲಿಸಿ' ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೂ, ಅವರು ಒಮ್ಮೆ ತಮ್ಮ ನೀತಿ ಸಡಿಲಿಸಿದ್ದನ್ನು ರೆಡ್ಡಿಟ್ ಬಳಕೆದಾರರು ಹುಡುಕಿ ತೆಗೆದಿದ್ದಾರೆ.
ಸಲ್ಮಾನ್ ಖಾನ್ ಕಟ್ಟುನಿಟ್ಟಾದ ನೋ ಕಿಸ್ ನೀತಿಯನ್ನು ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ, ನಟನು ತನ್ನ ಸಹ-ನಟರೊಂದಿಗೆ ಚಿತ್ರೀಕರಣದ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದರೂ ಸಹ, ಅವರೊಂದಿಗೆ ಆತ್ಮೀಯ ದೃಶ್ಯವನ್ನು ಹಂಚಿಕೊಂಡಿಲ್ಲ.
210
ಇದಕ್ಕೆ ಅವರ ಮುಖ್ಯ ಕಾರಣ, ತಮ್ಮ ಚಿತ್ರಗಳನ್ನು ಕುಟುಂಬ ನೋಡುತ್ತಿರುತ್ತದೆ. ಕುಟುಂಬದ ಪ್ರತಿಯೊಬ್ಬರೂ ಮುಜುಗರವಿಲ್ಲದೆ ನೋಡುವಂತೆ ಸಿನಿಮಾ ಇರಬೇಕು ಎಂದು ಬಯಸುವುದು.
310
ಇದೇ ಕಾರಣಕ್ಕೆ ಸಲ್ಮಾನ್ ನಟಿಯರಿಗೆ ಆನ್ ಸ್ಕ್ರೀನ್ ಕಿಸ್ ಮಾಡುವುದೂ ಇಲ್ಲ, ಅತಿಯಾದ ಹಿಂಸಾಚಾರ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದೂ ಇಲ್ಲ.
410
ನಟ ತಮ್ಮ ಈ ನೋ ಕಿಸ್ ಪಾಲಿಸಿಯನ್ನು ಎಷ್ಟು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ ಎಂದರೆ ರಾಧೆ ಚಿತ್ರಕ್ಕಾಗಿ ಅವರು ಈ ನೀತಿ ಮುರಿಯಬೇಕಾದ ಪರಿಸ್ಥಿತಿ ಬಂತು.
510
ಆ ಸಂದರ್ಭದಲ್ಲಿ ತಮ್ಮ ನೀತಿಯೂ ಪಾಲನೆಯಾಗಬೇಕು ಹಾಗೂ ನಿರ್ದೇಶಕರಿಗೂ ಸಮಾಧಾನವಾಗಬೇಕು ಎಂಬಂಥ ಪರಿಹಾರವೊಂದನ್ನು ನಟ ಕಂಡುಕೊಂಡಿದ್ದರು.
610
ನಟಿ ದಿಶಾ ಪಟಾನಿಯ ಬಾಯಿಗೆ ಪ್ಲ್ಯಾಸ್ಟರ್ ಹಾಕಿಸಿ ಕಿಸ್ ಮಾಡಿದ್ದರಂತೆ ಸಲ್ಮಾನ್ ಖಾನ್. ಟೇಪ್ ಅಡ್ಡ ಇದ್ದಿದ್ದರಿಂದ ಇದು ಅಧಿಕೃತವಾಗಿ ಕಿಸ್ ಅಲ್ಲದಿದ್ದರೂ ದೃಶ್ಯದಲ್ಲಿ ಮುತ್ತಿನಂತೆಯೇ ಕಾಣುತ್ತಿತ್ತು..
710
ಆದಾಗ್ಯೂ, 1996ರಲ್ಲಿ ಸಲ್ಮಾನ್ ತಮ್ಮ ನೀತಿಯನ್ನು ಮುರಿದಂತೆ ತೋರುತ್ತಿದೆ. ಸಲ್ಮಾನ್ ಆನ್-ಸ್ಕ್ರೀನ್ ಕಿಸ್ ದೃಶ್ಯವನ್ನು ಹೊಂದಿದ್ದರು ಎಂದು ರೆಡ್ಡಿಟ್ ಬಳಕೆದಾರರು ಚಿತ್ರದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.
810
ಈ ನಟಿ ಐಶ್ವರ್ಯಾ ಇರಬೇಕು, ಹೇಗಿದ್ದರೂ ಪ್ರೇಮಿಯಾಗಿದ್ದಳಲ್ಲ ಎಂದು ನೀವಂದುಕೊಂಡರೆ ತಪ್ಪು, ನಟ ಚಿತ್ರದಲ್ಲಿ ಕಿಸ್ ಮಾಡಿರುವುದು ಅತ್ಯಂತ ಜನಪ್ರಿಯ ಸಹನಟಿ ಕರಿಷ್ಮಾ ಕಪೂರ್ ಗೆ
910
ಆದರೆ, ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು, ಅವರಲ್ಲಿ ಕೆಲವರು, 'ಅವರು ನಿಜವಾಗಿ ಚುಂಬಿಸುತ್ತಿಲ್ಲ. ಅವನು ಅವಳ ಗಲ್ಲದ ಬದಿಗೆ ಚುಂಬಿಸುತ್ತಾನೆ. ಅವಳ ತಲೆ ಬೇರೆ ಕಡೆಗೆ ತಿರುಗಿದೆ' ಎಂದಿದ್ದಾರೆ. .
1010
2017ರಲ್ಲಿ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಕತ್ರಿನಾ ಕೈಫ್ಗೆ ಸಲ್ಮಾನ್ ತೆರೆಯ ಮೇಲೆ ಮುತ್ತು ಹಂಚಿಕೊಳ್ಳಲು ಕೇಳಲಾಯಿತು. ಆದರೆ, ಸೂಪರ್ ಸ್ಟಾರ್ ನಿರಾಕರಿಸಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರು ಸಲ್ಮಾನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲವೊಂದು ಹೇಳಿದೆ.