ಗುರುತು ಮರೆ ಮಾಚಿಕೊಂಡು ಹೋಗಿ ರಸ್ತೆಬದಿ ಈ ಫುಡ್ ತಿಂತಾರೆ ದೀಪಿಕಾ ಪಡುಕೋಣೆ!

Published : May 29, 2024, 02:08 PM IST

ತಾಯಿಯಾಗಿರುವ ದೀಪಿಕಾ ಪಡುಕೋಣೆಗೆ ಈ ಫುಡ್ ಎಂದರೆ ಪಂಚಪ್ರಾಣ. ಅದರಲ್ಲೂ ರಸ್ತೆ ಬದಿ ತಿಂದರೇ ತೃಪ್ತಿ. ಇದನ್ನು ತಿನ್ನಲೋಸುಗ ಅವರು ಮುಖ ಮರೆ ಮಾಚಿಕೊಂಡು ರಸ್ತೆಬದಿಯ ಮಾರಾಟಗಾರರಿಂದ ಕೊಂಡು ತಿನ್ನುತ್ತಾರೆ.

PREV
18
ಗುರುತು ಮರೆ ಮಾಚಿಕೊಂಡು ಹೋಗಿ ರಸ್ತೆಬದಿ ಈ ಫುಡ್ ತಿಂತಾರೆ ದೀಪಿಕಾ ಪಡುಕೋಣೆ!

ಸಧ್ಯ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. 2018ರಲ್ಲಿ ತಮ್ಮ ಪ್ರೇಮಿ ರಣವೀರ್ ಸಿಂಗ್ ಜೊತೆ ವಿವಾಹವಾದ ದೀಪಿಕಾ 2024ರಲ್ಲಿ ತಾಯಿಯಾಗುವ ಸಿಹಿಸುದ್ದಿ ಘೋಷಿಸಿದ್ದಾರೆ.

28

ಇತ್ತೀಚೆಗೆ ಒಂದೆರಡು ಕಡೆ ಕಾಣಿಸಿಕೊಂಡ ಗುಳಿ ಕೆನ್ನೆ ಚೆಲುವೆ ಪ್ರಗ್ನೆನ್ಸಿ ಗ್ಲೋನಿಂದ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಾರೆ. 

38

ಸಾಮಾನ್ಯವಾಗಿ ಗರ್ಭಿಣಿಯರಿಗೆ ಏನೇನೋ ತಿನ್ನುವ ಬಯಕೆಯಾಗುತ್ತದೆ. ಯಾವಾಗಲೂ ಸೇರದ ಆಹಾರವೂ ಇಷ್ಟವಾಗಬಹುದು. ಅಂದ ಹಾಗೆ ದೀಪಿಕಾ ಪಡುಕೋಣೆಯ ನೆಚ್ಚಿನ ಆಹಾರ ಏನು ಗೊತ್ತಾ?

48

ಇದನ್ನು ತಿನ್ನಲೋಸುಗ ಅಜ್ಞಾತವಾಗಿ ಹೋಗಿ ರಸ್ತೆ ಬದಿಯ ಅಂಗಡಿಗಳಲ್ಲಿ ಸವಿದು ಬರುವುದಾಗಿ ಹೇಳಿದ್ದರು. ಇಷ್ಟಕ್ಕೂ ದೀಪಿಕಾ ಹೀಗೆ ರಸ್ತೆ ಬದಿಯಲ್ಲಿ ಇಷ್ಟ ಪಟ್ಟು ತಿನ್ನುವ ಆಹಾರ ಯಾವುದು ಗೊತ್ತಾ?
ಪಾನಿಪುರಿ.

58

ಹೌದು, ಪಾನಿಪುರಿಯೆಂದರೆ ನಾಲಿಗೆಯಲ್ಲಿ ನೀರೂರುತ್ತದಂತೆ ನಟಿಗೆ. ಅದರಲ್ಲೂ ಬಾಂದ್ರಾದಲ್ಲಿ ಮತ್ತು ಕೋಲ್ಕತ್ತಾದಲ್ಲಿ ಸಬ್ಯಸಾಚಿ ಮುಖರ್ಜಿ ಅವರ ಅಂಗಡಿಯ ಹೊರಗೆ ಇರುವ ಪಾನಿಪುರಿ ಅಂಗಡಿಗಳಿಗೆ ಆಗಾಗ ಮುಖ ಮುಚ್ಚಿಕೊಂಡು ಹೋಗಿ ಸವಿದು ಬರುತ್ತಾರೆ. 

68

ಉಳಿದಂತೆ, ಕೇನ್ಸ್‌ನಲ್ಲಿ ಭಾಗವಹಿಸಿ ಅಲ್ಲಿ ಟ್ರಫಲ್ ಫ್ರೈಸ್‌ನ್ನು ಟ್ರೈ ಮಾಡಿದ ಬಳಿಕ ಅದು ನಟಿಯ ಎರಡನೇ ಫೇವರೇಟ್ ಆಹಾರವಾಗಿದೆ. 

78

ದೀಪಿಕಾ ಪಡುಕೋಣೆ ಅವರು ತಮ್ಮ ಸಾಂಪ್ರದಾಯಿಕ ಬೇರುಗಳನ್ನು ಮರೆತಿಲ್ಲ ಮತ್ತು ಅವರು ದಕ್ಷಿಣ ಭಾರತದ ಭಕ್ಷ್ಯಗಳನ್ನು ಮತ್ತು ಮುಖ್ಯವಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಇಷ್ಟಪಡುತ್ತಾರೆ .

88

ಒಮ್ಮೆ, ಕಾರ್ಯಕ್ರಮವೊಂದರಲ್ಲಿ, ದೀಪಿಕಾ ಅವರು ಯಾವುದೇ ದಿನ ಮತ್ತು ಯಾವುದೇ ಸಮಯದಲ್ಲಿ ರಸಂ ಅನ್ನವನ್ನು ಸೇವಿಸಬಲ್ಲೆ ಎಂದು ತಿಳಿಸಿದ್ದಾರೆ. 

Read more Photos on
click me!

Recommended Stories