Richa Chadha Birthday: ನಟಿಯ ಕೆರಿಯರ್‌ ಹಾಗೂ ಲವ್‌ ಸ್ಟೋರಿ!

First Published Dec 18, 2021, 8:56 PM IST

ಡಿಸೆಂಬರ್ 18, 1986 ರಂದು, ಪಂಜಾಬ್‌ನ ಅಮೃತಸರದಲ್ಲಿ  ಜನಿಸಿದ ರಿಚಾ ಚಡ್ಡಾ (Richa chadha) ದೆಹಲಿಯಲ್ಲಿ ಬೆಳೆದರು. ಸೋಮೇಶ್ ಚಡ್ಡಾ-ಕುಸುಮ್ ಚಡ್ಡಾ ಅವರ ಹೆತ್ತವರು. ಖಲಿಸ್ತಾನ್ ಚಳವಳಿಯ ದೃಷ್ಟಿಯಿಂದ ಅವರ ಪೋಷಕರು ದೆಹಲಿಗೆ ಸ್ಥಳಾಂತರಗೊಂಡರು. ಅವರು ತಮ್ಮ ಶಿಕ್ಷಣವನ್ನು ದೇಶದ ರಾಜಧಾನಿಯಲ್ಲಿ ಮಾಡಿದರು. ಅವರ ಪೋಷಕರು ಅವರು ಟಿವಿ ಪತ್ರಕರ್ತರಾಗಬೇಕೆಂದು ಬಯಸಿದ್ದರು, ಆದರೆ ಸೋಷಿಯಲ್ ಮೀಡಿಯಾದಲ್ಲಿ ಪಿಜಿ ಡಿಪ್ಲೊಮಾ ಮಾಡಿದ ನಂತರ ರಿಚಾ ಮುಂಬೈಗೆ ತೆರಳಿದರು. ಮಾಧ್ಯಮಗಳಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸುವ ಬದಲು ಮಾಡೆಲಿಂಗ್ ಮಾಡಲು ಪ್ರಾರಂಭಿಸಿದರು. ಇದರೊಂದಿಗೆ ರಂಗಭೂಮಿಗೂ ಸೇರಿಕೊಂಡರು. ಇಲ್ಲಿಂದ ಅವರ ಸಿನಿಮಾ ಪಯಣ ಆರಂಭವಾಯಿತು. ರಿಚಾ ಅವರ ಚಲನಚಿತ್ರ ವೃತ್ತಿಜೀವನ ಮತ್ತು ಪ್ರೇಮ ಕಥೆ  ಬಗ್ಗೆ ವಿವರ ಇಲ್ಲಿದೆ. 

ರಿಚಾ ಚಡ್ಡಾ   'ಓಯ್ ಲಕ್ಕಿ! ಲಕ್ಕಿ ಓಯ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ನಟನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇದರ ನಂತರ ಅವರನ್ನು ಅನುರಾಗ್ ಕಶ್ಯಪ್ ನೋಡಿದರು ಮತ್ತು 'ಗ್ಯಾಂಗ್ಸ್ ಆಫ್ ವಾಸೇಪುರ್' ಚಿತ್ರದಲ್ಲಿ ನಟಿಸಿದರು.

ಈ ಸಿನಿಮಾದಲ್ಲಿ ನಗ್ಮಾ ಖಾತೂನ್ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಅಚ್ಚುಮೆಚ್ಚಿನ ಪಾತ್ರಧಾರಿಯಾದರು. ಮನೋಜ್ ಬಾಜಪೇಯಿಯವರಿಗೆ ಸಮವಾಗಿಅಭಿನಯಿಸಿ ಮೆಚ್ಚುಗೆ ಗಳಿಸಿದರು. ಇದಾದ ನಂತರ ನಟಿ ಹಿಂತಿರುಗಿ ನೋಡಲಿಲ್ಲ.

ಅವರು 'ಫುಕ್ರೆ'ಯಲ್ಲಿ ಮುಗ್ಧೆ ಪಂಜಾಬಿ ಹುಡುಗಿ ಆಗುವ ಮೂಲಕ ಜನರನ್ನು ಆಕರ್ಷಿಸಿದರು. ಅದೇ ಸಮಯದಲ್ಲಿ, ರಾಮ್-ಲೀಲಾದಲ್ಲಿ ದೀಪಿಕಾಗೆ ಅತ್ತಿಗೆಯಾಗುವ ಮೂಲಕ, ಅವರು ವಿಮರ್ಶಕರೂ ಕೂಡ ಫ್ಯಾನ್‌ ಆಗುವಂತೆ  ಮಾಡಿದರು.

ಇದರಲ್ಲಿ 'ಮೇನ್ ಔರ್ ಚಾರ್ಲ್ಸ್', 'ಚಾಕ್ ಎನ್ ಡಸ್ಟರ್', 'ಸರ್ಬ್ಜಿತ್', 'ಜಿಯಾ ಔರ್ ಜಿಯಾ', 'ಫುಕ್ರೆ ರಿಟರ್ನ್ಸ್', '3 ಸ್ಟೋರೀಸ್', 'ದಾಸ್ ದೇವ್', 'ಲವ್ ಸೋನಿಯಾ', 'ಇಷ್ಕರಿಯಾ', 'ಪಂಗಾ' ', 'ಶಕೀಲಾ' ಮತ್ತು 'ಮೇಡಂ ಮುಖ್ಯಮಂತ್ರಿ' ಸಿನಿಮಾಗಳು ಸೇರಿವೆ.

ಅವರು 2013 ರಲ್ಲಿ 'ಗ್ಯಾಂಗ್ಸ್ ಆಫ್ ವಾಸೇಪುರ್' ಚಿತ್ರಕ್ಕಾಗಿ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. 'ಫುಕ್ರೆ' ಗಾಗಿ ಅತ್ಯುತ್ತಮ ಹಾಸ್ಯನಟಗಾಗಿ ಸ್ಕ್ರೀನ್ ಪ್ರಶಸ್ತಿಯನ್ನು ಗೆದ್ದರು. ಅವರು 'ಮಸಾನ್' ಗಾಗಿ ವರ್ಷದ ನಟನೆಗಾಗಿ ಸ್ಟಾರ್ಡಸ್ಟ್ ಪ್ರಶಸ್ತಿಯನ್ನು ಪಡೆದರು.
 

OTT ನಲ್ಲಿ ರಿಚಾ ಇನ್ಸೈಡ್ ಎಡ್ಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸೈಡ್ ಎಡ್ಜ್‌ನ ಮೂರನೇ ಸೀಸನ್ ಬಿಡುಗಡೆಯಾಗಿದೆ, ಈ ಸಮಯದಲ್ಲಿ, ನಟಿ ತನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ ಮತ್ತು ಬಾಲ್ಯದಲ್ಲಿ ಅಣ್ಣನೊಂದಿಗೆ ಕ್ರಿಕೆಟ್ ನೋಡುತ್ತಿದ್ದ ಆಕೆಗೆ ಆ ಕಾಲದಲ್ಲಿ ರಾಹುಲ್ ದ್ರಾವಿಡ್ ಎಂದರೆ ತುಂಬಾ ಇಷ್ಟ ಎಂದು ಹೇಳಿದರು.

ಚಲನಚಿತ್ರಗಳ ಹೊರತಾಗಿ, ರಿಚಾ ತನ್ನ ಫಿಯಾನ್ಸಿ ಮತ್ತು ನಟ ಅಲಿ ಫಜಲ್ ಜೊತೆಯ ಸಂಬಂಧದ ಕಾರಣದಿಂದ ಆಗಾಗ ಚರ್ಚೆಯಲ್ಲಿರುತ್ತಾರೆ. ಇಬ್ಬರ ಫೋಟೋಗಳುಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಅಲಿ ಮತ್ತು ರಿಚಾ 'ಫುಕ್ರೆ' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು ಮತ್ತು  ಅಲ್ಲಿಂದ ಪ್ರಾರಂಭವಾದ ಸ್ನೇಹ ನಂತರ  ಪ್ರೀತಿಗೆ ತಿರುಗಿತು. 2019 ರಲ್ಲಿ, ರಿಚಾ ಹುಟ್ಟುಹಬ್ಬದಂದು, ಅಲಿ ಅವರನ್ನು ಮದುವೆಗೆ ಪ್ರಪೋಸ್‌ ಮಾಡಿದರು ಮತ್ತು ರಿಚಾ ಅಲಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.  2020 ರಲ್ಲಿ ಮದುವೆಯಾಗಲಿದ್ದರು, ಆದರೆ ಆದರೆ ಕೋವಿಡ್‌ ಕಾರಣದಿಂದ ಮದುವೆಯನ್ನು ಮುಂದೂಡಲಾಯಿತು.

'ಅವರಿಬ್ಬರು ನಿಜವಾಗಿಯೂ ಒಳ್ಳೆಯ ಸ್ನೇಹಿತರು. ಮೊದಲು ಸ್ನೇಹದಿಂದ ಫ್ರಾರಂಭವಾಯಿತು. ಅವರು ಸಾಹಿತ್ಯ, ರಂಗಭೂಮಿ, ನಮ್ಮ ಕಾಮನ್‌ ಪ್ಯಾಶನ್‌, ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಮಾತುಕತೆಗಳನ್ನು ಶುರು ಮಾಡಿದರು. ಹಾಗಾಗಿ ಅವರ ತಳಹದಿ ತುಂಬಾ ಬಲವಾಗಿದೆ. ಈ ಕಾರಣದಿಂದಾಗಿ,  ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.ಮನೆ ಅಥವಾ ಮನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಒಬ್ಬರೇ ನೋಡಿಕೊಳ್ಳುವ ಯಾವುದೇ ಹೊರೆ ಇಲ್ಲ. ಅವರಿಬ್ಬರು ಎಲ್ಲವನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ' ಎಂದು ರಿಚಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

click me!