ಸುಶಾಂತ್ ಸಿಂಗ್ ಸಾವಿನ ನಂತರ ಮೊದಲ ಬಾರಿಗೆ ಸಹೋದರನೊಂದಿಗೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ
First Published | Oct 5, 2022, 5:28 PM ISTಮಹಾನವಮಿಯ ಸಂದರ್ಭದಲ್ಲಿ ಮಂಗಳವಾರ ಮುಂಬೈನ ಉತ್ತರ ಬಾಂಬೆ ಸರ್ಬೋಜನಿನ್ ದುರ್ಗಾಪೂಜಾ ಪಂಡಲ್‌ಗೆ ಅನೇಕ ಗಣ್ಯರು ಆಗಮಿಸಿದರು. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ (Rhea Chakraborty) ತಮ್ಮ ಸಹೋದರ ಶೋವಿಕ್ ಚಕ್ರವರ್ತಿ (Showik Chakraborty) ಅವರೊಂದಿಗೆ ಕಾಣಿಸಿಕೊಂಡರು. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಆತ್ಮಹತ್ಯೆ ನಂತರ, ರಿಯಾ ಮತ್ತು ಶೋವಿಕ್ ಸಾರ್ವಜನಿಕ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಬಹುಶಃ ಇದೇ ಮೊದಲು. ಇಬ್ಬರೊಂದಿಗೆ ನಟ ಆಶಿಶ್ ಚೌಧರಿ (Ashish Chowdhry) ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ ಸಾಮಾಜಿಕ ಮಾಧ್ಯಮ ಬಳಕೆದಾರರು ರಿಯಾ ಮತ್ತು ಶೋವಿಕ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.