ರಿಚಾ ಚಡ್ಡಾ ಮತ್ತು ಅಲಿ ಫಜಲ್ 12 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಎರಡೂವರೆ ವರ್ಷಗಳ ಹಿಂದೆಯೇ ತಮ್ಮ ಮದುವೆಯನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದರಂತೆ. ಆದರೆ, ಈಗ ಈ ಜೋಡಿ ಶಾಸ್ತ್ರೋಕ್ತವಾಗಿ ಸತಿ ಪತಿಗಳಾಗಿದ್ದಾರೆ. ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ ಸಂಪ್ರದಾಯದಂತೆ ವಿವಾಹವಾದರು. ಅವರ ಮದುವೆಯ ಆರತಕ್ಷತೆಯ ಕೆಲವು ಈ ಸೈಡ್ ಫೋಟೋಗಳು ವೈರಲ್ ಆಗುತ್ತಿದ್ದು, ಇದರಲ್ಲಿ ದಂಪತಿ ಕೇಕ್ ಕತ್ತರಿಸುವುದು ಮತ್ತು ನೃತ್ಯವನ್ನು ನೋಡಬಹುದು.