Rashmika Mandanna: ರಣಬೀರ್‌ ಜೊತೆ ಲಿಪ್‌ ಲಾಕ್‌ ಮಾಡಲು ಪ್ರತ್ಯೇಕ ಚಾರ್ಜ್ ಮಾಡಿದ ಕಿರಿಕ್ ಬೆಡಗಿ, ಸಂಭಾವನೆ ಎಷ್ಟು?

Published : Oct 17, 2023, 12:32 PM IST

'ಅನಿಮಲ್‌' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಮೊದಲ ಲಿರಿಕಲ್ ವೀಡಿಯೊದಲ್ಲಿ, ರಣಬೀರ್ ಕಪೂರ್ ಜೊತೆಗಿನ ರಶ್ಮಿಕಾ ಕಿಸ್ಸಿಂಗ್ ಸೀನ್‌ಗಳು ಹೆಚ್ಚು ವೈರಲ್ ಆಗುತ್ತಿವೆ. ಹೀಗಾಗಿ ಲಿಪ್ ಲಾಕ್ ದೃಶ್ಯಗಳಿಗೆ ರಶ್ಮಿಕಾ ಪ್ರತ್ಯೇಕ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಬಲವಾಗಿ ಕೇಳಿ ಬರ್ತಿದೆ.

PREV
19
Rashmika Mandanna: ರಣಬೀರ್‌ ಜೊತೆ ಲಿಪ್‌ ಲಾಕ್‌ ಮಾಡಲು ಪ್ರತ್ಯೇಕ ಚಾರ್ಜ್ ಮಾಡಿದ ಕಿರಿಕ್ ಬೆಡಗಿ, ಸಂಭಾವನೆ ಎಷ್ಟು?

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಅನಿಮಲ್' ಚಿತ್ರದ  ಹೊಸ ಪೋಸ್ಟರ್ ಹಾಗೂ ಹಾಡು ಬಿಡುಗಡೆಯಾಗಿದೆ. ಅನಿಮಲ್ ಚಿತ್ರದ ಹೊಸ ಪೋಸ್ಟರ್ ಹಾಗೂ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಲಿಪ್ ಲಾಕ್ ಮಾಡುತ್ತಿರುವುದು ವೈರಲ್ ಆಗ್ತಿದೆ. ಕಿರಿಕ್ ಬೆಡಗಿ ರಶ್ಮಿಕಾ, ಬೋಲ್ಡ್ ಆಗಿ ಲಿಪ್‌ಲಾಕ್ ಮಾಡುತ್ತಿರುವುದಕ್ಕೆ ಹಲವಾರು ರೀತಿಯ ಕಾಮೆಂಟ್‌ಗಳು ಬಂದಿವೆ.

29

ಬಾಲಿವುಡ್ ಹೀರೋ ರಣಬೀರ್ ಕಪೂರ್ ಜೊತೆ ಟಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅತ್ಯಂತ ಆಸಕ್ತಿದಾಯಕ ಚಿತ್ರ ಅನಿಮಲ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಉತ್ತಮ ಕ್ರೇಜ್ ಪಡೆಯುತ್ತಿದೆ. ಸೌತ್‌ನಲ್ಲಿ ಸದ್ದು ಮಾಡಿದ್ದ 'ಅರ್ಜುನ್ ರೆಡ್ಡಿ' ಸಿನಿಮಾವನ್ನು ಸಂದೀಪ್ ರೆಡ್ಡಿ ನಿರ್ದೇಶಿಸಿದ್ದರು. 

39

ನಟಿ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ 'ಇನ್‌ಸ್ಟಾಗ್ರಾಂ'ನಲ್ಲಿ ಮುಂಬರುವ ಚಿತ್ರವಾದ 'ಅನಿಮಲ್' ವಿಡಿಯೋ ಸಾಂಗ್‌ಅನ್ನು ಅಪ್ಲೋಡ್ ಮಾಡಿದ್ದು, ಅದು ಸಖತ್ ವೈರಲ್ ಆಗುತ್ತಿದೆ. ನಾಯಕ ನಟ ರಣಬೀರ್ ಕಪೂರ್ ಜತೆ ಸಾಕಷ್ಟು ಕಿಸ್ಸಿಂಗ್ ಸೀನ್ ಹೊಂದಿರುವ ಈ ಸಾಂಗ್ ವಿಡಿಯೋ ಹಲವರಿಂದ ಮೆಚ್ಚುಗೆ ಹಾಗೂ ಟೀಕೆ ಎರಡನ್ನೂ ರಿಸೀವ್ ಮಾಡಿಕೊಳ್ಳುತ್ತಿದೆ. 

49

ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಮುಂತಾದ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ಹಿಟ್‌ಗಳ ನಂತರ ಸಂದೀಪ್ ಅವರಿಂದ ಬರುತ್ತಿರುವ ಚಿತ್ರವಾಗಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆಗಳು ತುಂಬಾ ಹೆಚ್ಚಿವೆ. ಆ ಪ್ರಕಾರ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್.. ಹಾಡಿನ ಮೊದಲ ಲಿರಿಕಲ್ ವಿಡಿಯೋ ಮತ್ತೊಮ್ಮೆ ಸಂದೀಪ್ ಛಾಪು ತೋರಿಸಿದೆ. ಆದರೆ ಈ ಚಿತ್ರದಲ್ಲಿ ಲಿಪ್‌ಲಾಕ್ ಮಾಡಲು ರಶ್ಮಿಕಾ ಹೆಚ್ಚುವರಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

59

'ಅನಿಮಲ್‌' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಮೊದಲ ಲಿರಿಕಲ್ ವೀಡಿಯೊದಲ್ಲಿ, ರಣಬೀರ್ ಕಪೂರ್ ಜೊತೆಗಿನ ರಶ್ಮಿಕಾ ಕಿಸ್ಸಿಂಗ್ ಸೀನ್‌ಗಳು ಹೆಚ್ಚು ವೈರಲ್ ಆಗುತ್ತಿವೆ. ಹೀಗಾಗಿ ಲಿಪ್ ಲಾಕ್ ದೃಶ್ಯಗಳಿಗೆ ರಶ್ಮಿಕಾ ಪ್ರತ್ಯೇಕ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಬಲವಾಗಿ ಕೇಳಿ ಬರ್ತಿದೆ.

69

ತೆಲುಗಿನ ಕೆಲವೊಂದು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಖತ್‌ ಬೋಲ್ಡ್ ಆಗಿ ನಟಿಸಿದ್ದಾರೆ. ಆದರೆ ಅನಿಮಲ್‌ ಚಿತ್ರದಲ್ಲಿ ಇವೆಲ್ಲಕ್ಕಿಂತಲೂ ಸಖತ್ ಬೋಲ್ಡ್ ಆಗಿ ಲಿಪ್‌ಲಾಕ್ ಮಾಡಿದ್ದಾರೆ. ಸದ್ಯ ಆಕೆಗೂ ಬಾಲಿವುಡ್‌ನ ಗಾಳಿ ಬೀಸಿದಂತಿದೆ ಎಂದು ನೆಟ್ಟಿಗರು ಪಿಸುಗುಟ್ಟುತ್ತಿದ್ದಾರೆ.  

79

ಪ್ರತಿ ಲಿಪ್ ಲಾಕ್ ದೃಶ್ಯಕ್ಕೆ ನಿರ್ಮಾಪಕರು ಸಂಭಾವನೆಯ ಜೊತೆಗೆ 20 ಲಕ್ಷ ರೂಪಾಯಿಗಳನ್ನು ರಶ್ಮಿಕಾಗೆ ನೀಡಲಿದ್ದಾರೆ. ಚಿತ್ರದಲ್ಲಿನ ಎಲ್ಲಾ ಲಿಪ್ ಲಾಕ್ ದೃಶ್ಯಗಳಿಗೆ 20 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ರಶ್ಮಿಕಾ ಪಡೆದಿದ್ದಾರೆ ಎನ್ನಲಾಗಿದೆ.

89

ಒಟ್ನಲ್ಲಿ ರಿಲೀಸ್‌ಗೂ ಮುನ್ನ ರಶ್ಮಿಕಾ ಮಂದಣ್ಣ ಹಾಡು ಸಖತ್ ಸೌಂಡ್ ಮಾಡ್ತಿದೆ. ಹಿಮಾಲಯದ ಬ್ಯಾಕ್‌ಗ್ರೌಂಡ್‌ ಹಾಗು ದೇವಾಲಯಗಳ ಲೊಕೇಶನ್‌ಗಳಲ್ಲಿ ಶೂಟಿಂಗ್ ಮಾಡಿರುವ ಈ ವಿಡಿಯೋ, ರಶ್ಮಿಕಾ ಮತ್ತು ರಣಬೀರ್ ಕಪೂರ್ ಮಧ್ಯೆ ಈ ಹಾಡಿನಲ್ಲಿ ಒಳ್ಳೆಯ ಕೆಮಿಸ್ಟ್ರಿ ಕಾಣಿಸುತ್ತಿದೆ ಎಂಬ ಅಭಿಪ್ರಾಯ ಬಂದಿದೆ.

99

ಕಾಮೆಂಟ್‌ ನೋಡಿ ಹೇಳುವುದಾದರೆ, ರಶ್ಮಿಕಾ ಇನ್ನೂ ಹೆಚ್ಚು ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಚಾನ್ಸ್ ಪಡೆಯಲಿರುವುದು ಗ್ಯಾರಂಟಿ ಎನ್ನಬಹುದು. ಅನಿಮಲ್ ಚಿತ್ರದಲ್ಲಿ ಗೀತಾಂಜಲಿ ಪಾತ್ರ ಮಾಡಿರುವ ರಶ್ಮಿಕಾರ 'ಗೀತಾಂಜಲಿ' ಪೋಸ್ಟರ್ ಬಿಡುಗಡೆಯಾಗಿ ಜಗಮೆಚ್ಚುಗೆ ಗಳಿಸಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories