ಅಕ್ಷಯ್ ಕುಮಾರ್ ಬಾಡಿ ಡಬಲ್ ಕೆಲ್ಸ ಮಾಡಿದ್ದಾತ, ಈಗ ಬಾಲಿವುಡ್‌ ಅತೀ ಹೆಚ್ಚು 100 ಕೋಟಿ ಸಿನ್ಮಾ ಮಾಡಿದ ಡೈರೆಕ್ಟರ್‌!

Published : Oct 17, 2023, 09:30 AM IST

ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಬಾಡಿ ಡಬಲ್ ಕೆಲಸ ಮಾಡಿದ್ದ ಈ ವ್ಯಕ್ತಿ, ನಂತರದ ದಿನಗಳಲ್ಲಿ ಬಾಲಿವುಡ್‌ನ ಮೋಸ್ಟ್‌ ಸಕ್ಸಸ್‌ಫುಲ್‌ ಡೈರೆಕ್ಟರ್ ಎಂದು ಕರೆಸಿಕೊಂಡರು. ಬಾಲಿವುಡ್‌ನಲ್ಲಿ ಅತಿ ಹೆಚ್ಚು 100 ಕೋಟಿಯ ಸಿನಿಮಾ ಮಾಡಿದ್ದು ಇದೇ ನಿರ್ದೇಶಕ. ಯಾರವರು?

PREV
19
ಅಕ್ಷಯ್ ಕುಮಾರ್ ಬಾಡಿ ಡಬಲ್ ಕೆಲ್ಸ ಮಾಡಿದ್ದಾತ, ಈಗ ಬಾಲಿವುಡ್‌ ಅತೀ ಹೆಚ್ಚು 100 ಕೋಟಿ ಸಿನ್ಮಾ ಮಾಡಿದ ಡೈರೆಕ್ಟರ್‌!

ಚಿತ್ರರಂಗವೇ ಹಾಗೆ. ಹಲವು ಏಳು-ಬೀಳುಗಳಿಂದ ಕೂಡಿದೆ. ಲೈಟ್‌ಬಾಯ್‌, ಮೇಕಪ್‌ ಮ್ಯಾನ್‌, ಅಸಿಸ್ಟೆಂಟ್ ಆಗಿ ಕೆರಿಯರ್‌ ಆರಂಭಿಸಿದವರು ನಂತರ ಪರಿಶ್ರಮದಿಂದಲೇ ಮೇಲೆ ಬಂದು ನಟ, ನಿರ್ದೇಶಕರಾಗುತ್ತಾರೆ. ಇವರೂ ಸಹ ಅಂಥವರಲ್ಲಿ ಒಬ್ಬರು. ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಬಾಡಿ ಡಬಲ್ ಕೆಲಸ ಮಾಡಿದ್ದ ಈ ವ್ಯಕ್ತಿ, ನಂತರದ ದಿನಗಳಲ್ಲಿ ಬಾಲಿವುಡ್‌ನ ಮೋಸ್ಟ್‌ ಸಕ್ಸಸ್‌ಫುಲ್‌ ಡೈರೆಕ್ಟರ್ ಎಂದು ಕರೆಸಿಕೊಂಡರು. 

29

ಬಾಲಿವುಡ್‌ನಲ್ಲಿ ಅತಿ ಹೆಚ್ಚು 100 ಕೋಟಿಯ ಸಿನಿಮಾ ಮಾಡಿದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇವರು ಮತ್ಯಾರೂ ಅಲ್ಲ 'ಸಿಂಗಂ' ಖ್ಯಾತಿಯ ಡೈರೆಕ್ಟರ್‌ ರೋಹಿತ್‌ ಶೆಟ್ಟಿ. ಇವರು ಶಾರೂಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಹೆಚ್ಚಿನ ನಟರೊಂದಿಗೆ ಕೆಲಸ ಮಾಡಿದ್ದಾರೆ. ಒಮ್ಮೆ ಅಕ್ಷಯ್ ಅವರ ಬಾಡಿ ಡಬಲ್‌ ಆಗಿಯೂ ಕೆಲಸ ಮಾಡಿದ್ದರು. 

39

ರೋಹಿತ್ ಶೆಟ್ಟಿ ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ಜೂನಿಯರ್ ಆರ್ಟಿಸ್ಟ್ ಎಂ.ಬಿ ಶೆಟ್ಟಿ ಮತ್ತು ರತ್ನ ದಂಪತಿಯ ಪುತ್ರ. ಅವರು 17ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಜಯ್ ದೇವಗನ್ ಅವರ ಫೂಲ್ ಔರ್ ಕಾಂತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಅವರು ಸುಹಾಗ್‌ನಲ್ಲಿ ಅಜಯ್ ದೇವಗನ್ ಅವರೊಂದಿಗೆ ಕೆಲಸ ಮಾಡಿದರು, 

49

ಇದರಲ್ಲಿ ಅಕ್ಷಯ್ ಕುಮಾರ್ ಸಹ ನಟಿಸಿದ್ದರು. ಈ ಸಿನಿಮಾಗಾಗಿ ರೋಹಿತ್ ಶೆಟ್ಟಿ ಅಕ್ಷಯ್‌ ಬಾಡಿ ಡಬಲ್ ಆಗಿ ಕೆಲಸ ಮಾಡಿದರು. ಒಮ್ಮೆ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಶೋನಲ್ಲಿ ಅದೇ ವಿಷಯವನ್ನು ಬಹಿರಂಗಪಡಿಸಿದರು 'ಸುಹಾಗ್' ಸಿನಿಮಾ ಸಮಯದಲ್ಲಿ, ನಾನು ಅವರ ಬಾಡಿ ಡಬಲ್ ಆಗಿದ್ದೆ. ಅದಕ್ಕಾಗಿ ಅವರ ವಾಕಿಂಗ್ ಸ್ಟೈಲ್ ಕಲಿತೆ' ಎಂದಿದ್ದರು.

59

ರೋಹಿತ್ ಶೆಟ್ಟಿ ಬಾಕ್ಸಾಫೀಸಿನಲ್ಲಿ 100 ಕೋಟಿ ರೂ. ಗೂ ಕಲೆಕ್ಷನ್ ಮಾಡಿದ 9 ಚಿತ್ರಗಳನ್ನು ಹೊಂದಿದ್ದಾರೆ, ಇದರಲ್ಲಿ ಅವರ ಅತಿ ಹೆಚ್ಚು ಗಳಿಕೆಯ ಚೆನ್ನೈ ಎಕ್ಸ್‌ಪ್ರೆಸ್ 423 ಕೋಟಿ ರೂ. ಗಳಿಸಿತು, ಸೂರ್ಯವಂಶಿ, ವಿಶ್ವಾದ್ಯಂತ 293 ರೂ. ಕೋಟಿ ಗಳಿಸಿತು.

69

ಸಿಂಗಮ್ (ರೂ 157 ಕೋಟಿ), ಬೋಲ್ ಬಚ್ಚನ್ (ರೂ. 165 ಕೋಟಿ), ಸಿಂಗಮ್ ರಿಟರ್ನ್ಸ್ (ರೂ. 219 ಕೋಟಿ), ದಿಲ್ವಾಲೆ (ರೂ. 377 ಕೋಟಿ), ಗೋಲ್ಮಾಲ್ ಎಗೇನ್ (ರೂ. 311 ಕೋಟಿ), ಮತ್ತು ಸಿಂಬಾ (ರೂ. 400 ಕೋಟಿ) ಮತ್ತು ಗೋಲ್ಮಾಲ್ 3 (ರೂ. 162 ಕೋಟಿ) ಗಳಿಸಿದೆ.

79

ರೋಹಿತ್ ಶೆಟ್ಟಿ, ಮುಂಬರುವ ಚಲನಚಿತ್ರ ಸಿಂಗಂ 3ರ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಇದು ಸಿಂಗಮ್ ಫ್ರ್ಯಾಂಚೈಸ್‌ನಲ್ಲಿ ಮೂರನೇ ಚಲನಚಿತ್ರವಾಗಿದೆ ಮತ್ತು ಸಿಂಗಮ್, ಸಿಂಗಮ್ ಎಗೇನ್, ಸಿಂಬಾ ಮತ್ತು ಸೂರ್ಯವಂಶಿ ನಂತರ ಅವರ 5ನೇ ಚಿತ್ರವಾಗಿದೆ.

89

ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ನಟಿಸಿದ್ದಾರೆ. ಇದರೊಂದಿಗೆ ರೋಹಿತ್ ಶೆಟ್ಟಿ ಅವರ ಕಾಪ್ ಸಿನಿಮಾದಲ್ಲಿ ಮಹಿಳಾ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ದೀಪಿಕಾ ಪಡುಕೋಣೆಯನ್ನು ಪರಿಚಯಿಸಲಾಗಿದೆ.

99

ಇತ್ತೀಚೆಗೆ, ರೋಹಿತ್ ಶೆಟ್ಟಿ ನವರಾತ್ರಿಯ ಸಂದರ್ಭದಲ್ಲಿ ದೀಪಿಕಾ ಪಡುಕೋಣೆಯ ಲೇಡಿ ಸಿಂಗಂ ಶಕ್ತಿ ಶೆಟ್ಟಿ ಎಂಬ ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಆಗಸ್ಟ್ 15, 2024ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories