ಭಾರತೀಯ ಚಿತ್ರರಂಗದಲ್ಲಿ ಬಿಗ್ ಬಜೆಟ್ ಬ್ಲಾಕ್‌ಬಸ್ಟರ್‌ಳು ಹೆಚ್ಚು ಸದ್ದು ಮಾಡುತ್ತಿವೆ. ಕೋವಿಡ್ ಸಮಯದಲ್ಲಿ ಮಕಾಡೆ ಮಲಗಿದ್ದ ಬಾಲಿವುಡ್ ಸಿನಿಮಾಗಳ ಗಳಿಕೆ ಮತ್ತೆ ಚೇತರಿಸಿಕೊಂಡಿದೆ. ಇದು ಚಲನಚಿತ್ರ ನಿರ್ಮಾಪಕರು ದೊಡ್ಡ ದೊಡ್ಡ ಬಜೆಟ್‌ನ ಸಿನಿಮಾ ಮಾಡಲು ಕಾರಣವಾಗುತ್ತಿದೆ. ನಟ-ನಟಿಯರು ಸಹ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ.
ಶಾರೂಕ್ ಖಾನ್ ಅಭಿನಯದ 'ಜವಾನ್', ರಜನೀಕಾಂತ್ ಅಭಿನಯದ 'ಜೈಲರ್' ಕೋಟಿಯಲ್ಲಿ ಗಳಿಕೆ ಮಾಡಿವೆ. ಇನ್ನೆರಡು ದಿನದಲ್ಲಿ ರಿಲೀಸ್ ಆಗಲಿರುವ 'ಲಿಯೋ' ದಳಪತಿ ವಿಜಯ್ ಅಭಿನಯದ ಹೈ ಬಜೆಟ್ ಸಿನಿಮಾ. ಪ್ರಭಾಸ್ ಅಭಿನಯದ ಸಲಾರ್, ಶಾರೂಕ್ ಅಭಿನಯದ 'ಡುಂಕಿ'' ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಅನೇಕ ಟಾಪ್ ಸ್ಟಾರ್‌ಗಳು ಕನಿಷ್ಠ ಒಂದು ಬಿಗ್ ಬಜೆಟ್‌ನ ಸಿನಿಮಾಗಾಗಿ ವರ್ಷವೂ ಕಾಯುತ್ತಾರೆ. ಆದರೆ ಬಾಲಿವುಡ್‌ನ ಈ ಸ್ಟಾರ್ ಬಳಿ ಒಂದೇ ವರ್ಷದಲ್ಲಿ ನಾಲ್ಕು ಹೈ ಬಜೆಟ್, ಸೂಪರ್‌ಹಿಟ್ ಆಗಬಲ್ಲ ಸಿನಿಮಾವಿದೆ. ಅದು ಶಾರೂಕ್ ಖಾನ್, ಅಮೀರ್ ಖಾನ್, ಸಲ್ಮಾನ್ ಯಾರೂ ಅಲ್ಲ. ಸೌತ್‌ನ ರಜಿನಿಕಾಂತ್, ಪ್ರಭಾಸ್, ಯಶ್ ಸಹ ಅಲ್ಲ. ಬದಲಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ.
ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ, ಸಿದ್ಧಾರ್ಥ್ ಆನಂದ್ ಅವರ 'ಫೈಟರ್'ನಿಂದ ಪ್ರಾರಂಭಿಸಿ ಮುಂದಿನ ಹನ್ನೆರಡು ತಿಂಗಳುಗಳಲ್ಲಿ ಮೂರು ಮೆಗಾ-ಬಜೆಟ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ಅಭಿನಯದ 'ಏರಿಯಲ್ ವಾರ್ಫೇರ್' ಚಿತ್ರವು 250 ಕೋಟಿ ರೂಪಾಯಿಗಳ ಬಜೆಟ್ ಹೊಂದಿದೆ.
ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ'ನಲ್ಲಿ ಸಹ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಿದ್ದು, ದಿ ಸಿಂಗಂ, ಶಕ್ತಿ ಶೆಟ್ಟಿ ಅನ್ನೋ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಅಜಯ್ ದೇವಗನ್ ಲೀಡ್ ರೋಲ್‌ನಲ್ಲಿರೋ ಈ ಸಿನಿಮಾ 200 ಕೋಟಿ ಬಜೆಟ್‌ನ್ನು ಹೊಂದಿದೆ. ಜೊತೆಗೆ, ನಟಿ ಇದುವರೆಗೆ ಮಾಡಿದ ಅತ್ಯಂತ ದುಬಾರಿ ಭಾರತೀಯ ಚಲನಚಿತ್ರದ ಪಾತ್ರವರ್ಗದ ಭಾಗವಾಗಿದೆ.
ನಾಗ್ ಅಶ್ವಿನ್ ಅವರ ಕಲ್ಕಿ 2898 AD (ಹಿಂದೆ ಪ್ರಾಜೆಕ್ಟ್ ಕೆ ಎಂದು ಕರೆಯಲಾಗುತ್ತಿತ್ತು), ಇದರಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಜೊತೆಗೆ ದೀಪಿಕಾ ಪಡುಕೋಣೆ ಸಹ ನಟಿಸಲಿದ್ದಾರೆ. ಈ ಚಿತ್ರವು 600 ಕೋಟಿ ರೂಪಾಯಿಗಳ ನಿರ್ಮಾಣ ಬಜೆಟ್‌ನ್ನು ಹೊಂದಿದೆ, ಇದು ಭಾರತೀಯ ಚಲನಚಿತ್ರವೊಂದಲ್ಲಿ ಇದುವರೆಗೆ ಅತ್ಯಧಿಕ ಮೊತ್ತವಾಗಿದೆ.
ಇದರ ಜೊತೆಗೆ, ವರದಿಗಳ ಪ್ರಕಾರ ನಟಿ ಇನ್ನೂ ಎರಡು ದೊಡ್ಡ ಪ್ರಾಜೆಕ್ಟ್ ಸಿನಿಮಾವನ್ನು ಹೊಂಡಿದ್ದಾರೆ. ಅಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರ 2ರಲ್ಲೂ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಯಾನ್ 400 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಬ್ರಹ್ಮಾಸ್ತ್ರ 2 ಅನ್ನು ನಿರ್ಮಿಸಲು ಪ್ಲಾನ್ ಮಾಡಿದ್ದಾರೆ.
ಇದಲ್ಲದೆ, ಅಮಿತಾಭ್ ಬಚ್ಚನ್ ನಟಿಸುವ 'ದಿ ಇಂಟರ್ನ್'ನ ಭಾರತೀಯ ಸಿನಿಮಾದಲ್ಲಿ ದೀಪಿಕಾ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಸ್ಲೈಸ್-ಆಫ್-ಲೈಫ್ ಚಲನಚಿತ್ರವು ಕಡಿಮೆ ಬಜೆಟ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಆದರೆ ಈ ಸಿನಿಮಾದಲ್ಲಿ ದೀಪಿಕಾ ನಟಿಸುವ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.