ಅಕ್ಷಯ್ ಖನ್ನಾ, ಸಾರಾ ಅರ್ಜುನ್ ನಟನೆಯ ‘ಧುರಂದರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಸ್ಪೈ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿರುವ ‘ಧುರಂದರ್’ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧ ಮಾಡಲಾಗಿದೆ.
ಧುರಂದರ್ ಸಿನಿಮಾ 20 ಲಕ್ಷ ಬಾರಿ ಪೈರಸಿ ಆಗಿದೆ! ಅಚ್ಚರಿ ಆದರೂ ಇಂಥದ್ದೊಂದು ವರದಿ ಬಂದಿದೆ. ಅಂದಹಾಗೆ ಹೀಗೆ ಅಕ್ರಮವಾಗಿ ಡೌನ್‌ಲೋಡ್‌ಗೆ ತುತ್ತಾಗಿ ಅತಿ ಹೆಚ್ಚು ಬಾರಿ ಪೈರಸಿ ಆದ ಸಿನಿಮಾ ಎನಿಸಿಕೊಂಡಿರುವುದು ‘ಧುರಂದರ್’.
26
ಸ್ಪೈ ಪಾತ್ರದಲ್ಲಿ ರಣವೀರ್ ಸಿಂಗ್
ಹೀಗೆ ಡೌನ್‌ಲೋಡ್ ಆಗಿರುವುದು ಭಾರತದಲ್ಲಿ ಅಲ್ಲ, ಪಾಕಿಸ್ತಾನದಲ್ಲಿ ಎಂಬುದು ಮತ್ತೊಂದು ಅಚ್ಚರಿ. ಸ್ಪೈ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿರುವ ‘ಧುರಂಧರ್’ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧ ಮಾಡಲಾಗಿದೆ.
36
ಅಕ್ರಮವಾಗಿ ಪಾಕಿಸ್ತಾನದಲ್ಲಿ ಡೌನ್‌ಲೋಡ್
ಆದರೆ, ನಿಷೇಧದ ನಡುವೆಯೂ ಪಾಕಿಸ್ತಾನದ ಪ್ರಜೆಗಳು ದೊಡ್ಡ ಸಂಖ್ಯೆಯಲ್ಲಿ ಈ ಚಿತ್ರವನ್ನು ನೋಡಿದ್ದಾರೆ ಎನ್ನಲಾಗಿದೆ. ಕೇವಲ ಎರಡು ವಾರದಲ್ಲಿ 20 ಲಕ್ಷ ಬಾರಿ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಅಕ್ರಮವಾಗಿ ಡೌನ್‌ಲೋಡ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದರಿಂದ ನಿಷೇಧ ಮಾಡಿದರೂ ಪಾಕಿಸ್ತಾನದಲ್ಲಿ ಧುರಂಧರ್ ಸಿನಿಮಾ ಸೂಪರ್‌ಹಿಟ್ ಆಗಿದೆ. ಆದರೆ ಚಿತ್ರತಂಡಕ್ಕೆ ಇದರಿಂದ ಅಂದಾಜು 50 ಕೋಟಿ ನಷ್ಟ ಆಗಿದೆ ಎಂದು ಪರಿಣತರು ತಿಳಿಸಿದ್ದಾರೆ.
56
ಆದಿತ್ಯ ಧಾರ್ ನಿರ್ದೇಶನ
ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪ್ರೇರಣೆ ಹೊಂದಿರುವ ಹಾಗೂ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಅವರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು, ಇವರ ಸೋದರ ಲೋಕೇಶ್ ಧಾರ್ ಸಹ ನಿರ್ಮಾಣ ಮಾಡಿದ್ದಾರೆ.
66
ರಕ್ಷಣಾ ಬೇಹುಗಾರಿಕೆ ಕಥೆಯಾಧರಿತ ಚಿತ್ರ
ಪಾಕಿಸ್ತಾನದಲ್ಲಿ ನಡೆಯುವ ರಕ್ಷಣಾ ಬೇಹುಗಾರಿಕೆ ಕುರಿತು ಕಥೆ ಹೊಂದಿರುವ ಈ ಚಿತ್ರವು ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ಸೇರಿ ಅನೇಕ ತಾರಾ ಬಳಗವನ್ನು ಹೊಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.