3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ

Published : Dec 20, 2025, 12:03 PM IST

ಕನ್ನಡದವರೇ ಆದ ನಟಿ ರಶ್ಮಿಕಾ ಮಂದಣ್ಣ, ದೀಕ್ಷಿತ್‌ ಶೆಟ್ಟಿ ನಟನೆಯ, ಇತ್ತೀಚೆಗೆ ತೆರೆಕಂಡ The Girlfriend Movie ಸೂಪರ್‌ ಹಿಟ್‌ ಆಯ್ತು. ಈ ಸಿನಿಮಾ ನಿರ್ದೇಶಕ ರಾಹುಲ್‌ ಅವರು ಮೂರು ವರ್ಷದ ಮಗಳಿಗೆ ಪ್ರೀತಿಸುವ ಹುಡುಗ ಹೇಗಿರಬೇಕು ಎಂದು ಪಾಠ ಮಾಡಿದ್ದಾರೆ.

PREV
15
ಸಿನಿಮಾ ಕತೆ ಏನು?

ಪ್ರೀತಿ ಎಂಬ ಹೆಸರಿನಲ್ಲಿ ಅತಿಯಾದ ಪೊಸೆಸ್ಸಿವ್‌ನೆಸ್‌ ಬಳಸಿಕೊಂಡು, ಹೆಣ್ಣು ಮಕ್ಕಳ ಸ್ವಾತಂತ್ರ್ಯ ಕಿತ್ತುಕೊಳ್ಳುವವರ ಕುರಿತು ಈ ಸಿನಿಮಾವಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ರಶ್ಮಿಕಾ ಮಂದಣ್ಣ ಕಾಲೇಜಿನಲ್ಲಿ ಒಂದು ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿರುತ್ತಾಳೆ. ಆಮೇಲೆ ಆ ಹುಡುಗ ಅವಳನ್ನು ಕಂಟ್ರೋಲ್‌ ಮಾಡಲು ಆರಂಭಿಸುತ್ತಾನೆ, ಯಾರ ಜೊತೆ ಮಾತನಾಡಿದರೂ ತಪ್ಪು, ಡ್ಯಾನ್ಸ್‌ ಮಾಡಿದರೂ ತಪ್ಪು, ಏನು ಮಾಡಿದರೂ ತಪ್ಪು. ಬ್ರೇಕಪ್‌ ಮಾಡಿಕೊಂಡಮೇಲೆ ಆ ಹುಡುಗ ಅವಳ ಮಾನಹರಣ ಮಾಡಲು ನೋಡುತ್ತಾನೆ. ಈ ಬಗ್ಗೆ ಸಿನಿಮಾವಿದೆ.

25
ಮಗಳಿಗೆ ರಾಹುಲ್‌ ಹೇಳಿದ್ದೇನು?

“ನೀನು ಯಾರನ್ನಾದರೂ ಹುಡುಗನನ್ನು ನೋಡಿಕೊಂಡರೆ ನನಗಿಂತ ಅವನು, ನಿನ್ನನ್ನು ಹತ್ತು ಪಟ್ಟು ಹೆಚ್ಚು ಪ್ರೀತಿ ಮಾಡಬೇಕು. ನಾನು ನಿನ್ನನ್ನು ಹೇಗೆ ನೋಡಿಕೊಳ್ತೀನೋ, ಆ ಹುಡುಗ ಮಾತ್ರ ಅದಕ್ಕಿಂತ 1% ಕಡಿಮೆ ನೋಡಿಕೊಳ್ಳಬಾರದು. ಇದು ಬೆಂಚ್‌ ಮಾರ್ಕ್.‌ ಆ ಹುಡುಗ ನಿನ್ನನ್ನು ಗೌರವಿಸಬೇಕು. ಇದನ್ನು ಮೀರಿ ಆ ಹುಡುಗ ನಡೆದುಕೊಳ್ಳಬಾರದು. ನಿನ್ನ ಮೇಲೆ ನಿನಗೆ ಆತ್ಮವಿಶ್ವಾಸ, ಭರವಸೆ, ಸ್ವಗೌರವ ಇರಬೇಕು. ನನಗೆ ಆಣೆ ಮಾಡು” ಎಂದು ರಾಹುಲ್‌, ತಮ್ಮ ಪುಟ್ಟ ಮಗಳಿಗೆ ಹೇಳಿದ್ದಾರೆ.

35
ಮಿಶ್ರ ಪ್ರತಿಕ್ರಿಯೆ

ರಾಹುಲ್‌ ಅವರ ಮಾತುಗಳನ್ನು ಅನೇಕರು ಬೆಂಬಲಿಸಿದರೆ, ಇನ್ನೂ ಕೆಲವರು ವಿರೋಧ ಮಾಡಿದ್ದಾರೆ. ಇನ್ನೂ ಕೆಲವರು ಅವಳು ಇನ್ನೂ ಚಿಕ್ಕವಳು, ಬಾಲ್ಯವನ್ನು ಎಂಜಾಯ್‌ ಮಾಡಲು ಬಿಡಿ ಎಂದು ಹೇಳಿದ್ದಾರೆ.

45
ಹುಡುಗ ಹೇಳಬಾರದಿತ್ತು

ಓರ್ವ ಮಹಿಳೆ, ಸೋಶಿಯಲ್‌ ಮೀಡಿಯಾದಲ್ಲಿ ಇದಕ್ಕೆ ಕಾಮೆಂಟ್‌ ಮಾಡಿದ್ದು, “ಇದು ಹೇಗೆ ಅತ್ಯುತ್ತಮ ವಿಷಯವಾಗಲು ಸಾಧ್ಯವಿದೆ? ಒಬ್ಬ ತಾಯಿ ತನ್ನ ಮಗನಿಗೆ ಇದನ್ನೇ ಹೇಳುವುದು ಸರಿಯೇ? ಒಂದು ವೇಳೆ ಇದನ್ನು ಒಪ್ಪಿಕೊಳ್ಳಲು ಆಗದಿದ್ದರೆ, ಲಿಂಗಭೇದವಿಲ್ಲದೆ ಮಕ್ಕಳು ತಮ್ಮನ್ನು ತಾವು ಹೇಗೆ ಗೌರವಿಸಿಕೊಳ್ಳಬೇಕು ಎಂದು ಕಲಿಸಬೇಕು. ರಾಹುಲ್ ಒಬ್ಬ ಸಾರ್ವಜನಿಕ ವ್ಯಕ್ತಿ, 'ಹುಡುಗ' ಎಂದು ಬಳಸುವ ಬದಲು 'ಯಾರೇ ವ್ಯಕ್ತಿ' ಎಂದು ಉಲ್ಲೇಖಿಸಬೇಕಿತ್ತು” ಎಂದಿದ್ದಾರೆ.

55
ಡಿವೋರ್ಸ್‌ಗೆ ಕಾರಣ

"ಒಂದು ವೇಳೆ ಇದನ್ನು ಒಪ್ಪಬೇಕು ಎಂದರೆ, ಗಂಡು ಮಕ್ಕಳಿಗೂ ಸಹ ಇದನ್ನೇ ಕಲಿಸಬೇಕಾಗುತ್ತದೆ. ಮದುವೆಯಾಗುವ ಹುಡುಗಿಯು, ಅವರ ತಾಯಿಗಿಂತ 10 ಪಟ್ಟು ಉತ್ತಮವಾಗಿ ಅವರನ್ನು ನೋಡಿಕೊಳ್ಳಬೇಕಾಗುತ್ತದೆ. ಇದು ಸಾಧ್ಯವೇ? ಇಲ್ಲ. ಇಂತಹ ಅವಾಸ್ತವಿಕ ನಿರೀಕ್ಷೆಗಳೇ ಮದುವೆ ಜೀವನವನ್ನು ಹಾಳುಗೆಡವುತ್ತವೆ. ಮಕ್ಕಳಿಗೆ '10 ಪಟ್ಟು ಉತ್ತಮ' ಎಂಬಂತಹ ಹೋಲಿಕೆಗಳನ್ನು ಕಲಿಸುವುದು ಒಳ್ಳೆಯದಲ್ಲ. ಇದು ಮುಂದೆ ಸಂಘರ್ಷಗಳಿಗೆ ಹಾಗೂ ವಿಚ್ಛೇದನಗಳಿಗೆ ದಾರಿಯಾಗುತ್ತದೆ, ಈ ಮೂರ್ಖ!" ಎಂದು ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories