ನಟ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಗಂಡು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ತಂದೆಯಾಗಿರೋದು ಹೇಗಿದೆ ಎಂದು ವಿಕ್ಕಿ ಕೌಶಲ್ ಅವರು ಹೇಳಿದ್ದಾರೆ. ಕೆಲಸದ ಸಲುವಾಗಿ ಊರು ಬಿಟ್ಟು ಹೋಗುವುದು, ಮನೆಗೆ ಬಂದಿರೋ ಮಗುವನ್ನು ಬಿಟ್ಟು ಬರುವುದು ವಿಶೇಷವಾಗಿ ಕಷ್ಟವಾಗಿತ್ತು ಎಂದು ವಿಕ್ಕಿ ಹೇಳಿದ್ದಾರೆ.
ತಂದೆಯಾದಾಗ ಉಂಟಾಗುವ ಖುಷಿ, ಅಥವಾ ಆ ಭಾವನೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ನಡೆದ 'ಎನ್‌ಡಿಟಿವಿ ಇಂಡಿಯನ್ ಆಫ್ ದಿ ಇಯರ್ 2025' ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್ ಅವರಿಗೆ 'ಛಾವಾ' ಸಿನಿಮಾದ ನಟನೆಗೋಸ್ಕರ 'ವರ್ಷದ ಅತ್ಯುತ್ತಮ ನಟ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಕ್ಕಿ ಕೌಶಲ್ ಅವರು ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರ ಮಾಡಿದ್ದರು.
26
ನನ್ನ ಮಗ ಹೆಮ್ಮೆಪಡ್ತಾನೆ
ವಿಕ್ಕಿ ಕೌಶಲ್ ಮಾತನಾಡಿ, "ಧನ್ಯವಾದಗಳು, ನನ್ನ ಕುಟುಂಬಕ್ಕೆ, ಆಶೀರ್ವಾದದಂತೆ ಬಂದಿರುವ ನನ್ನ ಪುಟ್ಟ ಕಂದನಿಗೆ ಈ ಪ್ರಶಸ್ತಿಯನ್ನು ಅರ್ಪಿಸುವೆ. ತಂದೆಯಾದಮೇಲೆ ಫಸ್ಟ್ ಟೈಮ್ ಊರು ಬಿಟ್ಟು ಬಂದಿದ್ದೀನಿ. ಇದು ತುಂಬ ಕಷ್ಟಕರ. ನನ್ನ ಮಗ ಬೆಳೆದಮೇಲೆ ಇದನ್ನೆಲ್ಲ ನೋಡಿದಾಗ ಅವನ ತಂದೆ ಬಗೆ ಹೆಮ್ಮೆಪಡ್ತಾನೆ. ಆ ನಂಬಿಕೆ ನನಗಿದೆ" ಎಂದು ಹೇಳಿದ್ದಾರೆ. ವಿಕ್ಕಿ ಕೌಶಲ್ ಅವರು ತಮಾಷೆಯಾಗಿ, “ನನಗೆ ಈಗ ನಟನೆಗಿಂತ ಹೆಚ್ಚಾಗಿ ಡೈಪರ್ ಬದಲಾಯಿಸುವುದರಲ್ಲಿ ಹೆಚ್ಚು ಪರಿಣತಿ ಬಂದಿದೆ" ಎಂದು ಹೇಳಿದ್ದಾರೆ.
36
ಖಾಸಗಿಯಾಗಿ ಮದುವೆ
ಕಳೆದ ನವೆಂಬರ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಗಂಡು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಡಿಸೆಂಬರ್ 9, 2021 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮದುವೆಯಾಗಿದ್ದರು. ತುಂಬ ಖಾಸಗಿಯಾಗಿ ಈ ಮದುವೆ ನಡೆದಿತ್ತು.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರು ಬಾಲಿವುಡ್‌ನ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ವೇದಿಕೆ ಮೇಲೆ ಇವರ ಪರಿಚಯ ಆಗಿತ್ತು. ಹಾಗೆಯೇ ಒಂದು ಟಾಕಿಂಗ್ ಶೋನಲ್ಲಿ ಭಾಗಿಯಾಗಿದ್ದರು. ಅಲ್ಲಿಂದ ಇವರ ಸ್ನೇಹ ಶುರುವಾಗು, ಮದುವೆಯಾಗಿ ಈಗ ಮಗು ಕೂಡ ಆಗಿದೆ.
56
ಕತ್ರಿನಾ ಅಂದು ಹೇಳಿದ್ರು
‘ಕಾಫಿ ವಿಥ್ ಕರಣ್ ಶೋ’ನಲ್ಲಿ ಕತ್ರಿನಾ ಕೈಫ್ ಅವರು ಮಾತನಾಡುವಾಗ, ಹೀಗೆ ಒಂದು ಪ್ರಶ್ನೆ ಬಂದಾಗ, “ನಾನು ಹಾಗೂ ವಿಕ್ಕಿ ಕೌಶಲ್ ಚೆನ್ನಾಗಿ ಕಾಣ್ತೀವಿ” ಎಂದು ಹೇಳಿದ್ದರು. ಆಗ ವಿಕ್ಕಿ-ಕತ್ರಿನಾ ಸ್ನೇಹ ಶುರುವಾಗಿರಲಿಲ್ಲ. ಕತ್ರಿನಾ ಹೀಗೆ ಹೇಳಿದ್ದು ಕೇಳಿ ವಿಕ್ಕಿ ಕೌಶಲ್ ಫುಲ್ ಖುಷಿಯಾಗಿದ್ದರು.
66
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ
ಕಳೆದ ಮಾರ್ಚ್‌ನಲ್ಲಿ ಕತ್ರಿನಾ ಕೈಫ್ ಅವರು ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಶ್ಲೇಷ ಬಲಿ ಹಾಕಿಸಿದ್ದರು. ಸಂತನಾಕ್ಕೋಸ್ಕರ ಈ ಪೂಜೆ ಮಾಡಿಸಲಾಗುವುದು. ಇದಾದ ಬಳಿಕವೇ ಕತ್ರಿನಾ ಗರ್ಭಿಣಿಯಾಗಿ, ಮಗು ಜನನವಾಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.