Jayeshbhai Jordaar ಪ್ರಚಾರ; ಗುಜರಾತಿ ಥಾಲಿ ಸವಿಯುತ್ತಿರುವ Ranveer Singh

First Published May 13, 2022, 6:51 PM IST

ಶುಕ್ರವಾರ, ಮೇ 13 ರಂದು, ಬಾಲಿವುಡ್‌ನ ನಟ ರಣವೀರ್‌ ಸಿಂಗ್‌  (Ranveer Singh) ಅವರ ಬಹು ನಿರೀಕ್ಷಿತ ಚಿತ್ರ   'ಜಯೇಶ್ ಭಾಯ್ ಜೋರ್ದಾರ್'  (Jayesh Bhai Jordaar) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಈ ಚಿತ್ರದ ಬಗ್ಗೆ ಜನರಲ್ಲಿ ಹೆಚ್ಚಿನ ಉತ್ಸಾಹವಿಲ್ಲ. ಆದರೆ ಚಿತ್ರದ ನಟ ರಣವೀರ್ ಸಿಂಗ್ ತಮ್ಮ ಚಿತ್ರದ ಪ್ರಚಾರಕ್ಕೆ ಯಾವುದೇ ಕಡಿಮೆ ಮಾಡಲಿಲ್ಲ ಗುಜರಾತಿ ಕುಟುಂಬ ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ಆಧರಿಸಿದ ಈ ಚಿತ್ರದ ಪ್ರಚಾರಕ್ಕಾಗಿ ರಣವೀರ್ ಸಿಂಗ್ ಗುಜರಾತ್ ತಲುಪಿದರು. ರಣವೀರ್‌ ಸಿಂಗ್‌  ಅವರು ಗುಜರಾತಿ ಆಹಾರವನ್ನು ಆನಂದಿಸಿದರು. ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅದು ಹೆಚ್ಚು ವೈರಲ್ ಆಗುತ್ತಿದೆ.

ಜಯೇಶ್ ಭಾಯ್ ಜೋರ್ದಾರ್ ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದ ರಣವೀರ್ ಸಿಂಗ್ ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ಗುಜರಾತ್ ತಲುಪಿದ್ದಾರೆ. ಅಲ್ಲಿ ಅವರು ಗುಜರಾತಿ ಥಾಲಿಯನ್ನು ಆನಂದಿಸಿದರು. 

ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಜಯೇಶ್ ಭಾಯ್ ದೊಡ್ಡ ಗುಜರಾತಿ ಊಟದ ಪ್ಲೇಟ್ ಅನ್ನುಎಂಜಾಯ್‌ ಮಾಡುತ್ತಿದ್ದಾರೆ ಈ ಥಾಲಿ ಬೆಸನ್ ಗಟ್ಟೆಯಿಂದ ಕಧಿ ಮತ್ತು ಚುರ್ಮಾ-ಬಾಟಿಯವರೆಗೆ 25 ಕ್ಕೂ ಹೆಚ್ಚು ಗುಜರಾತಿ ಭಕ್ಷ್ಯಗಳನ್ನು ಒಳಗೊಂಡಿದೆ.

ಬಾಲಿವುಡ್‌ನ ಬಾಬಾ ಮೋಹನ್‌ತಾಲ್‌ ಅನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಅವರ ಇನ್‌ಸ್ಟಾಸ್ಟೋರಿಯಲ್ಲಿ, ಅವರು ಮೋಹನ್‌ತಾಲ್ ಬೆಸ್ಟ್‌ ಎಂದು ಹೇಳಿದರು. ರಣವೀರ್ ಸಿಂಗ್ ಅವರ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ .

ಆದರೆ ಇವರ  ಜಯೇಶ್ ಭಾಯ್ ಜೋರ್ದಾರ್ ಸಿನಿಮಾವು  'ಡಾಕ್ಟರ್ ಸ್ಟ್ರೇಂಜ್' ಮತ್ತು 'ಕೆಜಿಎಫ್ 2'  ಚಿಗಖಳ ನಡುವೆ ತ್ರ ಸಿಕ್ಕಿಹಾಕಿಕೊಳ್ಳಲಿದೆ ಎನ್ನಲಾಗುತ್ತಿದ್ದು, ಪ್ರೇಕ್ಷಕರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಗುವಂತೆ ಕಾಣುತ್ತಿಲ್ಲ. 

ಅದೇ ಸಮಯದಲ್ಲಿ, ಕಂಗನಾ ರಣಾವತ್ ಅವರ 'ಧಾಕಡ್' ಮತ್ತು 'ಭೂಲ್ ಭುಲೈಯಾ-2' ಚಿತ್ರಗಳು ಸಹ ಮುಂದಿನ ವಾರ ಬಿಡುಗಡೆಯಾಗಲಿವೆ. ಇಂತಹ ಪರಿಸ್ಥಿತಿಯಲ್ಲಿ ಜಯೇಶ್ ಭಾಯ್ ಜೋರ್ಡಾರ್ ಕೇವಲ ಒಂದು ವಾರದಲ್ಲಿ ಏನು ಮಾಡುತ್ತದೆ ಎಂಬುದನ್ನು ನೋಡಬೇಕು.

 ಮತ್ತೊಂದೆಡೆ, ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರದ ಬಗ್ಗೆ ಯಶ್ ರಾಜ್ ಗ್ರೂಪ್ ಕೂಡ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ, ಏಕೆಂದರೆ ಈ ಬ್ಯಾನರ್‌ನ ಹಿಂದಿನ ಚಿತ್ರ ಬಂಟಿ ಬಾಬ್ಲಿ-2 ಸಹ ಫ್ಲಾಪ್ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರಣವೀರ್ ಸಿಂಗ್ ಮತ್ತು ಯಶ್ ರಾಜ್ ಬ್ಯಾನರ್‌ಗೆ ಉತ್ತಮ ಕ್ಯಾಮ್ ಬ್ಯಾಕ್ ಅಗತ್ಯವಿದೆ. 

ಸಾಮಾಜಿಕ ಹೆಣ್ಣು ಭ್ರೂಣ ಹತ್ಯೆಯ ವಿಚಾರವನ್ನು ಆಧರಿಸಿ ಕಾಮಿಡಿ ಸ್ಟೈಲ್ ನಲ್ಲಿ ತೆರೆ ಮೇಲೆ ತೋರಿಸುತ್ತಿರುವ ರಣವೀರ್ ಸಿಂಗ್ ಅಭಿನಯದ ಜಯೇಶ್ ಭಾಯ್ ಜೋರ್ದಾರ್ ಚಿತ್ರ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬಲ್ಲದು ಎಂಬುದನ್ನು ಕಾದು ನೋಡಬೇಕಿದೆ.

click me!