Sonakshi Sinha ನಿಶ್ಚಿತಾರ್ಥದ ರಹಸ್ಯ ರೀವಿಲ್‌!

First Published May 13, 2022, 6:40 PM IST

ಸೋನಾಕ್ಷಿ ಸಿನ್ಹಾ (Sonakshi Sinha)ಬಾಲಿವುಡ್‌ನ ಮೋಸ್ಟ್ ಬ್ಯಾಚುಲರ್ ನಟಿ. ಅವರ ಅಭಿಮಾನಿಗಳು ಬಹಳ ದಿನಗಳಿಂದ ಮದುವೆಯ ಸುದ್ದಿಗಾಗಿ ಕಾಯುತ್ತಿದ್ದಾರೆ. ಅದೇ ಸಮಯದಲ್ಲಿ, ಕಳೆದ ದಿನಗಳಲ್ಲಿ ಸೋನಾಕ್ಷಿ ಅವರು ಹಂಚಿಕೊಂಡ ಫೋಟೋಗಳು ಈ ಊಹಾಪೋಹಗಳಿಗೆ ಪುಷ್ಟಿ ನೀಡಿತ್ತು ಮತ್ತು  ನಟಿ ನಿಶ್ಚಿತಾರ್ಥವಾಯಿತು ಎಂಬ ಸುದ್ದಿ ಹರಡಿತು. ಈಗ ಅವರ ನಿಶ್ಚಿತಾರ್ಥದ ರಹಸ್ಯ ಬಯಲಾಗಿದೆ. ಪೂರ್ತಿ ವಿವರ ಇಲ್ಲಿದೆ.

ಕಳೆದ ವಾರ ಸೋನಾಕ್ಷಿ ಸಿನ್ಹಾ ತಮ್ಮ Instagram ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಈ ನಟಿ ಸುಂದರವಾದ ದೊಡ್ಡ ವಜ್ರದ ಉಂಗುರವನ್ನು ಧರಿಸಿ ಫೋಸ್‌ ನೀಡಿದ್ದರು.

'BIG day for me ನನ್ನ ಒಂದು ದೊಡ್ಡ ಕನಸು ನನಸಾಗುತ್ತಿದೆ... ಮತ್ತು ಅದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ನಾನು ಕಾಯಲು ಸಾಧ್ಯವಿಲ್ಲ, ಇದು ತುಂಬಾ EZI ಎಂದು ನಾನು ನಂಬಲು ಸಾಧ್ಯವಿಲ್ಲ' ಎಂದು ಫೋಟೋಗೆ ಕ್ಯಾಪ್ಷನ್‌ ನೀಡಿದ್ದರು.

ಅಷ್ಟೇ ಅಲ್ಲ ಪೋಟೊಗಳಲ್ಲಿ ಒಬ್ಬ ಯುವಕ  ಅವರ ಮುಖ ಕಾಣಿಸದಿದ್ದರೂ ಸಹ ನಟಿಯ ಜೊತೆಗಿದ್ದರು. ಇದನ್ನು ನೋಡಿ ಸೋನಾಕ್ಷಿ ಅವರ ಅಭಿಮಾನಿಗಳು ಅವರ ನಿಶ್ಚಿತಾರ್ಥವಾಯಿತು ಎಂದು ಭಾವಿಸಿದ್ದರು.

ಈಗ ಸೋನಾಕ್ಷಿ ಅವರ ವಜ್ರದ ಉಂಗುರದ ರಹಸ್ಯವು ಮುನ್ನೆಲೆಗೆ ಬಂದಿದೆ. ನಟಿ ತನ್ನದೇ ಆದ ಪ್ರೆಸ್-ಆನ್ ನೈಲ್ಸ್ ಬ್ರಾಂಡ್ ಅನ್ನು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ ಅವರ ಹಿಂದಿನ  ಪೋಸ್ಟ್ ಬ್ರ್ಯಾಂಡ್ ಪ್ರಚಾರಕ್ಕಾಗಿತ್ತು. 

ಅದೇ ವೀಡಿಯೊವನ್ನು ಹಂಚಿಕೊಂಡ ಅವರು, 'ಲೇಡಿಸ್‌... ಹಾಟ್ ಗರ್ಲ್ ಸಮ್ಮರ್ ಮತ್ತು #NAILIT ಅನ್ನು ನನ್ನೊಂದಿಗೆ ಸಾಗಿಸಲು ನೀವು ಸಿದ್ಧರಿದ್ದೀರಾ ? @itssoezi'ಎಂದು ಕ್ಯಾಪ್ಷನ್‌ ನೀಡಿದ್ದಾರೆ.  ವೀಡಿಯೊದಲ್ಲಿ, ಸೋನಾ ಉಗುರುಗಳ ಕೆಲವು ಸುಂದರವಾದ ಛಾಯೆಗಳನ್ನು ತೋರಿಸುತ್ತಾರೆ ಮತ್ತು ಇದು ತುಂಬಾ ಮನಮೋಹಕ ವೀಡಿಯೊವಾಗಿದೆ.

ಈ ಪೋಸ್ಟ್‌ಗೆ ಮೊದಲು, ಸೋನಾಕ್ಷಿ ಅವರ ಹಿಂದಿನ ಫೋಟೋಗಳನ್ನು ನೋಡಿ ನಟಿ ಮದುವೆಯಾಗಲು ಹೊರಟಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು.ಮುಂದಿನ ದಿನಗಳಲ್ಲಿ  ಸೋನಾಕ್ಷಿ ಡಬಲ್ ಎಕ್ಸ್‌ಎಲ್ ಮತ್ತು ಕಾಕುಡ ಚಿತ್ರಗಳನ್ನು ಹೊಂದಿದ್ದಾರೆ. ಅವರು ಅಮೆಜಾನ್ ಪ್ರೈಮ್ ವೀಡಿಯೊದ ವೆಬ್ ಸರಣಿ ದಾದ್‌ನಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ಹಿರಾಮಂಡಿ ವೆಬ್ ಸರಣಿಯಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

click me!