ತಮ್ಮ ಮ್ಯಾರೀಡ್‌ ಲೈಫ್‌ ಬಗ್ಗೆ ಮಾತಾನಾಡಿದ Ranbir Kapoor

Published : Jun 13, 2022, 04:20 PM IST

ಏಪ್ರಿಲ್ 14 ರಂದು ಆಲಿಯಾ ಭಟ್-ರಣಬೀರ್ ಕಪೂರ್ (Alia bhatt-Ranbir kapoor) ಕುಟುಂಬ ಮತ್ತು ಆಪ್ತ ಸ್ನೇಹಿತರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ, ದಂಪತಿಗಳು ಹನಿಮೂನ್‌ಗೆ ಹೋಗಲಿಲ್ಲ ಮತ್ತು ಕೆಲಸದಲ್ಲಿ  ಬ್ಯುಸಿಯಾದರು. ಮದುವೆಯ ನಂತರ ರಣಬೀರ್ ಕಪೂರ್ ಜೀವನ ಎಷ್ಟು ಬದಲಾಯಿತು ಎಂಬುದನ್ನು ಅವರೇ ಬಹಿರಂಗಪಡಿಸಿದ್ದಾರೆ.

PREV
18
ತಮ್ಮ ಮ್ಯಾರೀಡ್‌ ಲೈಫ್‌ ಬಗ್ಗೆ ಮಾತಾನಾಡಿದ Ranbir Kapoor

ಮೀಡಿಯಾ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ, ರಣಬೀರ್ ಕಪೂರ್ ಆಲಿಯಾ ಭಟ್ ಜೊತೆಗಿನ ಮದುವೆಯ ನಂತರದ ಜೀವನದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

28

'ಅಂತಹ ದೊಡ್ಡ ಬದಲಾವಣೆ ಆಗಿಲ್ಲ. ನಾವು ಐದು ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ನಾವು ಮದುವೆಯಾಗೋಣ ಎಂದುಕೊಂಡೆವು. ನಮಗೂ ಕೆಲವು ಬದ್ಧತೆಗಳಿದ್ದವು. ಮದುವೆಯ ಮರುದಿನವೇ ನಾವಿಬ್ಬರೂ ಕೆಲಸಕ್ಕೆ ಹೊರಟೆವು. ಆಲಿಯಾ ಶೂಟಿಂಗ್‌ಗೆ ಹೋಗಿದ್ದಳು ಮತ್ತು ನಾನು ಮನಾಲಿಯಲ್ಲಿದ್ದೆ' ಎಂದಿದ್ದಾರೆ ನಟ.

38

'ಆಕೆ ಲಂಡನ್ ನಿಂದ ಬಂದಾಗ ನನ್ನ ‘ಶಂಶೇರಾ’ ಚಿತ್ರ ಬಿಡುಗಡೆಯಾಗುತ್ತದೆ. ಅದರ ನಂತರ ನಾವು ಒಂದು ವಾರ ರಜೆ ತೆಗೆದುಕೊಳ್ಳಲು ಯೋಚಿಸುತ್ತೇವೆ. ನಾವು ಮದುವೆಯಾಗಿದ್ದೇವೆ ಎಂದು ನಮಗೆ ಇನ್ನೂ ತಿಳಿದಿಲ್ಲ' ಎಂದು ರಣಬೀರ್‌ ಕಪೂರ್‌ ಹೇಳಿಕೊಂಡಿದ್ದಾರೆ.

48

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮದುವೆಯ ಮರುದಿನವೇ ತಮ್ಮ ತಮ್ಮ ಸಿನಿಮಾಗಳ ಶೂಟಿಂಗ್‌ಗೆ ತೆರಳಿದರು. ಪ್ರಸ್ತುತ ನಟಿ ತಮ್ಮ ಹಾಲಿವುಡ್ ಚೊಚ್ಚಲ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಶೂಟಿಂಗ್‌ಗೆ ತೆರಳಿದ್ದಾರೆ. 

58

ಇದರ ನಡುವೆ  ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಬಾಲಿವುಡ್ ಚಿತ್ರ 'ಅನಿಮಲ್' ಅನ್ನು ಪೂರ್ಣಗೊಳಿಸಲು ರಣಬೀರ್ ಕಪೂ ಶೂಟಿಗಾಗಿ ಹೊರಟರು. ದೈನಿಕ್ ಭಾಸ್ಕರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಆಲಿಯಾ ಭಟ್ ಅವರಂತೆಯೇ ರಣಬೀರ್‌ ಸಹ ಹಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಾರಾ? ಎಂದು ಕೇಳಿಲಾಯಿತು.

68

'ನನಗೆ ಹಾಲಿವುಡ್ ಕನಸು ಇಲ್ಲ ಎಂದಿದ್ದಾರೆ. ನನಗೆ ಬ್ರಹ್ಮಾಸ್ತ್ರದ ಕನಸುಗಳು ಮಾತ್ರ ಇವೆ. ನಾನು ಎಲ್ಲಿದ್ದೇನೆ ಅಲ್ಲೇ ನನಗೆ ಸಂತೋಷವಾಗಿದೆ' ಎಂದು ರಣಬೀರ್‌ ಹೇಳಿದ್ದಾರೆ.

78

ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಚಿತ್ರ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 

88

ಇವರಲ್ಲದೆ ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಶಾರುಖ್ ಖಾನ್ ಈ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories