ಪತ್ರಲೇಖಾ ಪಾಲ್ ಅವರು ಫೆಬ್ರವರಿ 20, 1989 ರಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಬಂಗಾಳಿ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ನಟಿಯ ತಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರೆ, ತಾಯಿ ಗೃಹಿಣಿ. ಪತ್ರಲೇಖಾಗೆ ಸಹೋದರಿ ಪರ್ಣಲೇಖಾ ಮತ್ತು ಅಗ್ನಿಶ್ ಎಂಬ ಸಹೋದರನಿದ್ದಾನೆ.
ಮಗಳು ತನ್ನ ಹಾದಿಯಲ್ಲಿ ನಡೆಯಬೇಕೆಂದು ತಂದೆ ಬಯಸಿದ್ದರು, ಆದರೆ ಪತ್ರಲೇಖಾ ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಪತ್ರಲೇಖಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಲ್ಲಿ ಓದುತ್ತಿದ್ದಾಗ ಬ್ಲ್ಯಾಕ್ ಬೆರಿ, ಟಾಟಾ ಡೊಕೊಮೊ ಮುಂತಾದ ಕೆಲವು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದರು.
ನಂತರ ನಟನೆಯ ಆಸಕ್ತಿಯಿಂದಾಗಿ ಮುಂಬೈಗೆ ಬಂದರು. ಪತ್ರಲೇಖಾ ಅವರನ್ನು ಮೊದಲ ಬಾರಿಗೆ ಒಂದು ಆಡ್‌ನಲ್ಲೇ ನೋಡಿದ್ದು ಎಂದು ರಾಜ್‌ಕುಮಾರ್ ರಾವ್ ಬಹಿರಂಗ ಪಡಿಸಿದ್ದಾರೆ. ಮೊದಲ ನೋಟದಲ್ಲೇ ಪತ್ರಲೇಖಾ ಅವರಿಗೆ ಮನ ಸೋತ ರಾಜ್‌ಕುಮಾರ್ ಅವರು ಎಷ್ಟು ಸುಂದರ ಹುಡುಗಿ, ಅವಳನ್ನು ಮದುವೆಯಾಗಬೇಕು ಎಂದು ಹೇಳಿದ್ದರು ಎಂಬ ವಿಷಯವನ್ನು ಸ್ವತಃ ನಟ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್‌ಕುಮಾರ್ ರಾವ್ 'ದಿ ಕಪಿಲ್ ಶರ್ಮಾ ಶೋ' ಗೆ ಆಗಮಿಸಿದ್ದರು. ಆ ರಾಜ್‌ಕುಮಾರ್ ರಾವ್ ತಮ್ಮ ಮದುವೆಯ ಬಗ್ಗೆ ಹಿಂಟ್ ನೀಡಿದ್ದರು. ಕಪಿಲ್ ಅವರ ಶೋನಲ್ಲಿ, ರಾಜಕುಮಾರ್ ಅವರು ಪತ್ರಲೇಖಾ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವರು ಅವನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಂತೆ.
‘ಲವ್ ಸೆಕ್ಸ್ ಔರ್ ಧೋಕಾ’ ಚಿತ್ರದಲ್ಲಿ ರಾಜಕುಮಾರ್ ಮಾಡಿದ್ದ ಪಾತ್ರವನ್ನು ನೋಡಿ ಪತ್ರಲೇಖಾ ಅವರು ನಟನನ್ನು ಕೀಳು ಮನುಷ್ಯ ಎಂದು ಅವಳು ಭಾವಿಸಿ, ತಪ್ಪಾಗಿ ತಿಳಿದಿದ್ದರು, ಆದ್ದರಿಂದ ರಾಜ್‌ಕುಮಾರ್ ರಾವ್ ಜೊತೆ ಮೊದಲಿಗೆ ಮಾತನಾಡಲಿಲ್ಲವಂತೆ. ನಂತರ ಮಾತನಾಡಲು ಪ್ರಾರಂಭಿಸಿದಾಗ, ಗೊಂದಲ ದೂರವಾಯಿತು ಎಂದು ನಟ ಹೇಳಿಕೊಂಡಿದ್ದಾರೆ.
ಪತ್ರಲೇಖಾ ಅವರಿಗೆ ರಾಜ್‌ಕುಮಾರ್ ಲೆಟರ್‌ಗಳನ್ನು ಪತ್ರಗಳನ್ನು ಬರೆಯುತ್ತಿದ್ದರಂತೆ. ಅದರಲ್ಲಿ ಕೆಲವು ಪ್ರೇಮ ಪತ್ರಗಳನ್ನು ಇಂದಿಗೂ ರಾಜಕುಮಾರ ಇಟ್ಟುಕೊಂಡಿದ್ದಾರೆ. ಇದೀಗ ಮದುವೆ ದಿನವೇ ಪತ್ರಲೇಖಾಗೆ ಆ ಪತ್ರಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಪತ್ರಗಳ ಮೂಲಕ ಅವರು ತಮ್ಮ ಮನದಾಳದ ಮಾತನ್ನು ಹೇಳಲಿದ್ದಾರೆ.
ಪತ್ರಲೇಖಾ ಅವರು ರಾಜ್‌ಕುಮಾರ್ ರಾವ್ ಅವರೊಂದಿಗೆ 'ಸಿಟಿ ಲೈಟ್ಸ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರ 2014 ರಲ್ಲಿ ಬಿಡುಗಡೆಯಾಯಿತು. ಇದಾದ ನಂತರ ಪತ್ರಲೇಖಾ 'ಲವ್ ಗೇಮ್ಸ್' ಮತ್ತು 'ನಾನು ಕಿ ಜಾನು' ಚಿತ್ರಗಳಲ್ಲಿ ಕಾಣಿಸಿಕೊಂಡರು. ಪತ್ರಲೇಖಾ ವೆಬ್ ಸೀರೀಸ್‌ಗಳಲ್ಲೂ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಬದ್ನಾಮ್ ಗಲಿ, ಫರ್ಬಿಡನ್ ಲವ್, ಮೈನ್ ಹೀರೋ ಬೊಲ್ಲಾ ಹೂನ್ ಸೇರಿವೆ.