'ನಾವು 18 ವರ್ಷಗಳಿಂದ ಸ್ನೇಹಿತರು, ಪೋಷಕರು ಮತ್ತು ದಂಪತಿಗಳಾಗಿ ಜೊತೆಗೆ ಇದ್ದೇವೆ. ಪರಸ್ಪರ ತಿಳುವಳಿಕೆಯ ಈ ಪ್ರಯಾಣವು ಭವಿಷ್ಯದಲ್ಲಿಯೂ ಹೀಗೆಯೇ ಮುಂದುವರಿಯುತ್ತದೆ, ಆದರೆ ಇಂದು ನಾವು ಅಂತಹ ಸಂದಿಗ್ಧದಲ್ಲಿ ನಿಂತಿದ್ದೇವೆ, ಅಲ್ಲಿಂದ ನಮ್ಮ ಹಾದಿಗಳು ಬೇರ್ಪಡುತ್ತಿವೆ. ಐಶ್ವರ್ಯಾ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ಪ್ರತಿಯೊಬ್ಬರೂ ನಮ್ಮ ನಿರ್ಧಾರವನ್ನು ಗೌರವಿಸ ಬೇಕು ಮತ್ತು ಗೌಪ್ಯತೆಯನ್ನು ಕಾಪಾಡ ಬೇಕು' ಎಂದು ಜನವರಿ 17 ರಂದು, ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಧನುಷ್ ಬರೆದಿದ್ದರು.