ತಂಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ತನಗೆ ಕೆಲಸ ಸಿಗುವುದಿಲ್ಲ ಎಂದು ಶಿಲ್ಪಾ ಶೆಟ್ಟಿ ಭಯಪಟ್ಟಿದರಂತೆ!

Published : Feb 02, 2022, 06:57 PM ISTUpdated : Feb 02, 2022, 06:58 PM IST

ಶಿಲ್ಪಾ ಶೆಟ್ಟಿ (Shilpa Shetty) ಅವರ ತಂಗಿ ಶಮಿತಾ ಶೆಟ್ಟಿಗೆ (Shamita Shetty) 43 ವರ್ಷ. ಅವರು ಫೆಬ್ರವರಿ 2, 1979 ರಂದು ಮಂಗಳೂರಿನಲ್ಲಿ ಜನಿಸಿದರು. ಅಂದಹಾಗೆ, ಬ್ಲಾಕ್‌ಬಸ್ಟರ್ ಚಿತ್ರ ಮೊಹಬ್ಬತೇನ್‌ನೊಂದಿಗೆ ಪದಾರ್ಪಣೆ ಮಾಡಿದ ನಂತರವೂ ಶಮಿತಾ ತನ್ನ ವೃತ್ತಿಜೀವನವನ್ನು ಉಳಿಸಲು ಸಾಧ್ಯವಾಗಲಿಲ್ಲ. ನಂತರ ಅವರು ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದರು ಆದರೆ ಅವರು ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ, ಅವರು ಚಲನಚಿತ್ರಗಳಿಂದ ದೂರವಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ 15 ರ ಕಾರಣ, ಅವರು ಚರ್ಚೆಯಲ್ಲಿದ್ದಾರೆ. ಫೈನಲ್ ತಲುಪಿದ್ದರೂ ಜೇತರಾಗಲು ಸಾಧ್ಯವಾಗಲಿಲ್ಲ. ತಮ್ಮ ತಂಗಿಯ ಡೆಬ್ಯೂ ಸಿನಿಮಾದ  20 ವರ್ಷಗಳ ನಂತರ ಶಿಲ್ಪಾ ಶಮಿತಾರ ಬಗ್ಗೆ ಹಲವು ವಿಷಯಗಳನ್ನು ರಿವೀಲ್‌ ಮಾಡಿದ್ದಾರೆ. 

PREV
18
ತಂಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ತನಗೆ ಕೆಲಸ ಸಿಗುವುದಿಲ್ಲ ಎಂದು ಶಿಲ್ಪಾ ಶೆಟ್ಟಿ ಭಯಪಟ್ಟಿದರಂತೆ!

ಶಮಿತಾ ಶೆಟ್ಟಿ ಬಾಲ್ಯದಿಂದಲೂ ಫ್ಯಾಷನ್‌ನಲ್ಲಿ ಒಲವು ಹೊಂದಿದ್ದರು ಮತ್ತು ಈ ಹವ್ಯಾಸವನ್ನು ಪೂರೈಸಲು  ಪದವಿ ಮುಗಿಸಿ, ಅವರು ಮುಂಬೈನ ಎಸ್‌ಎನ್‌ಡಿಟಿ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್‌ನಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಿದರು. ಇದರ ನಂತರ ಅವರು ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರೊಂದಿಗೆ ಕೆಲಸ ಮಾಡಿದರು. ಫ್ಯಾಷನ್ ಡಿಸೈನಿಂಗ್ ನಂತರ ಶಮಿತಾ ಇಂಟೀರಿಯರ್ ಡಿಸೈನಿಂಗ್ ಲೋಕಕ್ಕೆ ಕಾಲಿಟ್ಟರು.

28

ಕಾರ್ಯಕ್ರಮವೊಂದರಲ್ಲಿ ಶಿಲ್ಪಾ ಶೆಟ್ಟಿ ತನ್ನ ತಂಗಿಯ ಬಗ್ಗೆ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಿಂದಲೂ  ನಾನು ಕಪ್ಪಾಗಿದ್ದರೆ ಶಮಿತಾ ಬಿಳಿ ಇದ್ದರು. ಆಗ ಎಲ್ಲರೂ ಶಿಲ್ಪಾರನ್ನು ಕಪ್ಪು ಎಂದು ಚುಡಾಯಿಸುತ್ತಿದ್ದರು, ಆದ್ದರಿಂದ ಅವರಿಗೆ ತುಂಬಾ ಬೇಸರವಾಗುತ್ತಿತ್ತು ಎಂದು ಶಿಲ್ಪಾ ಶೆಟ್ಟಿ ಬಹಿರಂಗ ಪಡಿಸಿದ್ದರು. 

48

ಶಮಿತಾ 2000 ರಲ್ಲಿ ಮೊಹಬ್ಬತೇನ್ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಅವಳು ನನಗಿಂತ ಚೆನ್ನಾಗಿ ಕಾಣುತ್ತಿದ್ದಳು.ಸುಂದರಿ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅವಳು ಉತ್ತಮ ನಟಿ ಮತ್ತು ನೃತ್ಯಗಾರ್ತಿಯೂ ಹೌದು. ಅವಳು ಡೆಬ್ಯೂ ಮಾಡುವಾಗ, ಈಗ ಯಾರೂ ನನಗೆ ಕೆಲಸ ನೀಡುವುದಿಲ್ಲ ಎಂದು ನನಗೆ ಅನಿಸಿತು ಎಂದು ಶಿಲ್ಪಾ ಹೇಳುತ್ತಿದ್ದರು.

 
 

58

ಅಂದಹಾಗೆ, ಇಬ್ಬರು ಸಹೋದರಿಯರ ನಡುವೆ ಅದ್ಭುತವಾದ ಬಾಂಧವ್ಯವಿದೆ. ಶಿಲ್ಪಾ ಆಗಾಗ ಶಮಿತಾಳ ಕಾಲು ಎಳೆಯುತ್ತಾರೆ.  ಶಮಿತಾ ಬಾಲ್ಯದಲ್ಲಿ ಅವರನ್ನು ಅಕ್ಕ ಎಂದು ಕರೆಯುತ್ತಿರಲಿಲ್ಲ. ಅಮ್ಮ ಶಮಿತಾಗೆ ಶಿಲ್ಪಾ ಅಕ್ಕಾ ಅಥವಾ ದೀದಿ ಎಂದು ಕರೆಯಲು ಹೇಳುತ್ತಿದ್ದಾಗ, ಅವಳು  ಕೇವಲ ಮೂರುವರೆ ವರ್ಷ  ಮಾತ್ರ ದೊಡ್ಡವಳು ನಾನು ಅವಳನ್ನು ಶಿಲ್ಪಾ ಎಂದು ಕರೆಯುತ್ತೇನೆ ಎಂದು ಹೇಳುತ್ತಿದ್ದಳು ಎಂಬ ವಿಷಯ ಶಿಲ್ಪಾ ಬಹಿರಂಗ ಪಡಿಸಿದ್ದರು.

68

 ಫ್ಯಾಶನ್ ಮತ್ತು ಇಂಟೀರಿಯರ್ ಡಿಸೈನರ್ ಕೋರ್ಸ್ ಮಾಡಿದ ನಂತರ  ಶಮಿತಾ ಶೆಟ್ಟಿ  ಅವರು ನಟಿಸಲು ಯೋಚಿಸಿದರು ಮತ್ತು ಮೊಹಬ್ಬತೇನ್ ಚಿತ್ರದಿಂದ ಸಿನಿಮಾಕ್ಕೆ ಎಂಟ್ರಿ ಪಡೆದರು. ಇದಕ್ಕಾಗಿ ಶಮಿತಾ ಅವರು 2001 ರಲ್ಲಿ IIFA ಬೆಸ್ಟ್‌ ಡೆಬ್ಯೂ ಆಕ್ಟರ್‌ (ಮಹಿಳೆ) ಪ್ರಶಸ್ತಿಯನ್ನು ಸಹ ಪಡೆದರು. ಅದೇ ವರ್ಷ ಬಿಡುಗಡೆಯಾದ ಅವರ ಶರರಾ ಶರರಾ.. ಹಾಡು  ಶಮಿತಾ ರಾತ್ರೋರಾತ್ರಿ ಸ್ಟಾರ್ ಆದರು.

 

78

ಅದೇ ಸಮಯದಲ್ಲಿ, ಬಾಲಿವುಡ್  ನಿಮ್ಮನ್ನು ಕಳೆದುಕೊಳ್ಳಬಹುದು ಎಂದು ಶಮಿತಾ ಶೆಟ್ಟಿ ಹೇಳುತ್ತಾರೆ. ಸಿನಿಮಾಗಳ ಜೊತೆಗೆ ಇಂಟೀರಿಯರ್ ಡಿಸೈನಿಂಗ್ ನಲ್ಲೂ ಶಮಿತಾ ಹೆಸರು ಗಳಿಸಿದ್ದರು. ಅವರು ಮುಂಬೈನಲ್ಲಿ ರಾಯಲ್ಟಿ ಎಂಬ ಕ್ಲಬ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಚಂಡೀಗಢದಲ್ಲಿ ಅವರು ವಿನ್ಯಾಸಗೊಳಿಸಿದ ಲಾಸ್ಸಿಸ್ ಸ್ಪಾ ಅಂತರಾಷ್ಟ್ರೀಯ ಮಟ್ಟದಲ್ಲಿ  ಹೆಸರು ಗಳಿಸಿದೆ. 

88

ಶಮಿತಾ ಶೆಟ್ಟಿ ಸಾಥಿಯಾನ್, ಮೇರೆ ಯಾರ್ ಕಿ ಶಾದಿ ಹೈ, ಫರೇಬ್, ಜಹರ್, ಬೇವಾಫಾ, ಕ್ಯಾಶ್, ಹೈ ಬೇಬಿ, ಅಗ್ನಿಪಂಖ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಹಾಗೂ  ಅವರು ಕೆಲವು ಸೌತ್ ಚಿತ್ರಗಳಲ್ಲೂ ಆಕ್ಟ್  ಮಾಡಿದ್ದಾರೆ.

Read more Photos on
click me!

Recommended Stories