ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಅವರಿಗೆ ವಯಸ್ಸು 45 ಆದರೂ ಇನ್ನೂ ಮದುವೆಯಾಗಿಲ್ಲ. ಆದ್ದರಿಂದ ಅವರು ಮಾಧ್ಯಮಗಳಿಗೆ ಎದುರಾದಾಗೊಮ್ಮೆ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಹಿಂದೊಮ್ಮೆ ತಿರುಪತಿಯಲ್ಲಿ ನಡೆದ ಆದಿ ಪುರುಷ ಸಿನಿಮಾದ ಪ್ರಿ ರಿಲೀಸ್ ಇವೆಂಟ್ನಲ್ಲಿಯೂ ಇದೇ ಪ್ರಶ್ನೆ ಎದುರಾಗಿದ್ದಾಗ ಅವರು, ಮದುವೆಯ ಬಗ್ಗೆ ಮೌನ ಮುರಿದಿದ್ದರು.
26
ಮದುವೆ ಎಂದ್ರೆ ಸಬೂಬು
ಮದುವೆ ಪ್ರಶ್ನೆ ಕೇಳಿದಾಗೆಲ್ಲ ಏನಾದರೂ ಒಂದು ಸಬೂಬು ನೀಡಿ ಜಾರಿಕೊಳ್ಳುತ್ತಿದ್ದ ನಟ, ಮದುವೆಯ ಪ್ರಶ್ನೆ ಕೇಳುತ್ತಿದ್ದಂತೆಯೇ, ಮದುವೆಗೆ ಕಾಲ ಕೂಡಿ ಬರಲಿ. ಇದೇ ತಿರುಪತಿಯಲ್ಲೇ ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದರು.
36
ಮದುವೆ ಬಗ್ಗೆ ಮೌನವಾಗಿರೋ ನಟ
ಆದರೆ ಮದುವೆ ಯಾವಾಗ ಎನ್ನುವುದನ್ನು ಮಾತ್ರ ಅವರು ಹೇಳಿಕೊಂಡಿಲ್ಲ. ಅವರ ಹೆಸರು ಮಾತ್ರ ನಟಿ ಅನುಷ್ಕಾ ಜೊತೆ ಥಳಕು ಹಾಕಿಕೊಳ್ಳುತ್ತಲೇ ಇದೆ. ಅನುಷ್ಕಾ ಮತ್ತು ಪ್ರಭಾಸ್ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲು ಬಿಲ್ಲಾ ಜೊತೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ಅನುಷ್ಕಾ ಮತ್ತು ಪ್ರಭಾಸ್ ಅವರ ಮದುವೆಯ ಹಾಗೂ ಜೊತೆಯಲ್ಲಿ ಮಗುವಿದ್ದ ಫೋಟೋ ವೈರಲ್ ಆಗಿತ್ತು. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯ ನಡುವೆಯೇ ಈ ಫೋಟೋಗಳು ವೈರಲ್ ಆಗುತ್ತಿವೆ. ಈ ಹಾಟ್ ವಿಷಯದ ನಡುವೆಯೇ, ಮತ್ತೊಮ್ಮೆ ಪ್ರಭಾಸ್ ಮದುವೆ ಸುದ್ದಿ ಜೋರಾಗಿದೆ.
56
ಮದುವೆ ಬಗ್ಗೆ ಮೌನ ಮುರಿದ ನಟ
ಇದೀಗ ನಟನೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ನಿಮಗೆ ನಟನೆ ಮಾಡುವಾಗ ಯಾರ ಜೊತೆಯಾದರೂ ಲವ್ ಆಗಿತ್ತಾ ಎನ್ನುವ ಪ್ರಶ್ನೆಗೆ ನಟ ಇಲ್ಲವೇ ಇಲ್ಲ ಎಂದಿದ್ದಾರೆ. ನಿಮ್ಮ ಲವ್ ಅನ್ನು ಯಾರಾದ್ರೂ ರಿಜೆಕ್ಟ್ ಮಾಡಿದ್ರಾ ಕೇಳಿದಾಗ, ಕಾಲೇಜ್ ಡೇಸ್ನಲ್ಲಿ ಅವೆಲ್ಲಾ ಮಾಮೂಲು ಬಿಡಿ ಎಂದು ತಮಾಷೆ ಮಾಡಿದ್ದಾರೆ. ನೀವು ಯಾರನ್ನಾದರೂ ಲವ್ ಮಾಡ್ತೀರಾ ಕೇಳಿದಾಗ ಇಲ್ಲ ಎಂದಿದ್ದಾರೆ. ಯಾವಾಗ ಮದುವೆಯಾಗುತ್ತೀರಿ ಎಂದು ಪ್ರಶ್ನಿಸಿದಾಗ, ನನಗೂ ಅದರ ಬಗ್ಗೆ ಗೊತ್ತಾಗಬೇಕಿದೆ. ನನಗೂ ಗೊತ್ತಿಲ್ಲ ಎನ್ನುವ ಮೂಲಕ ಮದುವೆ ವಿಷಯಕ್ಕೆ ತೆರೆ ಎಳೆದಿದ್ದಾರೆ.
66
ಮದುವೆ ಬಗ್ಗೆ ಅಜ್ಜಿ ಮಾತು
ಎರಡು ವರ್ಷಗಳ ಹಿಂದೆ, ಪ್ರಭಾಸ್ ಅಜ್ಜಿ ಹಾಗೂ ಕೃಷ್ಣಂರಾರಜು ಪತ್ನಿ ಶ್ಯಾಮಲಾದೇವಿ ಮದುವೆಯ ಬಗ್ಗೆ ಮಾತನಾಡಿದ್ದರು. ಪ್ರಭಾಸ್ ಮದುವೆಯಾಗುವುದು ನಿಶ್ಚಿತ ಮತ್ತು ಆ ದಿನ ಶೀಘ್ರದಲ್ಲೇ ಬರಲಿದೆ ಎಂದು ಅವರು ಹೇಳಿದ್ದರು. ಮುಂದಿನ ದಸರಾ ವೇಳೆಗೆ ಪ್ರಭಾಸ್ ಮದುವೆ ನಡೆಯಲಿದೆ ಎಂದಿದ್ದರು. ಆದರೆ ಇಂದಿಗೂ ನಟನೆ ಮದುವೆ ಮಾತ್ರ ಆಗಲಿಲ್ಲ.