ಕೆಲವು ಸಿನಿಮಾಗಳು ಅಮರ ಪ್ರೇಮಿಗಳಿಗೆ, ಜೋಡಿಗಳಿಗೆ ಹೆಸರುವಾಸಿಯಾದರೆ, ಇನ್ನೂ ಕೆಲವು ಸಿನಿಮಾಗಳಲ್ಲಿ ನಾಯಕರು ತಮಗೆ ಹುಡುಗಿ ಸಿಗದೇ ಇದ್ದರೂ ಆಕೆ ಚೆನ್ನಾಗಿರಬೇಕು ಎಂದು ಏನೇನೋ ಮಾಡುತ್ತಾರೆ. ಅಂತಹ ಸಿನಿಮಾಗಳ ಲಿಸ್ಟ್ ಇಲ್ಲಿದೆ…
29
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ
ಈ ಸಿನಿಮಾ ಬಗ್ಗೆ ಏನು ಹೇಳೋದು, ತಾನು ಹುಚ್ಚರಂತೆ ಪ್ರೀತಿಸಿದ ಹುಡುಗಿ ಬೇರೆ ಮದುವೆಯಾಗಿರೋದು ಗೊತ್ತಾದ ಮೇಲೂ, ಆಕೆಗೆ ಯಾವುದೇ ರೀತಿ ಕಾಟ ಕೊಡದೇ, ಆಕೆಯ ಎಲ್ಲಾ ಆಸೆಗಳನ್ನು ಈಡೇರಿಸುತ್ತಾ ಬರುವ ನಾಯಕನ ಕಥೆ.
39
ಮುಂಗಾರುಮಳೆ
ತಾನು ಪ್ರೀತಿಸಿದ ಹುಡುಗಿಗೆ ಮದುವೆಯಾಗುತ್ತಿದೆ ಎಂದು ಗೊತ್ತಾದ ಮೇಲೂ ಆಕೆಯನ್ನು ಪ್ರೀತಿಸಿ, ಕೊನೆಗೆ ಮನೆಯವರಿಗಾಗಿ, ಆಕೆಯ ಕಣ್ಣಲ್ಲಿ ಕೆಟ್ಟವನಾಗಿ, ಪ್ರೀತಿಯನ್ನು ತ್ಯಾಗ ಮಾಡುವ ಸಿನಿಮಾ.
ವಿಲನ್ ಆಗಿದ್ದವನನ್ನು ಬದಲಾಯಿಸಿ ಮನುಷ್ಯನನ್ನಾಗಿ ಮಾಡುವ ನಾಯಕಿ. ಕೊನೆಗೆ ಮದುವೆಯಾಗಿ, ಆಕೆ ಗರ್ಭಿಣಿಯಾಗಿದ್ದಾಗ, ನಡೆಯುತ್ತೆ ಕೊಲೆ. ತನ್ನ ಪ್ರೀತಿಯನ್ನು ಕೊಂದವನ ಮೇಲೆ ಸೇಡು ತೀರಿಸಲು ನಾಯಕ ಏನು ಮಾಡುತ್ತಾನೆ ಅನ್ನೋದು ಕಥೆ.
59
ಸೀತಾ ರಾಮಂ
ಸೈನಿಕನೊಬ್ಬನ ಪ್ರೇಮ ಕಥೆ ಆದರೆ ಇಲ್ಲಿ ನಾಯಕಿಯೇ ನಿಜವಾದ ಹೀರೋ. ತಾನು ಮಹಾರಾಣಿಯಾದರೂ ಪ್ರೀತಿಸಿದ ಒಬ್ಬ ಸಾಮಾನ್ಯ ಸೈನಿಕನಿಗಾಗಿ, ಕೊನೆಯವರೆಗೂ ಕಾಯುವ ನಾಯಕಿಯ ಕಥೆ.
69
ವೀರ್ ಝಾರ
ಭಾರತೀಯ ಪೈಲಟ್ ವೀರ್ ಮತ್ತು ಪಾಕಿಸ್ತಾನಿ ಹುಡುಗಿ ಜ಼ಾರಾ ನಡುವೆ ಲವ್ ಆಗುತ್ತೆ. ವೀರ್ ಪಾಕಿಸ್ತಾನಿ ಜೈಲಿನಲ್ಲಿ ವರ್ಷಗಳನ್ನು ಕಳೆಯುತ್ತಿದ್ದರೆ, ಜ಼ಾರಾ ವೀರ್ ಸಾವಿನ್ನಪ್ಪಿದ್ದಾನೆ ಎಂದು ತಿಳಿದುಭಾರತದ ಅವನ ಹಳ್ಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಡುತ್ತಾಳೆ. ಇದು ಅದ್ಭುತವಾದ ಪ್ರೇಮ ಕಥೆ
79
96
ಶಾಲೆಯಲ್ಲಿ ಪ್ರೀತಿಯಲ್ಲಿ ಬಿದ್ದ ಹುಡುಗಿಗಾಗಿ ರಾಮ್ ಮದುವೆಯಾಗದೇ ಕಾಯುತ್ತಿರುತ್ತಾನೆ. ತನ್ನ ಪ್ರೀತಿಯ ಹುಡುಗಿಗೆ ಈಗಾಗಲೇ ಮದುವೆಯಾಗಿದೆ ಎಂದು ಗೊತ್ತಾದ ಮೇಲೂ ಆಕೆಯ ನೆನಪಿನಲ್ಲಿ ಉಳಿಯುತ್ತಾನೆ. ಅದು ಪರಿಶುದ್ಧ ಪ್ರೀತಿಯ ಕಥೆ.
89
ಸನಮ್ ತೇರಿ ಕಸಮ್
ಸರಸ್ವತಿಯ ತಂದೆ ಅವಳನ್ನು ಮನೆಯಿಂದ ಹೊರಗೆ ಹಾಕಿದಾಗ, ಇಂದರ್ ಎಲ್ಲಾ ಅಡೆತಡೆಗಳ ವಿರುದ್ಧ ಆಕೆಯೊಂದಿಗೆ ನಿಲ್ಲುತ್ತಾನೆ, ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಆಕೆಗಾಗಿ ಇಂದರ್ ಜೀವನದಲ್ಲಿ ತುಂಬಾನೆ ಬದಲಾವಣೆ ಉಂಟಾಗುತ್ತೆ. ಆದರೆ ನಂತರ ಇಬ್ಬರೂ ದೂರವಾಗುವ ಸಂದರ್ಭ ಬರುತ್ತೆ. ಇಂತಹ ಸಂದರ್ಭದಲ್ಲಿ ಇಂದರ್ ಏನು ಮಾಡ್ತಾನೆ ಅನ್ನೋದನ್ನು ನೋಡಬಹುದು.
99
ಶಹಜಹಾನ್
ಇದು ತಮಿಳು ಸಿನಿಮಾ. ವಿಜಯ್ ನಟನೆಯ ಈ ಸಿನಿಮಾದಲ್ಲಿ ವಿಜಯ್ ಲವ್ ಅಡ್ವೈಸ್ ಕೊಡುವ ಸ್ನೇಹಿತನಾಗಿ ನಟಿಸುತ್ತಾರೆ. ನಾಯಕ, ತಮ್ಮ ಬೆಸ್ಟ್ ಫ್ರೆಂಡ್ ಒಬ್ಬನಿಗೆ ಆತ ಇಷ್ಟ ಪಡುವ ಹುಡುಗಿಯನ್ನು ಹೇಗೆ ಒಲಿಸಿಕೊಳ್ಳೋದು ಎನ್ನುವುದನ್ನು ಹೇಳಿ ಕೊನೆಗೆ ಆಕೆ ಅವನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾನೆ. ಆದರೆ ಕೊನೆಗೆ ತಾನು ಪ್ರೀತಿಸುತ್ತಿರುವ ಹುಡುಗಿಯೇ ಆ ಹುಡುಗಿ ಅನ್ನೋದು ಗೊತ್ತಾಗುತ್ತೆ. ಇದು ಒನ್ ಸೈಡ್ ಲವ್ ಸ್ಟೋರಿಯಾಗಿದೆ.