ರಾಹುಲ್ ಮಹಾಜನ್‌ ಕಿರುಕುಳ: ನೋವ ಮಾಸಲು ಪಾಯಲ್‌ಗೆ ಬೇಕಾಯ್ತು ಟೈಮ್

Published : Jul 10, 2022, 05:14 PM IST

ನಟಿ ಮತ್ತು ರೂಪದರ್ಶಿ ಪಾಯಲ್ ರೋಹಟಗಿ (Payal Rohatgi) ಅವರು ಕುಸ್ತಿಪಟು ಸಂಗ್ರಾಮ್ ಸಿಂಗ್  (Sangram Singh) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 37 ವರ್ಷದ ಪಾಯಲ್ ತನ್ನ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ವಿಶೇಷವಾಗಿ ಸಂಗ್ರಾಮ್ ಅವರ ಜೀವನದಲ್ಲಿ ಪ್ರವೇಶಿಸುವ ಮೊದಲು, ಅವರು ಸಂಬಂಧದ ವಿಷಯದಲ್ಲಿ ಸಾಕಷ್ಟು ಸಹಿಸಿದ್ದಾರೆ. ತನ್ನ ಮಾಜಿ ಗೆಳೆಯನೊಬ್ಬ ತನ್ನ ತಲೆಯನ್ನು ಬಾಗಿಲಿಗೆ ಹೊಡೆದಿದ್ದಾನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಸಂಬಂಧದಿಂದ ಆಕೆ ತುಂಬಾ ನೊಂದಿದ್ದರು ಮತ್ತು  ಅವರು ತನ್ನ ಜೀವವನ್ನು ತೆಗೆದುಕೊಳ್ಳುವ ಯೋಚನೆಯನ್ನು ಮಾಡಿದ್ದರಂತೆ. ಮಾಜಿ ಕೇಂದ್ರ ಸಚಿವ ದಿವಂಗತ ಪ್ರಮೋದ್ ಮಹಾಜನ್ ಮಗ ರಾಹುಲ್ ಮಹಾಜನ್ ಕಿರುಕುಳಕ ಅನುಭವಿಸಿದ್ರಾ ಇವರು?

PREV
111
ರಾಹುಲ್ ಮಹಾಜನ್‌ ಕಿರುಕುಳ: ನೋವ ಮಾಸಲು ಪಾಯಲ್‌ಗೆ ಬೇಕಾಯ್ತು ಟೈಮ್

ಸಂಗ್ರಾಮ್ ಸಿಂಗ್ ಗಿಂತ ಮೊದಲು ಪಾಯಲ್ ರಾಹುಲ್ ಮಹಾಜನ್ ಜೊತೆ ಸಂಬಂಧ ಹೊಂದಿದ್ದರು. 'ಬಿಗ್ ಬಾಸ್' ಎರಡನೇ ಸೀಸನ್‌ನಲ್ಲಿ ರಾಹುಲ್ ಮತ್ತು ಪಾಯಲ್ ಸ್ಪರ್ಧಿಗಳಾಗಿ ಕಾಣಿಸಿಕೊಂಡಾಗ ಅವರ ಅಫೇರ್ ಶುರುವಾಯಿತು. 

211

ಆದರೆ ರಾಹುಲ್ ಅವರ ಮಾಜಿ ಪತ್ನಿ ಡಿಂಪಿ ಗಂಗೂಲಿ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದಾಗ, ರಾಹುಲ್ ತನ್ನನ್ನೂ ನಿಂದಿಸಿದ್ದಾನೆ ಮತ್ತು ದೈಹಿಕವಾಗಿ ಕಿರುಕುಳ (Physcial harasment) ನೀಡಿದ್ದಾನೆ ಎಂದು ಪಾಯಲ್ ಹೇಳಿದ್ದಾರೆ.

311

 'ರಾಹುಲ್ ನನ್ನನ್ನು ಎರಡು ಬಾರಿ ಹೊಡೆದರು, ಒಮ್ಮೆ ಅವನು ನನ್ನ ತಲೆಯನ್ನು ಬಾಗಿಲಿಗೆ ಹೊಡೆದಿದ್ದ, ರಾಹುಲ್ ಕೋಪಗೊಂಡಾಗ, ಅವನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ' ಎಂದು  ಪಾಯಲ್ 2010 ರಲ್ಲಿ ಸಂಭಾಷಣೆಯೊಂದರಲ್ಲಿ ಹೇಳಿದ್ದರು. ಈ ಸಂವಾದದಲ್ಲಿ ಡಿಂಪಿ ಗಂಗೂಲಿ ಆರೋಪದ ಬಗ್ಗೆ ಅವರು, 'ನನಗೆ ಅವಳ ಬಗ್ಗೆ ಬೇಸರವಾಗುತ್ತದೆ. ಯಾರನ್ನೂ ಈ ರೀತಿ ನಡೆಸಿಕೊಳ್ಳಬಾರದು. ಅವಳು ಮಹಿಳೆ ಮತ್ತು ಅವಳ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಎಂದು ಹೇಳಿದರು.

411

ಪಾಯಲ್ ಪ್ರಕಾರ, 'ಬಿಗ್ ಬಾಸ್ 2' ನಿಂದ ಹೊರಬಂದ ನಂತರ ಅವರ ಜೀವನವೇ ನಾಶವಾಯಿತು. ಕಳೆದ ಬಾರಿ ಕಂಗನಾ ರಣಾವತ್ ಅವರ ಲಾಕಪ್ ಇಂಡಿಯಾ' ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಆಗಮಿಸಿದ್ದರು  ಅವರು ರಾಹುಲ್ ಮಹಾಜನ್ ಅವರೊಂದಿಗಿನ ಸಂಬಂಧವನ್ನು ಹೆಸರಿಸದೇ harmful ಎಂದು ಕರೆದಿದ್ದರು. 'ಇದು ಲವ್‌  ಆಂಗಲ್, ಇದು ನನ್ನ ಜೀವಕ್ಕೆ ಹಾನಿಕಾರಕವಾಗಿತ್ತು, ನಾನು ಹೆಚ್ಚು ಕುಡಿಯುತ್ತಿದ್ದೆ, ನಾನು 48 ಗಂಟೆಗಳ ಕಾಲ ಕುಡಿಯುತ್ತಿದ್ದೆ, ನಾನು ಡ್ರಗ್ಸ್ ಸೇವಿಸಿದ್ದೇನೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾನು ಭಾವಿಸಿದ್ದೆ,' ಎಂದು ಹೇಳಿಕೊಂಡಿದ್ದರು

511

ಪಾಯಲ್ ತಾಯಿಯಾಗಲಾರಳು ಎಂಬ ವಿಷಯವನ್ನು ಅವರು ಲಾಕಪ್‌ ಶೋನಲ್ಲಿಯೇ ಬಹಿರಂಗಪಡಿಸಿದ್ದಾರೆ. ಸಂಗ್ರಾಮ್ ಮತ್ತು ಅವರು ಕಳೆದ 4-5 ವರ್ಷಗಳಿಂದ ನಿರಂತರವಾಗಿ ಮಗುವಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.


 

611

ಅವರು ಐವಿಎಫ್ ಅನ್ನು ಸಹ ಪ್ರಯತ್ನಿಸಿದರು, ಆದರೆ ಅದರಲ್ಲಿಯೂ ವಿಫಲಳಾದರು ಎಂದು ಬಹಿರಂಗಪಡಿಸಿದ್ದಾರೆ. ಆಕೆಯ ಪ್ರಕಾರ, ಈ ಸತ್ಯವನ್ನು ತಿಳಿದ ಅವಳು ಸಂಗ್ರಾಮ್‌ಗೆ ಬೇರೆಯವರನ್ನು ಮದುವೆಯಾಗುವಂತೆ ಸಲಹೆ ನೀಡಿದ್ದರಂತೆ .

711

ಆಂಧ್ರಪ್ರದೇಶದ (ಈಗ ತೆಲಂಗಾಣ) ಹೈದರಾಬಾದ್‌ನಲ್ಲಿ 9  ನವೆಂಬರ್ 1984 ರಂದು ಜನಿಸಿದ ಪಾಯಲ್‌ ಅವರ ತಂದೆ ಶಶಾಂಕ್ ರೋಹಟಗಿ ರಾಸಾಯನಿಕ ಎಂಜಿನಿಯರ್ ಆಗಿದ್ದಾರೆ ಮತ್ತು ತಾಯಿ ವೀಣಾ ರೋಹಟಗಿ ಶಿಕ್ಷಕಿಯಾಗಿದ್ದಾರೆ. ಪಾಯಲ್ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.


 

811

ಪಾಯಲ್ 2000 ರಲ್ಲಿ ಫೆಮಿನಾ ಮಿಸ್ ಇಂಡಿಯಾ (Femina Miss India) ಫೈನಲಿಸ್ಟ್ ಆಗಿದ್ದಾರೆ. 2001 ರಲ್ಲಿ, ಅವರು ಮಿಸ್ ಟೂರಿಸಂ ವರ್ಲ್ಡ್ (Miss Tourism World) ಪ್ರಶಸ್ತಿಯನ್ನು ಗೆದ್ದರು.

911

ಪಾಯಲ್ 2002 ರಲ್ಲಿ 'ಯೇ ಕ್ಯಾ ಹೋ ರಹಾ ಹೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಅವರು 'ಕಾರ್ಪೊರೇಟ್', 'ಧೋಲ್; 'ಅಗ್ಲಿ ಔರ್ ಪಗ್ಲಿ', ಮತ್ತು 'ದಿಲ್ ಕಬಡ್ಡಿ' ಸಿನಿಮಾಗಳಲ್ಲಿ ನಟಿಸಿದ್ದಾರೆ.

 

1011

'ಬಿಗ್ ಬಾಸ್ 2' ಹೊರತಾಗಿ, ಪಾಯಲ್ ರಿಯಾಲಿಟಿ ಶೋಗಳಾದ 'ಫಿಯರ್ ಫ್ಯಾಕ್ಟರ್ 2', 'ಜೋರ್ ಕಾ ಜಟ್ಕಾ ಟೋಟಲ್ ವೈಪೌಟ್-1', 'ಸರ್ವೈವರ್ ಇಂಡಿಯಾ 1', ವೆಲ್‌ಕಮ್‌: ಬಾಜಿ ಮೆಹಮಾನ್ ನವಾಜಿ ಕಿ 1' ಮತ್ತು 'ನಾಚ್ ಬಲಿಯೇ'ಗಳಲ್ಲಿ ಕಾಣಿಸಿಕೊಂಡಿದ್ದಾರೆ. 7'  

1111

ಪಾಯಲ್ ಮತ್ತು ಸಂಗ್ರಾಮ್ ಅವರ ಸಂಬಂಧವು 'ಸರ್ವೈವರ್ ಇಂಡಿಯಾ 1' ಸೆಟ್‌ನಲ್ಲಿ ಪ್ರಾರಂಭವಾಯಿತು. ಅವರು ಸುಮಾರು 12 ವರ್ಷಗಳ ಸಂಬಂಧದಲ್ಲಿದ್ದಾರೆ. ಅವರ ನಿಶ್ಚಿತಾರ್ಥವೂ ಸುಮಾರು 8 ವರ್ಷಗಳ ಹಿಂದೆ 2014 ರಲ್ಲಿ ನಡೆದಿತ್ತು.

click me!

Recommended Stories