ಪೊನ್ನಿಯಿನ್ ಸೆಲ್ವನ್: ಬಾಲಿವುಡ್‌ಗೆ ಹೊಡೆತ ಕೊಡಲು ದಕ್ಷಿಣದ ಮತ್ತೊಂದು ಚಿತ್ರ?
First Published | Jul 10, 2022, 5:04 PM ISTನಿರ್ದೇಶಕ ಮಣಿರತ್ನಂ (Mani Ratnam) ಅವರ ಪೊನ್ನಿಯಿನ್ ಸೆಲ್ವನ್ 1 (Ponniyin Selvan: I) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಗಿದೆ. ಕೇವಲ ಒಂದು ನಿಮಿಷ 20 ಸೆಕೆಂಡ್‌ಗಳ ಈ ಟೀಸರ್‌ನಲ್ಲಿನ ಅದ್ಧೂರಿತನ ಎಲ್ಲರನ್ನೂ ಬೆರಗುಗೊಳಿಸಿದೆ. ಚಿತ್ರದ ಟೀಸರ್ ಕೂಡ ಅದ್ಧೂರಿಯಾಗಿ ಲಾಂಚ್ ಆಗಿದೆ. ಪ್ಯಾನ್ ಇಂಡಿಯಾ ಚಿತ್ರದ ಟೀಸರ್ ಅನ್ನು ಮಹೇಶ್ ಬಾಬು, ಅಮಿತಾಬ್ ಬಚ್ಚನ್, ಮೋಹನ್ ಲಾಲ್, ಸೂರ್ಯ ಮತ್ತು ರಕ್ಷಿತ್ ಶೆಟ್ಟಿ ಏಕಕಾಲದಲ್ಲಿ ಬಿಡುಗಡೆ ಮಾಡಿದರು. ವಿಶೇಷವೆಂದರೆ ಹಿಂದಿ ಜೊತೆಗೆ ತಮಿಳು, ತೆಲುಗು, ಕನ್ನಡ (Kannada) ಮತ್ತು ಮಲಯಾಳಂ (Malayalam) ಭಾಷೆಗಳಲ್ಲಿಯೂ ಟೀಸರ್ ಬಿಡುಗಡೆಯಾಗಿದೆ. ಲಾಂಚ್ ಕಾರ್ಯಕ್ರಮ ಹಾಗೂ ಟೀಸರ್‌ನಲ್ಲಿನ ಅದ್ಧೂರಿತನ ನೋಡಿದರೆ ಬಾಲಿವುಡ್ ಗೆ ಮತ್ತೊಮ್ಮೆ ಧಕ್ಕೆ ಮಾಡಲು ದಕ್ಷಿಣದ ಚಿತ್ರ ಬಂದಿದೆಯೇ ಮುನ್ನೆಲೆಗೆ ಬರುತ್ತಿದೆ ಅನಿಸುವುದು ಗ್ಯಾರಂಟಿ. ಏಕೆಂದರೆ ಇತ್ತೀಚೆಗೆ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ (RRR) ಮತ್ತು ಪ್ರಶಾಂತ್ ನೀಲ್ ಅವರ ಕೆಜಿಎಫ್ 2 (KGF 2) ಚಿತ್ರಗಳು ಈಗಾಗಲೇ ಬಾಲಿವುಡ್ ಅನ್ನು ಬೆಚ್ಚಿಬೀಳಿಸಿವೆ.