Anushka Sharma birthday; ನಟಿಯ ನೆಟ್‌ವರ್ತ್, ಆಸ್ತಿ, ಕಾರುಗಳ ಕಲೆಕ್ಷನ್ ಎಷ್ಟು?
First Published | May 1, 2022, 5:08 PM ISTಅನುಷ್ಕಾ ಶರ್ಮಾ (Anushka Sharma) ಇಂದು ತಮ್ಮ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಅಂದರೆ ಮೇ 1 ರಂದು. ಅವರು 1 ಮೇ 1988 ರಂದು ಯುಪಿಯ ಅಯೋಧ್ಯೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದ ಅನುಷ್ಕಾ ಶರ್ಮಾ ಇಂದು ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. 2008 ರಲ್ಲಿ 'ರಬ್ ನೇ ಬನಾ ದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅನುಷ್ಕಾ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಕ್ರಿಕೆಟಿಗ ಪತಿ ವಿರಾಟ್ ಕೊಹ್ಲಿ ಈ ನಟಿಯನ್ನು ತನ್ನ ಲಕ್ಕಿ ಚಾರ್ಮ್ ಎಂದು ಪರಿಗಣಿಸಿದ್ದಾರೆ. ಅನುಷ್ಕಾ ಶರ್ಮಾ ಜನ್ಮದಿನದ ಸಂದರ್ಭದಲ್ಲಿ ಅವರ ಅತ್ಯಂತ ದುಬಾರಿ ಆಸ್ತಿ, ನಿವ್ವಳ ಮೌಲ್ಯ ಮತ್ತು ಕಾರು ಸಂಗ್ರಹಗಳ ಮಾಹಿತಿ ಇಲ್ಲಿದೆ.