ಕೊನೆಗೂ ಸುಕೇಶ್‌ನಿಂದ ಪಡೆದ ದುಬಾರಿ ಗಿಫ್ಟ್‌ಗಳ ಬಗ್ಗೆ ಬಾಯಿಟ್ಟ Jacqueline Fernandez

Published : May 01, 2022, 05:02 PM IST

ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರು ಕೆಲವು ಸಮಯಗಳಿಂದ ವಿವಾದಗಳಿಂದ ಸುತ್ತುವರೆದಿದ್ದಾರೆ. ಈ ಹಿಂದೆ ಆಕೆ ಸುಕೇಶ್ ಚಂದ್ರಶೇಖರ್ ( Sukesh Chandrashekar) ಜೊತೆಗಿನ ಸಂಬಂಧಕ್ಕಾಗಿ ಮುಖ್ಯಾಂಶಗಳಲ್ಲಿದ್ದರು. ಇದೀಗ ಸುಲಿಗೆ ಪ್ರಕರಣದಲ್ಲಿ ಇಡಿ ಆತನಿಗೆ ಕುಣಿಕೆ ಬಿಗಿಗೊಳಿಸಿದೆ. ಸುಕೇಶ್ ಚಂದ್ರಶೇಖರ್ ಸುಲಿಗೆ ಹಣದಿಂದ ನಟಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಇದಲ್ಲದೇ ಕುಟುಂಬಕ್ಕೆ ಹಣವನ್ನೂ ನೀಡಿದ್ದರು. ಇದರ ಬಗ್ಗೆ ಕೊನೆಗೂ ನಟಿ ಬಾಯಿ ಬಿಟ್ಟಿದ್ದಾರೆ.

PREV
18
ಕೊನೆಗೂ ಸುಕೇಶ್‌ನಿಂದ ಪಡೆದ ದುಬಾರಿ ಗಿಫ್ಟ್‌ಗಳ ಬಗ್ಗೆ ಬಾಯಿಟ್ಟ Jacqueline Fernandez

200 ಕೋಟಿ (ಜಾರಿ ನಿರ್ದೇಶನಾಲಯ) ಸುಲಿಗೆ ಪ್ರಕರಣದ ಕಾನ್‌ಮನ್ ಸುಕೇಶ್ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದವರ ಪ್ರಕಾರ, ಕಳೆದ ವರ್ಷದ ಜೂನ್‌ನಲ್ಲಿ ಸುಕೇಶ್ ಮತ್ತು ಜಾಕ್ವೆಲಿನ್‌ಗೆ ಪರಿಚಯವಾಯಿತು.
 

28

'ಸುಕೇಶ್ ಅವರ ಚಿಕ್ಕಪ್ಪನ ನಿಧನದ ಬಗ್ಗೆ ತುಂಬಾ ದುಃಖ ಮತ್ತು ಖಿನ್ನತೆಗೆ ಒಳಗಾಗಿದ್ದರು ಮತ್ತು ಚೆನ್ನೈನಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನನ್ನನ್ನು ಕೇಳಿದರು' ಎಂದು ಇಂಡಿಯಾ ಟುಡೇ ವರದಿಯ ಪ್ರಕಾರ, ಜಾಕ್ವೆಲಿನ್ ಇಡಿಗೆ ತಿಳಿಸಿದ್ದಾರೆ.

38

'ಅವರು ನನ್ನನ್ನು ಮುಂಬೈನಿಂದ ಚೆನ್ನೈಗೆ ಖಾಸಗಿ ವಿಮಾನದಲ್ಲಿ ಕರೆಸಿಕೊಂಡರು. ಅವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ನೋಡುವ ಬದಲು ಸಹಾಯಕರನ್ನು ಕಳುಹಿಸಿದರು. ನಾನು ಹಯಾತ್ ಹೋಟೆಲ್‌ಗೆ ಬಂದ ಒಂದು ಗಂಟೆಯ ನಂತರ ಶೇಖರ್ ಬಂದರು. ನಾವು ಊಟ ಮಾಡಿದೆವು' ಎಂದು ನಟಿ ಹೇಳಿದರು. 

48
Sukesh Chandrasekhar

'ಡೈನಿಂಗ್‌ ಹಾಲ್‌ನಲ್ಲಿ ಊಟ ಮುಗಿಸಿ ಸೂಟ್‌ನ ಲಿವಿಂಗ್ ರೂಮ್‌ನಲ್ಲಿ ಸಂಭಾಷಣೆ ನಡೆಸಿದ್ದೇವು. ಅವರು ಮರುದಿನ ಹೋಟೆಲ್‌ಗೆ ಹಿಂತಿರುಗಿದರು ಮತ್ತು ಉಪಹಾರಕ್ಕೆ ಆರ್ಡರ್‌ ಮಾಡಿದರು. ಅವರು ಉಪಹಾರದ ನಂತರ ನನ್ನನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್‌ ಮಾಡಿದರು. ಖಾಸಗಿ ವಿಮಾನದಲ್ಲಿ ನಾನು ಮತ್ತೆ ಮುಂಬೈಗೆ ಹಾರಿದೆ' ಎಂದು ಜಾಕ್ವೆಲಿನ್ ಫರ್ನಾಂಡೀಸ್ ಹೇಳಿಕೆ ನೀಡಿದ್ದಾರೆ.

58

ಒಂದು ವಾರದ ನಂತರ ಎರಡನೇ ಬಾರಿಗೆ ಅವರನ್ನು ಭೇಟಿಯಾಗಿದ್ದಾಗಿ ಜಾಕ್ವೆಲಿನ್ ಬಹಿರಂಗಪಡಿಸಿದರು. ಅವರು ಫ್ರೆಂಡ್‌ ಜೊತೆ  ಚೆನ್ನೈಗೆ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡಿದರು ಮತ್ತು ಅದೇ ಜೆಟ್‌ನಲ್ಲಿ ಹಿಂತಿರುಗಿದರು.

68

ಮತ್ತು ತಾನು ಎರಡು ಬಾರಿ ಕೇರಳಕ್ಕೆ ಭೇಟಿ ನೀಡಿದ್ದೆನೆಂದೂ, ಸುಕೇಶ್‌ ತನ್ನ ಪ್ರಯಾಣವನ್ನು  ಪ್ಲಾನ್‌ ಮಾಡಿದ್ದಾಗಿಯೂ ಆಕೆ ಒಪ್ಪಿಕೊಂಡಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಹೆಲಿಕಾಪ್ಟರ್‌ನಲ್ಲಿ ತಲುಪಿದರು ಎಂದರಿರುವ ಜಾಕ್ವೆಲಿನ್ ಪ್ರಕಾರ ಎರಡೂ ಪ್ರಯಾಣಗಳು ವೈಯಕ್ತಿಕವಾಗಿದ್ದವು.


 

 

78

ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಯಾರು ಹೊಂದಿದ್ದಾರೆಂದು ಆಕೆಗೆ ತಿಳಿದಿದೆಯೇ ಎಂದು ಪ್ರಶ್ನಿಸಿದಾಗ, ಜಾಕ್ವೆಲಿನ್ ಅವರು ಸುಕೇಶ್ ತನ್ನದು ಎಂದು  ಭರವಸೆ ನೀಡಿದರು ಎಂದು ನಟಿ ಹೇಳಿದರು.  ಸುಕೇಶ್ ತನಗೆ ಮಿನಿ ಕೂಪರ್ ನೀಡಿದ್ದರು. ಅದನ್ನು ಸ್ವೀಕರಿಸಲು ಇಷ್ಟಪಡದ ಕಾರಣ ಅದನ್ನು ಹಿಂದಿರುಗಿಸಿದ್ದೇನೆ ಎಂದು ನಟಿ ಹೇಳಿದರು.

88

sukesh chandrasekhar jacqueline

ಇಂಡಿಯಾ ಟುಡೇ ವರದಿಯ ಪ್ರಕಾರ, ಗುಸ್ಸಿ ಮತ್ತು ಶನೆಲ್‌ ಬ್ರ್ಯಾಂಡ್‌ನ  ಮೂರು ದುಬಾರಿ ಬ್ಯಾಗ್‌ಗಳು, ಎರಡು ಗುಸ್ಸಿ ಔಟ್‌ಫಿಟ್‌ಗಳು, ಒಂದು ಜೋಡಿ ಲೂಯಿ ವಿಟಾನ್ ಶೂಗಳು ಮತ್ತು ಎರಡು ಜೋಡಿ ವಜ್ರದ ಕಿವಿಯೋಲೆಗಳನ್ನು ಪಡೆದಿರುವುದನ್ನು ಜಾಕ್ವೆಲಿನ್ ಒಪ್ಪಿಕೊಂಡಿದ್ದಾರೆ.

Read more Photos on
click me!

Recommended Stories