ಫಿಫಾ ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡುವ ಅವಕಾಶ ಪಡೆದ ನೋರಾ ಫತೇಹಿ

First Published Oct 7, 2022, 4:05 PM IST

ಈ ದಿನಗಳಲ್ಲಿ ಬಾಲಿವುಡ್‌ ನಟಿ ನೋರಾ ಫತೇಹಿ (Nora Fatehi)ಸುದ್ದಿಯಲ್ಲಿದ್ದಾರೆ. ಸದ್ಯ ಟಿವಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿರುವ ನೋರಾ ಫತೇಹಿ  ಲೈಫ್‌ನ ಬೆಸ್ಟ್ ಅವಕಾಶಪಡೆದಿದ್ದಾರೆ. ನಟಿ ಈ ವರ್ಷದ ಡಿಸೆಂಬರ್‌ನಲ್ಲಿ ಫಿಫಾ ವಿಶ್ವಕಪ್‌ನಲ್ಲಿ (FIFA World Cup 2022) ಪ್ರದರ್ಶನ ನೀಡಲಿದ್ದಾರೆ.

ನೋರಾ ಪತೇಹಿ ಡಿಸೆಂಬರ್‌ನಲ್ಲಿ ಫಿಫಾ ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡುವ ಅವಕಾಶ ಪಡೆಯುವ ಮೂಲಕ  ಜೆನ್ನಿಫರ್ ಲೋಪೆಜ್ ಮತ್ತು ಶಕೀರಾ ಸಾಲಿಗೆ ಸೇರಿದ್ದಾರೆ. ಈ ಈವೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
 

ಮೂಲಗಳ ಪ್ರಕಾರ, ವಿಶ್ವದ ಅತ್ಯಂತ ಫೇಮಸ್‌ ರೆಕಾರ್ಡ್ ಕಂಪನಿಗಳಲ್ಲಿ ಒಂದಾದ ರೆಡ್‌ಒನ್ ನೋರಾ ಅವರ ಹಾಡನ್ನು ರಚಿಸಲಿದೆ. ಷಕೀರಾ ಅವರ ವಾಕಾ ವಾಕಾ ಮತ್ತು ಲಾ ಲಾ ಲಾ ನಂತಹ ಫಿಫಾ ಗೀತೆಗಳಲ್ಲಿ ರೆಕಾರ್ಡ್‌ ಲೇಬಲ್ ಕೆಲಸ ಮಾಡಿದೆ.

ನೋರಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ  ಹಾಡಿನ ಝಲಕ್‌ಗಳನ್ನು ಹಂಚಿಕೊಂಡಿದ್ದಾರೆ. 'ಈ ಬಾರಿ @fifaworldcup ಗಾಗಿ, ವೈವಿಧ್ಯತೆಯ ಸ್ಪರ್ಶದೊಂದಿಗೆ ಅಧಿಕೃತ ವಿಶ್ವಕಪ್ ಗೀತೆ ಲೈಟ್ ದಿ ಸ್ಕೈ...' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಫಿಫಾ ಗೀತೆಯಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಫಿಫಾ ವಿಶ್ವಕಪ್‌ನ ಮುಕ್ತಾಯ ಸಮಾರಂಭದಲ್ಲಿ ಸಹ ನೋರಾ ಪ್ರದರ್ಶನ ನೀಡಲಿದ್ದಾರೆ . ಹಾಗೆಯೇ FIFA ವಿಶ್ವಕಪ್ ಗೀತೆಯನ್ನು ಹಿಂದಿಯಲ್ಲೂ ಹಾಡಲಿದ್ದಾರೆ.

ನೋರಾ ಫತೇಹಿ ಅವರ ಡ್ಯಾನ್ಸ್ ಜೊತೆಗೆ ಅವರ ಫ್ಯಾಶನ್ ಸೆನ್ಸ್‌ ಸಹ ಸಾಕಷ್ಟು ಫೇಮಸ್‌. ದಿವಾ ತನ್ನ Instagram ಖಾತೆಯಲ್ಲಿ ಬೆಸ್ಟ್‌ ಔಟ್‌ಫಿಟ್‌ಗಳ ಸಂಗ್ರಹದ  ಆಯ್ದ ಭಾಗಗಳನ್ನು ಆಗಾಗ ಪೋಸ್ಟ್ ಮಾತ್ತಿರುತ್ತಾರೆ.

ನಟಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗೆ ಹೊಸ ಡ್ರೆಸ್ ಐಡಿಯಾಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ.

ನೋರಾ ಫತೇಹಿ ಸಿಲ್ವರ್ ಸೀಕ್ವಿನ್ಡ್ ಹೈ-ಸ್ಲಿಟ್ ಡ್ರೆಸ್‌ ಈ ಲುಕ್‌ ಬೆರಗುಗೊಳಿಸುತ್ತದೆ. ಫ್ಯಾಶನ್ ಡಿಸೈನರ್ ಯೂಸೆಫ್ ಅಲ್ ಜಾಸ್ಮಿ ಅವರ ವಾರ್ಡ್‌ರೋಬ್‌ನಿಂದ ಕಪಾಟಿನಿಂದ ಸೀಕ್ವಿನ್ಡ್ ಗೌನ್ ಅನ್ನು ಆರಿಸಿಕೊಂಡರು. 

click me!