ಸಲ್ಮಾನ್ ಖಾನ್ ಇದ್ದರೂ ಮೊದಲ ದಿನವೇ ನೆಲ ಕಚ್ಚಿದ ಚಿರಂಜೀವಿಯ ಗಾಡ್‌ಫಾದರ್!

Published : Oct 06, 2022, 04:57 PM IST

ಸೌತ್ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಬಹು ನಿರೀಕ್ಷಿತ ಚಿತ್ರ ಗಾಡ್ ಫಾದರ್ (Godfather) ಅಕ್ಟೋಬರ್ 5 ರಂದು  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರವನ್ನು ಜೋರಾಗಿ ಮಾಡಲಾಗಿದೆ. ಅಷ್ಟೇ ಅಲ್ಲ ಚಿತ್ರದ ಪ್ರಚಾರಕ್ಕಾಗಿ ಚಿರಂಜೀವಿ ಮುಂಬೈಗೆ ಬಂದಿದ್ದರು. ಆದರೆ ಇದೆಲ್ಲವೂ ಪ್ರಯೋಜನವಾಗಲಿಲ್ಲ. ಚಿತ್ರದ ಮೊದಲ ದಿನದ ಕಲೆಕ್ಷನ್ ಅಂಕಿಅಂಶ ಹೊರಬಿದ್ದಿದ್ದು, ತುಂಬಾ ನಿರಾಸೆಯಾಗಿದೆ. 

PREV
17
 ಸಲ್ಮಾನ್ ಖಾನ್ ಇದ್ದರೂ ಮೊದಲ ದಿನವೇ ನೆಲ ಕಚ್ಚಿದ ಚಿರಂಜೀವಿಯ ಗಾಡ್‌ಫಾದರ್!

ಸುಮಾರು 90 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಕೇವಲ 18 ಕೋಟಿ ಗಳಿಸಿದೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರದ ಸ್ಥಿತಿ ಇನ್ನೂ ಕೆಟ್ಟದಾಗಿದೆ. ಹಿಂದಿಯಲ್ಲಿ ಚಿತ್ರ ಗಳಿಸಿದ್ದು ಕೇವಲ 80 ಲಕ್ಷ ರೂ. 
 

27

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರನ್ನು ತೆಗೆದುಕೊಂಡು ಸಿನಿಮಾ ಹಿಟ್ ಮಾಡಲು ಮೈಂಡ್ ಗೇಮ್ ಆಡಿದ್ದು ಕೂಡ ಗಳಿಕೆಗೆ ನೆರವಾಗಲಿಲ್ಲ. ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿದ್ದಾರೆ.

37

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಲನಚಿತ್ರಗಳನ್ನು ಹಿಟ್ ಮಾಡಲು ದಕ್ಷಿಣದ ತಾರೆಯರನ್ನು ಚಿತ್ರಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಅದೇ ರೀತಿಯ ಟ್ರೆಂಡ್‌ ಅನ್ನು ದಕ್ಷಿಣದ ಸಿನಿಮಾಗಳಲ್ಲಿ ಸಹ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಂತೆ ಸಲ್ಮಾನ್ ಖಾನ್ ಸೌತ್ ಸ್ಟಾರ್ ಚಿರಂಜೀವಿ ಅವರ ಚಿತ್ರ ಗಾಡ್ ಫಾದರ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.

47

ಸಲ್ಮಾನ್  ಖಾನ್‌  ಮತ್ತು  ಚಿರಂಜೀವಿ ಜೊತೆಯಾಗಿ ಗಾಡ್‌ ಫಾದರ್‌ ಚಿತ್ರದ ಪ್ರಚಾರ ಮಾಡಿದ್ದರು. ಆದರೆ, ಇದು ಚಿತ್ರಕ್ಕೆ ಸಹಾಯ ಮಾಡಲಿಲ್ಲ ಮತ್ತು ಗಾಡ್‌ಫಾದರ್ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನವೇ ಶಾಕಿಂಗ್‌ ಆಗಿದೆ.

57

 ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು. ಆದರೆ, ವರದಿಗಳ ಪ್ರಕಾರ, ಆಚಾರ್ಯ ಮೊದಲ ದಿನ 43 ಕೋಟಿ ಗಳಿಸಿತ್ತು. 

67

ಹಿಂದಿ ಬೆಲ್ಟ್‌ನಲ್ಲೂ ಗಾಡ್‌ಫಾದರ್‌ನ ಮ್ಯಾಜಿಕ್ ಕೆಲಸ ಮಾಡಲಿಲ್ಲ. ಹಿಂದಿ ಚಿತ್ರ ಕೇವಲ 80 ಲಕ್ಷ ರೂಪಾಯಿ ವ್ಯವಹಾರ ಮಾಡಿತು. ಗಾಡ್‌ಫಾದರ್ ಚಿತ್ರವನ್ನು ರಾಮ್ ಚರಣ್, ಎನ್‌ವಿ ಪ್ರಸಾದ್ ಮತ್ತು ಆರ್‌ಬಿ ಚೋಪ್ರಾ ಅವರು ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ.

77

ಈ ಚಿತ್ರವು 2019 ರ ಮಲಯಾಳಂ ಚಲನಚಿತ್ರ ಲೂಸಿಫರ್‌ನ ರೀಮೇಕ್. 90 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರದಲ್ಲಿ ಕೆಲಸ ಮಾಡಲು ಚಿರಂಜೀವಿ 45 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories