ಪವನ್ ಒಡೆಯರ್ ಹಿಂದಿ ಚಿತ್ರಕ್ಕೆ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಾಯಕಿ!

Published : Oct 06, 2022, 05:42 PM IST

ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡದ ನಿರ್ದೇಶಕ ಪವನ್ ಒಡೆಯರ್. ವಿಜಯದಶಮಿ ದಿನ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ...

PREV
17
ಪವನ್ ಒಡೆಯರ್ ಹಿಂದಿ ಚಿತ್ರಕ್ಕೆ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಾಯಕಿ!

ಕನ್ನಡ ಚಿತ್ರರಂಗದ ಡಿಫರೆಂಟ್ ನಿರ್ದೇಶಕ ಕಮ್ ನಿರ್ಮಾಪಕ ಪವನ್ ಒಡೆಯರ್ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರಕ್ಕೆ ಬ್ರಿಟಿಷ್ ನಟಿ ಗೀತಾ ಬಸ್ರಾ ನಾಯಕಿ.

27

ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ನೋಟರಿ ಎಂದು ಟೈಟಲ್ ನೀಡಲಾಗಿದೆ. ಕಾಶ್ ಎಂಟರ್ಟೈನ್ಮೆಂಟ್, ಒಡೆಯರ್‌ ಮೂವೀಸ್‌ ಮತ್ತು ಬೌಂಡ್‌ ಲೆಸ್‌ ಮೀಡಿಯಾ ಸಹಹೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

37

ಪರಂಬ್ರತಾ ಚಟ್ಟೋಪಾಧ್ಯಾಯ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಟಿಸುತ್ತಿದ್ದಾರೆ. 

47

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿಜಯದಶಮಿಯ ದಿನದಂದು ಸಿನಿಮಾ ಸೆಟ್ಟೇರಿದೆ. ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ ಎಂದ ಪವನ್ ಹೇಳಿದ್ದಾರೆ.

57

ಭೋಪಾಲ್‌ನಲ್ಲಿ 20 ದಿನಗಳ ಚಿತ್ರೀಕರಣ ನಂತರ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಬ್ರಿಟಿಷ್ ನಟಿ ಗೀತಾ ಬಸ್ರಾ ಜೊತೆ ಹಾಗೂ ಬಾಲಿವುಡ್‌ನಲ್ಲಿ ನಮ್ಮ ಕನ್ನಡಿಗ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಿರುವುದು ನಮ್ಮ ಹೆಮ್ಮೆ.

67

ಚಿತ್ರದ ನಾಯಕ ಎಂದೂ ಕೂಡ ಸುಳ್ಳು ಹೇಳುವುದಿಲ್ಲ. ಇದು ಅವನ ಜೀವನದ ಸಿದ್ದಾಂತವಾಗಿರುತ್ತೆ. ಆದ್ರೆ ಕೆಲಸ ಮಾಡುವ ಕ್ಷೇತ್ರ ನಿತ್ಯ ಒಂದಿಲ್ಲೊಂದು ಸುಳ್ಳು ಹೇಳುವಂತ ಪರಿಸ್ಥಿತಿಯನ್ನು ತಂದೊಡ್ಡುತ್ತಿರುತ್ತೆ. 

77

‘ನೋಟರಿ’ ಚಿತ್ರಕ್ಕೆ ಕಥೆ ಬರೆದು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ಪವನ್ ಒಡೆಯರ್ ಮತ್ತು ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಚಿತ್ರಕಥೆ ಚಿತ್ರಕ್ಕಿದೆ. ವೈದಿ.ಎಸ್ ಕ್ಯಾಮೆರಾ ನಿರ್ದೇಶನ, ರೋಹಿತ್ ಕುಲಕರ್ಣಿ, ಮೌಸಿನ್ ಜಾವೇದ್ ಸಂಗೀತ  ನಿರ್ದೇಶನ ಚಿತ್ರಕ್ಕಿರಲಿದೆ.

Read more Photos on
click me!

Recommended Stories