ಸಮೋಸಾ ಮಾರುವವನ ಮಗಳು Neha Kakkar ಬಾಲಿವುಡ್‌ನ ಟಾಪ್‌ ಸಿಂಗರ್‌ ಆಗಿದ್ದು ಹೇಗೆ

Published : Jun 06, 2022, 06:54 PM IST

ಬಾಲಿವುಡ್‌ನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರಾದ ನೇಹಾ ಕಕ್ಕರ್ (Neha Kakkar) ಅವರಿಗೆ 34 ವರ್ಷ ತುಂಬಿದೆ. ಜೂನ್ 6,1988 ರಂದು ಉತ್ತರಾಖಂಡದ ಋಷಿಕೇಶದಲ್ಲಿ ಜನಿಸಿದ ನೇಹಾ ಕಕ್ಕರ್ ಈ ಹಂತ ಇಲ್ಲಿಗೆ ತಲುಪಲು ಅವರು ಸಾಕಷ್ಟು ಕಷ್ಟಪಡಬೇಕಾಯಿತು. ಹೆಂಡತಿ ಮಕ್ಕಳನ್ನು ಸಾಕಲು ತಂದೆ ಸಮೋಸ ಮಾರುತ್ತಿದ್ದ ಕಾಲವೊಂದಿತ್ತು. ಅಷ್ಟೇ ಅಲ್ಲ, ಬಡತನದಿಂದಾಗಿ ನೇಹಾ ಬಾಲ್ಯದಲ್ಲಿ ತನ್ನ ಸಹೋದರಿ ಮತ್ತು ಸಹೋದರನೊಂದಿಗೆ ಭಜನೆ ಹಾಡುತ್ತಿದ್ದರು. ನೇಹಾ ತನ್ನ ಜೀವನದ ಆರಂಭದಲ್ಲಿ ಸಾಕಷ್ಟು ನಿರಾಕರಣೆಗಳನ್ನು ಎದುರಿಸಬೇಕಾಗಿತ್ತು. ಆದರೆ ಅವರು ಧೈರ್ಯವನ್ನು ಕಳೆದುಕೊಳ್ಳದೆ ದೃಢವಾಗಿ ನಿಂತರು. ಅವರ ಅದೃಷ್ಟ  ತಿರುಗಿತು, ನಂತರ  ಹಿಂತಿರುಗಿ ನೋಡಲೇ ಇಲ್ಲ. ಸ್ವತಃ  ನೇಹಾ ಕಕ್ಕರ್ ಅವರೇ ಈ ಬಗ್ಗೆ  ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  

PREV
17
  ಸಮೋಸಾ ಮಾರುವವನ ಮಗಳು  Neha Kakkar ಬಾಲಿವುಡ್‌ನ ಟಾಪ್‌ ಸಿಂಗರ್‌ ಆಗಿದ್ದು  ಹೇಗೆ

ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್‌ನ ಎರಡನೇ ಸೀಸನ್‌ನಲ್ಲಿ ನೇಹಾ ಕಕ್ಕರ್ ಭಾಗವಹಿಸಿದ್ದರು. ಆದರೆ, ಫೈನಲ್ ತಲುಪುವ ಮುನ್ನವೇ ಆಕೆ ಹೊರಬಿದ್ದಿದ್ದರು. ಇದರ ನಂತರ, 2008 ರಲ್ಲಿ, ಅವರು ತಮ್ಮ ಸಂಗೀತ ಆಲ್ಬಂ ಅನ್ನು ಬಿಡುಗಡೆ ಮಾಡಿದರು.


 

27

ನಾನು ಚಿಕ್ಕವನಿದ್ದಾಗ, ನಮ್ಮ ಕುಟುಂಬದ ಸ್ಥಿತಿ ಸರಿಯಾಗಿರಲಿಲ್ಲ. ದೀದಿ ಸೋನು ಓದಿದ ಶಾಲೆಯಲ್ಲಿಯೇ ಅಪ್ಪ ಸಮೋಸ ಮಾರುತ್ತಿದ್ದರು. ಒಮ್ಮೊಮ್ಮೆ ಜೊತೆಗಿದ್ದ ಮಕ್ಕಳು ನಮ್ಮನ್ನು ಚುಡಾಯಿಸಿ ಕಿರುಕುಳ ನೀಡುತ್ತಿದ್ದರು ಎಂದು ತನ್ನ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ನೇಹಾ ಕಕ್ಕರ್ ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ  ಈ ಬಗ್ಗೆ ಹೇಳಿದ್ದರು. 

37

ತಂದೆ ಕಷ್ಟಪಟ್ಟು ಕೆಲಸ ಮಾಡುವುದನ್ನು ನೋಡಿ ಸಹೋದರ ಸಹೋದರಿಯರು ದೇವರ ಜಾಗರತೆಯಲ್ಲಿ ಹಾಡಲು ಪ್ರಾರಂಭಿಸಿದರು, ನಂತರ ನಾನು ಸಹ ಅದರಲ್ಲಿ ಭಾಗಿಯಾದೆ. ಸಂಜೆ 7ರಿಂದ ಬೆಳಗ್ಗೆ 5ರವರೆಗೆ ಹಾಡುತ್ತಿದ್ದೆವು. ನಾನು ಜಾಗರತೆಯಲ್ಲಿ ಹಾಡಲು ಪ್ರಾರಂಭಿಸಿದಾಗ ನನಗೆ 4 ವರ್ಷ ಎಂದು ನೇಹಾ ಹೇಳಿದರು.

47

ನೇಹಾಗೆ ಜನ್ಮ ನೀಡಲು ಪೋಷಕರು ಇಷ್ಟವಿರಲಿಲ್ಲ ಎಂದು ನೇಹಾ ಕಕ್ಕರ್ ಅವರ ಸಹೋದರ ಟೋನಿ ಒಮ್ಮೆ ಹೇಳಿದ್ದರು, ಇದಕ್ಕೆ ಕಾರಣ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ನಂತರ ತಾಯಿ ನೇಹಾಗೆ ಜನ್ಮ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.


 

57

ನೇಹಾ ಕಕ್ಕರ್ ಅವರು 2008 ರ ಸಂಗೀತ ಆಲ್ಬಂ ನೇಹಾ ದಿ ರಾಕ್ ಸ್ಟಾರ್‌ನಿಂದ ಮನ್ನಣೆ ಪಡೆದರು. ಆಲ್ಬಮ್ ಅನ್ನು ಮೀಟ್ ಬ್ರದರ್ಸ್ ಸಂಯೋಜಿಸಿದ್ದಾರೆ. ಇದಾದ ನಂತರ ನೇಹಾ ನಿಧಾನವಾಗಿ ಜನಪ್ರಿಯವಾಗತೊಡಗಿದರು. 

67

ನೇಹಾ ಅವರ ಮೊದಲ ಹಿಟ್ ಹಾಡು ಕಾಕ್‌ಟೈಲ್ ಚಿತ್ರದ ಸೆಕೆಂಡ್ ಹ್ಯಾಂಡ್ ಜವಾನಿ. ಯಾರಿಯಾನ್ ಚಿತ್ರದ ಆಜ್ ಬ್ಲೂ ಹೈ ಪಾನಿ-ಪಾನಿ... ಹಾಡಿನ ಮೂಲಕ ನೇಹಾ ಕಕ್ಕರ್ ಬಾಲಿವುಡ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದರು. ಅವರು ಹಾಡಿರುವ ಈ ಚಿತ್ರದ ಹಾಡುಗಳು ಬಹಳ ಫೇಮಸ್ ಆದವು. ಇದಾದ ನಂತರ ನೇಹಾ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ.


 

77

ಲಾಕ್‌ಡೌನ್ ಸಮಯದಲ್ಲಿ ನೇಹಾ ಕಕ್ಕರ್ ತನ್ನ ಗೆಳೆಯ ರೋಹನ್‌ಪ್ರೀತ್ ಸಿಂಗ್ ಅವರನ್ನು ಅಕ್ಟೋಬರ್ 2020 ರಲ್ಲಿ ವಿವಾಹವಾದರು. ದೆಹಲಿಯ ಗುರುದ್ವಾರದಲ್ಲಿ ದಂಪತಿ ವಿವಾಹವಾಗಿದ್ದು, ಚಂಡೀಗಢದಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು.
 

Read more Photos on
click me!

Recommended Stories