ಸಾವಿಗೂ ಸ್ವಲ್ಪ ಸಮಯದ ಮೊದಲು Sunil Dutt ತಮಗೆ ಬರೆದ ಪತ್ರ ನೋಡಿ ಶಾಕ್‌ ಆದ Paresh Rawal

First Published | Jun 6, 2022, 6:37 PM IST

ಇಂದು ಬಾಲಿವುಡ್ ನಟ ಮತ್ತು ರಾಜಕಾರಣಿ ಸುನೀಲ್ ದತ್ (Sunil Dutt)ಅವರ ಹುಟ್ಟುಹಬ್ಬ. ಅವರು 6 ಜೂನ್ 1929 ರಂದು ಪಂಜಾಬ್ ರಾಜ್ಯದ ಝೇಲಂ ಜಿಲ್ಲೆಯ ಖುರ್ದಿ ಎಂಬ ಹಳ್ಳಿಯಲ್ಲಿ ಜನಿಸಿದರು. ಈ ಸ್ಥಳ ಈಗ ಪಾಕಿಸ್ತಾನದಲ್ಲಿದೆ. 1947 ರ ವಿಭಜನೆಯ ಸಮಯದಲ್ಲಿ ಅವರ ಕುಟುಂಬವು ಭಾರತಕ್ಕೆ ವಲಸೆ ಬಂದಿತು. ಸುನಿಲ್ ಓದು ಮುಗಿಸಿದ್ದ ನಂತರ ಮುಂಬೈ ಬಂದ ಸುನೀಲ್‌ ದತ್‌ ಅವರು  ನಗರದಲ್ಲಿ ಜೀವನ ನಡೆಸಲು ಕಂಡಕ್ಟರ್ ಕೆಲಸವನ್ನೂ ಮಾಡಿದರು. ಸುನೀತ್ ದತ್ ಸಾವಿಗೂ ಮುನ್ನ ಪರೇಶ್ ರಾವಲ್ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದರು. ಆ ಪತ್ರದಲ್ಲಿ ಏನು ಬರೆದಿದೆ ನೋಡಿ. 

ಸಂಜಯ್ ದತ್ ಅವರ ತಂದೆಯ ಜೀವನವು ಅನೇಕ ಹೋರಾಟಗಳಲ್ಲಿ ಕಳೆದುಹೋಯಿತು, ಸಂಜು ಪ್ರಕರಣವು ಅವರನ್ನು ಬಹಳ ಘಾಸಿಗೊಳಿಸಿತು, ಸುನೀಲ್‌ ದತ್ ಹೃದಯಾಘಾತದಿಂದ 25 ಮೇ 2005 ರಂದು ನಿಧನರಾದರು.

ಹಿರಿಯ ನಟ, ನಿರ್ದೇಶಕರು ತಮ್ಮ ಸಾವಿಗೂ ಮುನ್ನ ನಟ ಪರೇಶ್ ರಾವಲ್ ಅವರಿಗೆ ಪತ್ರ ಬರೆದಿದ್ದಾರೆ. ಆಗ ಈ ಪತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.

Tap to resize

ನಟ ಸುನೀಲ್ ದತ್ ನಿಧನರಾದ ಸುಮಾರು 8 ವರ್ಷಗಳ ನಂತರ ಬಿಡುಗಡೆಯಾದ ‘ಸಂಜು’ ಸಿನಿಮಾದಲ್ಲಿ ಪರೇಶ್ ರಾವಲ್ ಸಂಜಯ್ ದತ್ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಬಿಡುಗಡೆಯ ನಂತರ ಪರೇಶ್ ರಾವಲ್ ಸುನೀಲ್ ದತ್ ಅವರ ಈ ಪತ್ರದ ಬಗ್ಗೆ  ಬಹಿರಂಗಪಡಿಸಿದರು.

ತಮ್ಮ ಹುಟ್ಟುಹಬ್ಬದ 5 ದಿನಗಳ ಮೊದಲು ಪರೇಶ್ ರಾವಲ್ ಅವರಿಗೆ ಸುನಿಲ್ ದತ್  ಶುಭ ಹಾರೈಸಿದ್ದರು. ಆದರೆ, ಈ ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದಾರೆ.

ಮೇ 25 ರಂದು ಸುನೀಲ್ ದತ್ ಸಾವಿನ ಸುದ್ದಿ ತಿಳಿದಾಗ ಅವರು ಪತ್ನಿ ಸ್ವರೂಪ್ ಸಂಪತ್ ಅವರಿಗೆ ಕರೆ ಮಾಡಿ ಪರೇಶ್ ರಾವಲ್ ತಡವಾಗಿ ಬರುವುದಾಗಿ ತಿಳಿಸಿದ್ದರು ಎಂದು ಪರೇಶ್ ಹೇಳಿದ್ದರು.
 

ಪರೇಶ್, 'ನಾನು ತಡವಾಗಿ ಬರುತ್ತೇನೆ ಎಂದು ನಾನು ಸ್ವರೂಪ್ ಸಂಪತ್‌ಗೆ ಹೇಳಿದಾಗ ಸುನೀಲ್ ದತ್‌ ಅವರ  ಪತ್ರವಿದೆ ಎಂದು ಹೇಳಿದ್ದಳು ಮತ್ತು ನಾನು ಪತ್ರದಲ್ಲಿ ಏನಿದೆ ಎಂದು ಕೇಳಿದೆ, ಅದರಲ್ಲಿ ಸುನೀಲ್‌ ದತ್‌ ಅವರು ಪರೇಶ್‌ ಅವರ   ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ ಎಂದು ತಿಳಿಸಿದಳು.

ಆಗ ನನ್ನ ಹುಟ್ಟುಹಬ್ಬಕ್ಕೆ 5 ದಿನಗಳು ಉಳಿದಿತ್ತು. ಸ್ವರೂಪ್ ಸಂಪತ್ ನನಗೆ ಆ ಪತ್ರವನ್ನು ಓದಿದ್ದರು, ಆಗ ನನಗೆ ತುಂಬಾ ಆಶ್ಚರ್ಯವಾಯಿತು. ನನ್ನ ಹುಟ್ಟುಹಬ್ಬದ ಮುಂಚೆಯೇ ಸುನಿತ್ ದತ್ ನನಗೆ ಹುಟ್ಟುಹಬ್ಬದ ಪತ್ರವನ್ನು ಏಕೆ ಕಳುಹಿಸಿದ್ದಾರೆ? ಎಂದು ಪರೇಶ್‌ ಹೇಳಿದರು.

ಆ ಪತ್ರವನ್ನು ಸುನೀಲ್‌ ಅವರು ಆ ಸಮಯದಲ್ಲಿ ಅವರು ಸಂಸದರಾಗಿದ್ದಾಗ ಅವರ ಲೆಟರ್‌ಹೆಡ್‌ನಲ್ಲಿ ಬರೆಯಲಾಗಿದೆ. 'ಆತ್ಮೀಯ ಪರೇಶ್ ಜೀ, ನಿಮ್ಮ ಜನ್ಮದಿನವು ಮೇ 30 ರಂದು, ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶುಭವಾಗಲಿ ಎಂದು ನಾನು ಬಯಸುತ್ತೇನೆ. ದೇವರು ನಿಮಗೆ ಮತ್ತು ನಿಮ್ಮ ಕುಟುಂಬದ ಮೇಲೆ ಆಶೀರ್ವಾದವನ್ನು ನೀಡಲಿ' ಎಂದು ಸುನೀಲ್‌ದತ್‌ ಅವರ ಪತ್ರದಲ್ಲಿ ಬರೆದಿದ್ದರು.

Latest Videos

click me!