ಕೆರಿಯರ್ ಶುರುವಿನಲ್ಲೇ ಆಗಿದ್ದ ಎಂಗೇಜ್‌ಮೆಂಟ್ ಮುರಿದುಹೋದರೂ ಬಳಿಕ, ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಬ್ಯುಸಿ ಆಗಿ ಇಂದು ಭಾರತದ ಟಾಪ್ ಒನ್ ನಟಿಯಾಗಿ ಬೆಳೆದುನಿಂತು ಮಾದರಿ ಎನ್ನಿಸಿದ್ದಾರೆ ರಶ್ಮಿಕಾ ಮಂದಣ್ಣ. ಈ ಸ್ಟೋರಿ ನೋಡಿ..
ವಿಜಯ್ ಅನ್ನೋ ಹೆಸರಿನ ಹಿಂದೆ ಬಿದ್ದಿದ್ಯಾಕೆ ನಟಿ ರಶ್ಮಿಕಾ ಮಂದಣ್ಣ?
ಕನ್ನಡ ಮೂಲದ ನಟಿ, ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮಾತನ್ನಾಡಿರುವ ಸಂದರ್ಶನದ ತುಣುಕೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರಿಗೆ ಕೇಳಿರುವ ಪ್ರಶ್ನೆಗಳಿಗೆಲ್ಲಾ ಅವರು 'ವಿಜಯ್' ಅನ್ನೋ ಹೆಸರಿನ ಮೂಲಕವೇ ಉತ್ತರ ಕೊಟ್ಟಿದ್ದಾರೆ.
212
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ನಟಿ ರಶ್ಮಿಕಾ ಮಂದಣ್ಣ ಅವರು ಬಹಳಷ್ಟು ಜನರು ಅಂದುಕೊಂಡಂತಿಲ್ಲ, ಅವರ ನಿಜವಾದ ವ್ಯಕ್ತಿತ್ವ ಬೇರೆಯೇ ಅಗಿದೆ ಎಂಬುದು ಅರಿವಿಗೆ ಬರುತ್ತದೆ. ಹಾಗಿದ್ರೆ ಅದರಲ್ಲಿ ಅವರೇನು ಹೇಳದ್ದಾರೆ? ನೋಡಿ..
312
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ನಟಿ ರಶ್ಮಿಕಾ ಮಂದಣ್ಣ ಅವರನ್ನು ಸಂದರ್ಶನ ಮಾಡುತ್ತಿರುವ ಸಂದರ್ಶಕರು 'ನಿಮ್ಮ ಲವ್, ಮ್ಯಾರೇಜ್ ಹಾಗೂ ಫ್ರೆಂಡ್‌ಶಿಪ್' ಯಾರ ಜೊತೆ ಅಂತ ಒಂದೇ ಶಬ್ದದಲ್ಲಿ ಹೇಳಿ ಎಂದಿದ್ದಾರೆ. ಅದಕ್ಕೆ ರಶ್ಮಿಕಾ ಅವರು ಸ್ವಲ್ಪ ಸಮಯ ತೆಗೆದುಕೊಂಡು ಉತ್ತರ ಕೊಟ್ಟಿದ್ದಾರೆ. ಆ ಉತ್ತರ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಕಾರಣ, ನಟಿ ರಶ್ಮಿಕಾ ಹೇಳಿರವ ಈ ಉತ್ತರವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ.
ಫ್ರೆಂಡ್‌ಶಿಪ್-ವಿಜಯ್ ದೇವರಕೊಂಡ, ಲವ್-ವಿಜಯ್ ಸೇತುಪತಿ ಹಾಗೂ ಮದುವೆ ವಿಜಯ್ ದಳಪತಿ ಎಂದಿದ್ದಾರೆ. ರಶ್ಮಿಕಾರ ಈ ಅನಿರೀಕ್ಷಿತ, ಸ್ವತಃ ಸಂದರ್ಶಕರು ಕೂಡ ನಟಿಯ ಈ ಉತ್ತರದಿಂದ ಶಾಕ್ ಆಗಿದ್ದಾರೆ.
512
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ಆದರೆ, ಬಳಿಕ ತಾವು ಈ ಉತ್ತರಗಳನ್ನು ತಮಾಷೆಗಾಗಿ ಹೇಳಿದ್ದು ಎಂಬಂತೆ ನಟಿ ರಶ್ಮಿಕಾ 'ಹೌವ್ ಡಿಡ್ ಐ ಗೋ' ಎಂದು ಹೇಳಿ ನಕ್ಕಿದ್ದಾರೆ.
612
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ಇದೇ ರಶ್ಮಿಕಾರ ಸ್ಪೆಷಾಲಿಟಿ ಎನ್ನಬಹುದು. ವಿಜಯ್ ದೇವರಕೊಂಡ ಜೊತೆಗಿನ ರಶ್ಮಿಕಾ ಸ್ನೇಹ ಅದೆಷ್ಟು ಗಟ್ಟಿಯಾಗಿದೆ ಎಂದರೆ, ಅವರು ಏನೇ ಹೇಳಿದರೂ ಅದರಿಂದ ಅವರಿಬ್ಬರ ಲವ್-ಫ್ರೆಂಡ್‌ಶಿಪ್‌ಗೆ ಯಾವುದೇ ಸಮಸ್ಯೆ ಆಗಲ್ಲ ಎನ್ನುವುದು ನಿಶ್ಚಿತ ಎನ್ನುವಷ್ಟು!
712
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ನಟಿ ರಶ್ಮಿಕಾ ಬೆಳೆದಿರುವ ರೀತಿಯೇ ಹಾಗಿದೆ. ಕನ್ನಡದಲ್ಲಿ 'ಕಿರಿಕ್' ಪಾರ್ಟಿ ಸಿನಿಮಾದ ಮೂಲಕ ಸಕ್ಸಸ್ ಕಂಡು, ಬಳಿಕ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಸ್ಟಾರ್ ನಟಿಯಾಗಿ, ಇದೀಗ ಬಾಲಿವುಡ್‌ನಲ್ಲೂ ನಂಬರ್ ಒನ್ ನಟಿಯಾಗಿ ಬೆಳದಿದ್ದಾರೆ.
812
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ಯಾರೂ ಊಹಿಸಲೂ ಆಗದಷ್ಟು ಎತ್ತರಕ್ಕೆ ಬೆಳದುನಿಂತಿರುವ ನಟಿ ರಶ್ಮಿಕಾರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಏಕೆಂದರೆ, ಕಡಿಮೆ ಸಮಯದಲ್ಲಿ ಅವರು ಏರಿರುವ ಎತ್ತರಕ್ಕೆ ಸರಿಸಾಟಿ ಯಾರು?
912
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ಕೆರಿಯರ್ ಶುರುವಿನಲ್ಲೇ ಆಗಿದ್ದ ಎಂಗೇಜ್‌ಮೆಂಟ್ ಮುರಿದುಹೋದರೂ ಬಳಿಕ, ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಬ್ಯುಸಿ ಆಗಿ ಇಂದು ಭಾರತದ ಟಾಪ್ ಒನ್ ನಟಿಯಾಗಿ ಬೆಳೆದುನಿಂತು ಮಾದರಿ ಎನ್ನಿಸಿದ್ದಾರೆ ರಶ್ಮಿಕಾ ಮಂದಣ್ಣ.
1012
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ಇಂದು, ಕರ್ನಾಟಕದ ಹೆಸರನ್ನು ನ್ಯಾಷನಲ್ ಮಟ್ಟದಲ್ಲಿ ಮೆರೆಸುತ್ತಿರುವ ಕೀರ್ತಿ ರಶ್ಮಿಕಾಗೂ ಸಲ್ಲಬೇಕು. ಅವರು ಎಲ್ಲೇ ಹೋದರೂ ಅವರನ್ನು 'ಕನ್ನಡದ ನಟಿ' ಎಂದೇ ಎಲ್ಲರೂ ಗುರುತಿಸುತ್ತಾರೆ. ಸಾಧನೆ ಅಂದರೆ ಇದೂ ಕೂಡ ಎನ್ನಲೇಬೇಕು.
1112
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
'ರಶ್ಮಿಕಾ ಬಗ್ಗೆ ಅದೂ ಇದೂ ಕೆಟ್ಟ ಕಾಮೆಂಟ್ ಮಾಡುತ್ತಿರುವವರು ಸೋಷಿಯಲ್ ಮೀಡಿಯಾ ಹುಳಗಳಾಗಿಯೇ ತೆವಳುತ್ತಿದ್ದಾರೆ. ಆದರೆ, ನಟಿ ರಶ್ಮಿಕಾ ಮಂದಣ್ಣ ಭಾರದತ ಟಾಪ್ ಒನ್ ನಟಿಯಾಗಿದ್ದಾರೆ' ಎಂದು ಹೇಳಿರುವ ಬಾಲಿವುಡ್ ಸಂದರ್ಶಕಿಯೊಬ್ಬರ ಮಾತು ಅದೆಷ್ಟು ನಿಜ ಅಲ್ವಾ?
1212
ವಿಜಯ್ ಹೆಸರಿನ ಹಿಂದೆ ಬಿದ್ದಿದ್ಯಾಕೆ ರಶ್ಮಿಕಾ ಮಂದಣ್ಣ?
ಛಾವಾ ಸಕ್ಸಸ್ ಬಳಿಕ ನಟಿ ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಚಿತ್ರವು ಬಿಡುಗಡೆ ಕಂಡು ಸೂಪರ್ ಹಿಟ್ ಆಗಿದೆ. ಇನ್ಮುಂದೆ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ. ಮುಂದೆ ಬಾಲಿವುಡ್ ಹ್ಯಾಂಡ್‌ಸಮ್ ಬಾಯ್ ಹೃತಿಕ್ ರೋಶನ್ ಜೊತೆಗೂ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ.