ನಟಿ ರಶ್ಮಿಕಾ ಮಂದಣ್ಣ ಅವರು ಶುದ್ಧ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಅವರು ಅಭಿಮಾನಿಗಳ ಆರೋಗ್ಯ ಮತ್ತು ಟ್ರಾಫಿಕ್ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಎಚ್ಚರಿಕೆಯಿಂದ ಇರಲು ಹೇಳಿದ್ದಾರೆ. ಆದರೆ, ಇದು ಕನ್ನಡಿಗರನ್ನು ಓಲೈಸುವ ಗಿಮಿಕ್ ಎಂದು ಕೆಲ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಕನ್ನಡಿಗರಿಂದ ಆಗಾಗ್ಗೆ ಟೀಕೆಗೆ ಒಳಗಾಗ್ತಿರೋ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಾ ಫುಲ್ ಖುಷಿಯಿಂದ ಇದ್ದಾರೆ. ಅವರ ಥಮಾ (Thama) ಚಿತ್ರದ ಭಾರಿ ಸಕ್ಸಸ್ ಬೆನ್ನಲ್ಲೇ ದೀಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಿರೋ ದಿ ಗರ್ಲ್ಫ್ರೆಂಡ್ (The Girl Friend) ಸಿನಿಮಾ ಇದೇ ನವೆಂಬರ್ 7ರಂದು ತೆರೆ ಕಾಣಲಿದೆ. ಇದರ ನಡುವೆಯೇ, ಶುದ್ಧ ಕನ್ನಡದಲ್ಲಿ ಮಾತನಾಡಿ, ಕನ್ನಡಿಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ!
26
ರಶ್ಮಿಕಾ ವಿಡಿಯೋ
ಹೌದು. ನಟಿಯ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ನಟಿ, ನೀವೆಲ್ಲರೂ ಚೆನ್ನಾಗಿದ್ದೀರಾ ಎನ್ನುವ ಮೂಲಕ ಮಾತು ಆರಂಭಿಸಿದ್ದಾರೆ.
36
ನಿಮ್ಮದೇ ಯೋಚ್ನೆ
ನಾನು ಆ್ಯಕ್ಚುವರಿ ನಿಮ್ಮೆಲ್ಲರ ಬಗ್ಗೆ ತುಂಬಾ ಯೋಚ್ನೆ ಮಾಡ್ತಾ ಇರ್ತೀನಿ. ನೀವು ಯಾವಾಗಲೂ ನನ್ನ ಮನಸಲ್ಲಿ ಇರ್ತೀರಾ, ಯೋಚನೆಯಲ್ಲಿ ಇರ್ತೀರಾ.. ಸೋ ನೀವು ಯಾವಗಲೂ ಖುಷಿಯಾಗಿ ಇರಬೇಕು, ಹ್ಯಾಪಿಯಾಗಿ ಇರಬೇಕು, ಸಂತೋಷವಾಗಿ, ಆರೋಗ್ಯವಾಗಿರಬೇಕು ಎಂದಿದ್ದಾರೆ ರಶ್ಮಿಕಾ
ತುಂಬಾ ಕೇರ್‌ಫುಲ್ ಆಗಿರಿ. ಹೊರಗಡೆ ವೈರಲ್ ಫೀವರ್ ಇದೆ, ತುಂಬಾ ಕೇರ್‌ಫುಲ್ ಆಗಿರಿ ಎಂದಿದ್ದಾರೆ. ಟ್ರಾಫಿಕ್ ಹೆಚ್ಚು ಇದೆ. ತುಂಬಾ ಕೇರ್‌ಫುಲ್ ಆಗಿರಿ. ಜಸ್ಟ್ ನೋಡಿಕೊಳ್ಳಿ ಎಂದಿದ್ದಾರೆ.
56
ಏಕಾಏಕಿ ಏನಾಯ್ತು?
ಏಕಾಏಕಿ ನಟಿಗೆ ಏನಾಯ್ತು ಎಂದು ಎಲ್ಲರಿಗೂ ಅಚ್ಚರಿ ಉಂಟಾಗಿದೆ. ಕೆಲ ದಿನಗಳ ಹಿಂದೆ ಫ್ಯಾನ್ಸ್ ಜೊತೆ ಪ್ರಶ್ನೋತ್ತರದಲ್ಲಿಯೂ ಕಾಣಿಸಿಕೊಂಡಿದ್ದ ರಶ್ಮಿಕಾ, ಫ್ಯಾನ್ಸ್ ಪ್ರಶ್ನೆಗಳಿಗೆ ಉತ್ತರಿಸಿದ್ದರು. ‘ನೀವು ಕನ್ನಡ ಸಿನಿಮಾನಲ್ಲಿ ನಟಿಸುತ್ತಿದ್ದೀರ’ ಎಂದು ಒಬ್ಬರು ಕೇಳಿದಾಗ ಇಲ್ಲ ಎಂದಿದ್ದರು ನಟಿ.
66
ಮರಾಠಿಯಲ್ಲಿಯೂ ಮಾತು
ಕೆಲ ದಿನಗಳ ಹಿಂದೆ ಮರಾಠಿಯಲ್ಲಿ ಮಾತನಾಡಿ ಮಹಾರಾಷ್ಟ್ರದವರ ಹತ್ತಿರವಾಗಿದ್ದರು. ಇದೀಗ ಕನ್ನಡಿಗರಿಗೆ ಹತ್ತಿರವಾಗಲು ಈ ಗಿಮಿಕ್ ಎನ್ನುತ್ತಿದ್ದಾರೆ ನೆಟ್ಟಿಗರು.