ಹಾರ್ದಿಕ್ - ನತಾಶಾ ಮಾತ್ರವಲ್ಲ 2024ರಲ್ಲಿ ಬೇರೆಯಾಗಿರುವ ಸೆಲೆಬ್ರಿಟಿ ಜೋಡಿಗಳಿವು!

Published : Jul 19, 2024, 04:59 PM IST

ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಡಿವೋರ್ಸ್ ಪಡೆಯಲ್ಲಿದ್ದಾರೆ. ಇದೀಗ ಸ್ವತಃ ಹಾರ್ದಿಕ್ ಪಾಂಡ್ಯ ನತಾಶ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದಿರುವುದಾಗಿ ಪಾಂಡ್ಯ ಖಚಿತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ಅವರಂತೆ  2024 ರಲ್ಲಿ ಬೇರೆಯಾಗಿರುವ ಸೆಲೆಬ್ರಿಟಿ ಜೋಡಿಗಳು ಇವರು..  

PREV
15
ಹಾರ್ದಿಕ್ - ನತಾಶಾ ಮಾತ್ರವಲ್ಲ   2024ರಲ್ಲಿ ಬೇರೆಯಾಗಿರುವ  ಸೆಲೆಬ್ರಿಟಿ ಜೋಡಿಗಳಿವು!

ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್:
ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಈ ಜೋಡಿ  ಅಗಸ್ತ್ಯ ಎಂಬ ಮಗನನ್ನು ಹೊಂದಿದ್ದಾರೆ.   ಈಗ 2024 ರಲ್ಲಿ ಇವರು ತಮ್ಮ ಮದುವೆಯನ್ನು ಮುರಿದುಕೊಂಡಿದ್ದಾರೆ.

25

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ:
ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದ ಬಾಲಿವುಡ್‌ನ ಫೇಮಸ್‌ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಹುಶಃ ಈಗ ಬೇರೆಯಾಗಿದ್ದಾರೆ. ಇದುವರೆಗೂ ಇಬ್ಬರೂ ಈ ಬಗ್ಗೆ ಮೌನ ಮುರಿದಿಲ್ಲ. ಆದರೆ ಈ ವರ್ಷ ಅರ್ಜುನ್ ಹುಟ್ಟುಹಬ್ಬಕ್ಕೆ  ಮಲೈಕಾ ಹಾಜರಾಗಿರಲಿಲ್ಲ. ಅಲ್ಲದೇ ಮಿಸ್ಟರಿ ಮ್ಯಾನ್ ಜೊತೆ ಮಲೈಕಾ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

35

ಇಶಾ ಡಿಯೋಲ್ ಮತ್ತು ಭಾರತ್ ತಖ್ತಾನಿ:
ಧರ್ಮೇಂದ್ರ ಮತ್ತು ಹೇಮಮಾಲಿನಿ ಪುತ್ರಿ ಇಶಾ ಡಿಯೋಲ್ ಮತ್ತು ಪತಿ ಭರತ್ ತಖ್ತಾನಿ  ದೀರ್ಘಕಾಲ ಒಟ್ಟಿಗೆ ಇದ್ದ ನಂತರ ಈ ವರ್ಷ ಬ್ರೇಕಪ್‌ ಮಾಡಿ ಕೊಂಡಿರುವುದು  ಅನೇಕರಿಗೆ ಆಘಾತವನ್ನುಂಟು ಮಾಡಿದೆ.

45

ಇಶಾ ಕೊಪ್ಪಿಕರ್ ಮತ್ತು ಟಿಮ್ಮಿ ನಾರಂಗ್:
ನಟಿ ಇಶಾ ಕೊಪ್ಪಿಕರ್ ಮತ್ತು ಉದ್ಯಮಿ ಟಿಮ್ಮಿ ನಾರಂಗ್ ಒಂದು ದಶಕಕ್ಕೂ ಹೆಚ್ಚು ಕಾಲದ ತಮ್ಮ ಮದುವೆಯನ್ನು  ಮುರಿದ್ದಾರೆ. ಈ ಜೋಡಿ  2024 ರ ಆರಂಭದಲ್ಲಿ  ತಮ್ಮ ಪ್ರತ್ಯೇಕತೆಯನ್ನು ಬಹಿರಂಗಪಡಿಸಿದರು. ಅವರು ತಮ್ಮ ಮಗಳು ರಿಯಾನ್ನಾ ಸಹ ಪೋಷಕರಾಗಿ ಮುಂದುವರೆಯಲಿದ್ದಾರೆ. 

55

ದಲ್ಜೀತ್ ಕೌರ್ ಮತ್ತು ನಿಖಿಲ್ ಪಟೇಲ್:
2024 ರಲ್ಲಿ ಟಿವಿ ನಟಿ ಡಾಲ್ಜಿತ್ ಕೌರ್ ಮತ್ತು ಅವರ ಪತಿ ನಿಖಿಲ್ ಪಟೇಲ್ ಬೇರೆಯಾಗಲು ನಿರ್ಧರಿಸಿದರು. ದಾಲ್ಜಿತ್ ಕೌರ್ ಖಾಸಗಿ ಸಮಾರಂಭದಲ್ಲಿ ಕೀನ್ಯಾ ಮೂಲದ ಉದ್ಯಮಿ ನಿಖಿಲ್ ಅವರನ್ನು ವಿವಾಹವಾಗಿದ್ದರು.

Read more Photos on
click me!

Recommended Stories