ಒಂದು ಕಾಲದಲ್ಲಿ ಅವಕಾಶಗಳಿಗೆ ಪರದಾಡುತ್ತಿದ್ದ ಈ ನಟಿಯ ನೆಟ್‌ವರ್ತ್‌ ಕೇಳಿದರೆ ಶಾಕ್‌ ಆಗುತ್ತೆ!

First Published | Jul 18, 2024, 5:10 PM IST

ಬಾಲಿವುಡ್‌ ನಟಿ  ಜಾಗತಿಕ ಸಂಚಲನ ಪ್ರಿಯಾಂಕಾ ಚೋಪ್ರಾ ಜುಲೈ 18 ರಂದು ತಮ್ಮ 42ನೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನಲ್ಲಿ ಹೃದಯಗಳನ್ನು ಗೆದ್ದ ನಂತರ, ಹಾಲಿವುಡ್‌ಗೆ ತೆರಳಿದ ನಟಿ ಅಲ್ಲಿಯೂ ಬಹು ಬೇಗ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾದರು. ಹಿಂದೊಮ್ಮೆ ಅವಕಾಶಗಳಿಗಾಗಿ ಪರದಾಡುತ್ತಿದ್ದ ಪ್ರಿಯಾಂಕ ಇಂದು ಕೋಟಿ ಕೋಟಿಗಳ ಒಡತಿ. ಪ್ರಿಯಾಂಕಾ ಚೋಪ್ರಾ ಅವರ ನೆಟ್‌ವರ್ತ್‌, ಆಸ್ತಿ ಹಾಗೂ ಸಂಭಾವನೆ ವಿವರ ಇಲ್ಲಿದೆ.   

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪ್ರಿಯ ಗಂಡ ನಿಕ್ ಜೋನಾಸ್ ಅವರೊಂದಿಗೆ ತಮ್ಮ ಜೀವನದ ಅತ್ಯುತ್ತಮ ಸಮಯ ಕಳೆಯುತ್ತಿದ್ದಾರೆ. ಆದರೆ ಪಿಸಿಯ  ಬಾಲಿವುಡ್‌ನಲ್ಲಿನ ಆರಂಭಿಕ ದಿನಗಳೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲು ಮುಳ್ಳುಗಳ ಕಠಿಣ ಧಾರಿ ಆಗಿತ್ತು. 

 ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಸವಾಲುಗಳ ಬಗ್ಗೆ ಯಾವಾಗಲೂ ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಎಷ್ಟು ಅಹಿತಕರ ಘಟನೆಗಳನ್ನು ಎದುರಿಸಬೇಕಾಯಿತು ಎಂಬುದರ ಕುರಿತು ಮಾತನಾಡಿದ್ದಾರೆ. 

Tap to resize

'ತನಗೆ ಏನೂ ಅಥವಾ ಯಾರೋ ಗೊತ್ತಿರಲಿಲ್ಲ. ನಿರ್ದೇಶಕರು ಬೈಯುತ್ತಿದ್ದರು, ಚಲನಚಿತ್ರಗಳಿಂದ ಕಾರಣವಿಲ್ಲದೆ ಹೊರಹಾಕಲಾಗುತ್ತಿತ್ತು'  ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. 

ಇತ್ತೀಚೆಗೆ ಹಾಲಿವುಡ್‌ನಲ್ಲಿ ತನ್ನ ಆರಂಭಿಕ ಹೋರಾಟದ ಸಮಯದಲ್ಲಿ ಭಯ ಮತ್ತು ಒಂಟಿತನವನ್ನು ಹೇಗೆ ಕಾಡುತ್ತಿತ್ತು ಎಂಬುದನ್ನೂ ನೆನಪಿಸಿಕೊಂಡರು.
 

ಆದರೆ ಹಿಂದೆ ಅವಕಾಶಗಳಿಗಾಗಿ ಪರದಾಟ ಪಟ್ಟ ಪ್ರಿಯಾಂಕಾ ಇಂದು ಜಾಗತಿಕ ಮನರಂಜನಾ ಉದ್ಯಮದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. 

ನಟಿಯ ಜೊತೆಗೆ ಯಶಸ್ವಿ ಉದ್ಯಮಿ ಮತ್ತು ಲೋಕೋಪಕಾರಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾರ ಪ್ರಭಾವ ಬೆಳ್ಳಿತೆರೆಯ ಆಚೆಗೂ ವಿಸ್ತರಿಸಿದೆ.

ಮಾಜಿ ಭಾರತ ಸುಂದರಿ ಪ್ರಿಯಾಂಕಾ ಚೋಪ್ರಾ ಅವರು  620 ಕೋಟಿ ರೂಪಾಯಿಗಳ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ.
 

ಆಕೆ ಪ್ರತಿ ಬಾಲಿವುಡ್ ಸಿನಿಮಾಗಳಿಗೆ ಸುಮಾರು 14 ಕೋಟಿ ರೂ ಸಂಭಾವನೆ ಪಡೆದರೆ, ಫೋರ್ಬ್ಸ್ ಪ್ರಕಾರ ಹಾಲಿವುಡ್ ಚಲನಚಿತ್ರಗಳಿಗಾಗಿ ಅವರು ಕ್ವಾಂಟಿಕೋದ ಪ್ರತಿ ಸೀಸನ್‌ಗೆ 20 ಕೋಟಿ ಫೀಸ್‌ ತೆಗೆದುಕೊಂಡಿದ್ದಾರೆ.

ಸಿನಿಮಾದ ಹೊರತಾಗಿ ಬ್ರ್ಯಾಂಡ್‌ ಅನುಮೋದನೆಗಳಿಂದ  ದೊಡ್ಡ ಮೊತ್ತದ ಆದಾಯ ಗಳಿಸುವ ನಟಿ ಪ್ರತಿ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಗೆ  ಸುಮಾರು 5 ಕೋಟಿ ಶುಲ್ಕ ವಿಧಿಸುತ್ತಾರೆ.

ಮುಂಬೈನ  ಜುಹುನಲ್ಲಿ ಪ್ರಿಯಾಂಕಾ  ವಿಶಾಲವಾದ ಮ್ಯಾನ್ಷನ್‌ ಹೊಂದಿದ್ದು, ಇದರ ಮೌಲ್ಯ ಸುಮಾರು 100 ಕೋಟಿ ಎಂದು ಅಂದಾಜಿಸಲಾಗಿದೆ.
 

ಈಗ ಅಮೆರಿಕದ LAನಲ್ಲಿ ಅವರು ವಾಸಿಸುತ್ತಿರುವ  ಬಂಗ್ಲೆಯು ಸುಮಾರು 20 ಮಿಲಿಯನ್ ಡಾಲರ್‌ ಬೆಲೆಯದ್ದು, ಅದಲ್ಲದೆ ಪಿಸಿ ಕ್ಯಾಲಿಫೋರ್ನಿಯಾದಲ್ಲಿ 144 ಕೋಟಿ ಮೌಲ್ಯದ ಮನೆಯೊಂದನ್ನು ಹೊಂದಿದ್ದಾರೆ. 
 

ಅಷ್ಟೇ ಅಲ್ಲ. ಪ್ರಿಯಾಂಕಾ ಚೋಪ್ರಾ ಗೋವಾದಲ್ಲಿ 20 ಕೋಟಿ ಮೌಲ್ಯದ ಒಂದು ಫನ್‌ ವಿಲ್ಲಾವನ್ನೂ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ.

Latest Videos

click me!