ಬಚ್ಚನ್ ಪರಿವಾರ ಐಶ್ವರ್ಯಾ ರೈ ನಡುವೆ ಬಿರುಕು! ಈ ನಟಿಯೊಂದಿಗೆ ಸಲುಗೆ ಹೆಚ್ಚಾಗಿದ್ದೇ ಸಮಸ್ಯೆಗೆ ಕಾರಣ!

First Published | Jul 18, 2024, 3:06 PM IST

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ 2007 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದಲ್ಲಿ ಬಿರುಕು ಮುಡಿದೆ ಎನ್ನುವ ಗಾಳಿ ಸುದ್ದಿಯೂ ಇದೆ. ಇದೀಗ ಇವರಿಬ್ಬರ ಕುಟುಂಬದ ನಡುವೆ ಬಿರುಕು ಮೂಡಲು ಬಾಲಿವುಡ್ ನ ಈ ನಟಿ ಕಾರಣ ಎನ್ನಲಾಗಿದೆ. 
 

ಐಶ್ವರ್ಯಾ ರೈ (Aishwarya Rai) ಮತ್ತು ಬಚ್ಚನ್ ಕುಟುಂಬದ ನಡುವೆ ಬಿರುಕು ಮೂಡಿದೆ ಅನ್ನೋದು ಈಗಾಗಲೇ ಎಲ್ಲರಿಗೂ ಗೊತ್ತಿರೋ ವಿಷ್ಯ! ಇಲ್ಲಿಯವರೆಗೆ,, ಐಶ್ವರ್ಯಾ ಅಥವಾ ಅಭಿಷೇಕ್ ಅವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಆದರೆ ಅವರು ಒಟ್ಟಿಗೆ ಕಾಣಿಸಿಕೊಂಡಿಲ್ಲ, ಸೋಶಿಯಲ್ ಮೀಡಿಯಾದಲ್ಲೂ ದೂರವಿದ್ದಾರೆ. ಈ ಎಲ್ಲಾ ವಿಷ್ಯಗಳನ್ನ ನೋದಿದಾಗ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಅನ್ನೋದು ಖಾತ್ರಿಯಾಗುತ್ತೆ.
 

ಇತ್ತೀಚೆಗೆ, ಇಡೀ ಬಚ್ಚನ್ ಕುಟುಂಬವು (Bacchan Family) ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಭಾಗವಹಿಸಿತು, ಆದರೆ ಐಶ್ವರ್ಯಾ ರೈ ನಂತರ ತಮ್ಮ ಮಗಳು ಆರಾಧ್ಯ  ಇಬ್ಬರು ಬೇರೆಯಾಗಿದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ವಿವಾಹ ಸಮಾರಂಭದ ವೀಡಿಯೊ ಕೂಡ ವೈರಲ್ ಆಗುತ್ತಿದೆ, ಇದರಲ್ಲಿ ಐಶ್ವರ್ಯಾ ಬಾಲಿವುಡ್ ಟಾಪ್ ನಟಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ನಟಿಯೊಂದಿಗೆ ಐಶ್ವರ್ಯ ಕ್ಲೋಸ್ ಆಗಿರೋದ್ರಿಂದಾನೆ, ಅತ್ತೆ ಜಯಾ ಬಚ್ಚನ್ ಐಶ್ವರ್ಯಾ ಮೇಲೆ ಕೋಪಗೊಂಡಿದ್ದಾರೆ ಮತ್ತು ಅದಕ್ಕಾಗಿಯೇ ಕುಟುಂಬದಲ್ಲಿ ಬಿರುಕು ಮೂಡಿದೆ ಅಂತಿದ್ದಾರೆ ಅಭಿಮಾನಿಗಳು. 
 

Tap to resize

ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಶ್ವೇತಾ ನಂದಾ, ನಿಖಿಲ್ ನಂದಾ, ನವ್ಯಾ ನಂದಾ ಮತ್ತು ಅಗಸ್ತ್ಯ ನಂದಾ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಅವರು ಗೇಟ್ ಬಳಿ ಒಟ್ಟಿಗೆ ಪೋಸ್ ನೀಡಿದರು.

ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ಮತ್ತು ಆರಾಧ್ಯ ಅವರ ಅನುಪಸ್ಥಿತಿ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಬಚ್ಚನ್ ಕುಟುಂಬದ ವಿರುದ್ಧ ಕಿಡಿ ಕಾರುತ್ತಿದ್ದು, ಐಶ್ವರ್ಯಾ ರೈಯವರನ್ನು ಹೊಗಳಲು ಪ್ರಾರಂಭಿಸಿದರು. ಜೊತೆಗೆ ಅಭಿಷೇಕ್ ಬಚ್ಚನ್ ವಿರುದ್ಧವೂ ಧ್ವನಿ ಕೇಳಿ ಬಂದಿದೆ. 
 

ಬಚ್ಚನ್ ಕುಟುಂಬ ಕಾರ್ಯಕ್ರಮಕ್ಕೆ ಹಾಜರಾದ ಕೆಲವು ಗಂಟೆಗಳ ನಂತರ, ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡರು. ಐಶ್ ಮತ್ತು ಬಚ್ಚನ್ ಕುಟುಂಬದ ಮಧ್ಯೆ ಬಿರುಕು ದೊಡ್ಡದಾಗಿಯೇ ಇದೆ ಅನ್ನೋದು ಆವಾಗ ಸ್ಪಷ್ಟವಾಯ್ತು. ಇದಾದ ನಂತ್ರ ಪಾರ್ಟಿ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ (Abhishek Bacchan) ಒಟ್ಟಿಗೆ ಕಾಣಿಸಿಕೊಂಡರು, ಇದನ್ನ ನೋಡಿದ್ಮೇಲೇನೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು. ಆದಾಗ್ಯೂ, ಐಶ್ ತನ್ನ ಪತಿಯನ್ನು ಹೊರತುಪಡಿಸಿ  ಕುಟುಂಬದ ಬೇರೆ ಯಾವ ಸದಸ್ಯರೊಂದಿಗೂ ಕಾಣಿಸಿಕೊಂಡಿಲ್ಲ.
 

ರೇಖಾ ಜೊತೆ ನಗು ನಗುತ್ತಾ ಕಾಣಿಸಿಕೊಂಡ ಐಶ್ವರ್ಯಾ
ಇದಲ್ಲದೆ, ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಐಶ್ವರ್ಯಾ ಹಿರಿಯ ನಟಿ ರೇಖಾ (bollywood actress Rekha)  ಅವರೊಂದಿಗೆ ಕಾಣಿಸಿಕೊಂಡರು. ಇಬ್ಬರೂ ಭೇಟಿಯಾಗಿ, ತಬ್ಬಿಕೊಂಡರು ಮಾತ್ರವಲ್ಲ, ರೇಖಾ ಐಶ್ವರ್ಯ ಮತ್ತು ಆರಾಧ್ಯಾ ಮೇಲೆ ಸಾಕಷ್ಟು ಪ್ರೀತಿಯನ್ನು ಸುರಿಸಿದರು. ಐಶ್ವರ್ಯಾ ಮತ್ತು ರೇಖಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2019 ರಲ್ಲಿ, ಉರ್ದು ಕವಿ ಕೈಫಿ ಅಜ್ಮಿ ಅವರ 100 ನೇ ಜನ್ಮ ದಿನಾಚರಣೆಯಲ್ಲಿ ಇಬ್ಬರೂ ಕೈ ಕೈ ಹಿಡಿದು ನಡೆಯುತ್ತಿರುವುದು ಕಂಡುಬಂದಿದೆ.

ಭಿನ್ನಾಭಿಪ್ರಾಯಕ್ಕೆ ಇದೇ ಕಾರಣಾನ?
ರೇಖಾ ಮತ್ತು ಅಮಿತಾಬ್ ಬಚ್ಚನ್ ನಡುವೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಬಚ್ಚನ್ ಕುಟುಂಬ ಮತ್ತು ರೇಖಾ ನಡುವೆ ಅಂತರವಿರಲು ಇದು ಕಾರಣವಾಗಿದೆ. ವಿಶೇಷವಾಗಿ ಜಯಾ ಬಚ್ಚನ್ ರೇಖಾರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಐಶ್ವರ್ಯಾ ಅವರು ರೇಖಾ ಜೊತೆ ಕ್ಲೋಸ್ ಆಗಿರೋದು ಬಚ್ಚನ್ ಕುಟುಂಬಕ್ಕೆ ಅದರಲ್ಲೂ ಜಯಾ ಬಚ್ಚನ್ ಗೆ ಸಹಿಸಲು ಸಾಧ್ಯ ಆಗ್ತಾ ಇಲ್ಲ,  ಐಶ್ ಮತ್ತು ಬಚ್ಚನ್ ಕುಟುಂಬದಲ್ಲಿನ ಬಿರುಕಿಗೆ ರೇಖಾ ಅವರೇ ಕಾರಣವಾಗಿರಬಹುದು ಎನ್ನುತ್ತಿದ್ದಾರೆ ಜನ. 

Latest Videos

click me!